
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ನೀರಿನ ಕೊರತೆಯಾಗಿದೆ. ಕಾವೇರಿ, ಹೇಮಾವತಿ, ಮತ್ತಿತರ ನದಿಗಳು ಬತ್ತಿ ನೀರಿಗೆ ಹಾಹಾಕಾರ ಆಗಲಿದೆ. ಆದುದರಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಸೆಪ್ಟಂಬರ್ 29 ರಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ ಎಂದು ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಹೊರಟ್ಟಿ ರಘು ತಿಳಿಸಿದ್ದಾರೆ.
ಇದನ್ನೂ ಓದಿ; psi ನೇಮಕಾತಿ ಹಗರಣ; ಅಮೃತ್ ಪೌಲ್‌ಗೆ ಹೈಕೋರ್ಟ್ ನಿಂದ ಜಾಮೀನು

ಕೊಟ್ಟಿಗೆಹಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಂದೆ ನೀರಿಗೆ ಬರ ಉಂಟಾಗಲಿದೆ. ನೆಲ-ಜಲ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದರಿಂದ ಅದನ್ನು ಶೀಘ್ರವೇ ನಿಲ್ಲಿಸಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಮಳೆಯು ಮಧ್ಯಂತರ ಮುಗಿದು ಕೊನೆ ಹಂತಕ್ಕೆ ಬಂದಿದೆ. ಹೀಗಿರುವಾಗ ನಮಗೆ ಕುಡಿಯಲು ನೀರು ಇಲ್ಲದ ಸಮಯದಲ್ಲಿ ಬೇರೆ ರಾಜ್ಯಕ್ಕೆ ನೀರು ಬಿಟ್ಟರೆ ರಾಜ್ಯ ಸಂಕಷ್ಟಕ್ಕೆ ಗುರಿಯಾಗಬಹುದು. ವಿವಿಧ ಸಂಘಟನೆಗಳು ಇದೇ 29 ರಂದು ನಡೆಯುವ ನೀರಿನ ಹೋರಾಟಕ್ಕೆ ಹಾಗೂ ಬಂದ್ ಗೆ ವಿವಿಧ ಸಂಘಟನೆಗಳು ಕೈಜೋಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದರು.

ಇದನ್ನೂ ಓದಿ; ಗೂಗಲ್‌ಗೆ 25ರ ಸಂಭ್ರಮ; ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್ ಎಂಜಿನ್
ಕೊಟ್ಟಿಗೆಹಾರ, ಬಣಕಲ್, ಬಾಳೂರು ಹೋಬಳಿಯ ಎಲ್ಲಾ ಭಾಗದ ವಿವಿಧ ಸಂಘಟನೆಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟ ಉತ್ತಮ ರೀತಿಯಲ್ಲಿ ಶಾಂತಿಯುತವಾಗಿ ನಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಕರವೇ ಬಣಕಲ್ ಹೋಬಳಿ ಅಧ್ಯಕ್ಷ ಯಾಕೂಬ್, ಅಜೀಜ್, ಫಾರೂಕ್ ಮತ್ತಿತರರು ಇದ್ದರು.
ಚಿಕ್ಕಮಗಳೂರು: ರಾಷ್ಟ್ರಮಟ್ಟದ ಎನ್‌ಸಿಸಿ ಶಿಬಿರಕ್ಕೆ ಕಾಫಿನಾಡಿನ ಹುಡುಗಿ ಆಯ್ಕೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರ ಮಟ್ಟದ ಎನ್‌ಸಿಸಿ ಶಿಬಿರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದದ ಮಾನ್ಯ ಕೆಂಚೈನ್ ಡಿ.ಜೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಎನ್‌ಸಿಸಿ ಶಿಬಿರ- ಆಲ್ ಇಂಡಿಯಾ ವಾಯು ಸೈನಿಕ್ ಕ್ಯಾಂಪ್ ಗೆ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ನಿಂದ ಮಾನ್ಯ ಆಯ್ಕೆಯಾಗಿದ್ದಾರೆ. ಇವರು ನ್ಯಾಯಾಧೀಶರಾದ ಜಯಪ್ರಕಾಶ್ ದೇವವೃಂದ ಹಾಗೂ ವಿನುತಜಯಪ್ರಕಾಶ್ ರವರ ಪುತ್ರಿಯಾಗಿದ್ದು, ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದೀಗ ಶಿಬಿರದಲ್ಲಿ ಸ್ಕೀಟ್ ಶೂಟಿಂಗ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಕೊಪ್ಪ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ | ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ಮನವಿ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಅಗಳಗಂಡಿ ಗ್ರಾಮ, ಇಷ್ಟು ದಿನ ಮೂಲಸೌಕರ್ಯಗಳಿಗೆ ಹೋರಾಟ ನಡೆಸಿದ್ದಾಯ್ತು. ಈಗ ಸ್ವಚ್ಛವಾದ ಗಾಳಿಗೂ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿಯವರು ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಕಂದಾಯ ಅಧಿಕಾರಿಗಳ ಕಚೇರಿ, ಅಂಚೆ ಕಛೇರಿ ಹಾಗೂ ಇಲ್ಲಿ ದೇವಸ್ಥಾನ ಸಹ ಇದ್ದು, ಗ್ರಾಮ ಪಂಚಾಯಿತಿ ಆವರಣದ ಮುಖ್ಯ ದ್ವಾರದ ಪಕ್ಕದಲ್ಲಿ ತಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುತ್ತಿದ್ದಾರೆ. ಇದು ಅವೈಜ್ಞಾನಿಕ ಕಾಮಗಾರಿಯು ಆಗಿದ್ದು ಈ ಕಾಮಗಾರಿಯ ಬಗ್ಗೆ ಯಾವುದೇ ಗ್ರಾಮಸಭೆಯಲ್ಲಿ ತೀರ್ಮಾನವಾಗದೆ ಕೇವಲ ಕೆಲವು ಸದಸ್ಯರುಗಳ ಸ್ವಹಿತಾಸಕ್ತಿಯ ಕಾಮಗಾರಿಯಾಗಿದೆ.
ಕಛೇರಿಗಳಿಗೆ ಬರುವ ಸಾರ್ವಜನಿಕರು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಚಿಕ್ಕ ಮಕ್ಕಳು ಓದುವ ಅಂಗನವಾಡಿ, ಇದರ ಜೊತೆಗೆ ದೇವಸ್ಥಾನವೂ ಇದೆ. ಹೀಗಾಗಿ ಇವುಗಳ ಸಮೀಪದಲ್ಲಿಯೇ ನಿರ್ಮಾಣ ಮಾಡುವುದು ಬೇಡ ತಕ್ಷಣವೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು PDO ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಕೆರೆ ಮನೆ, ಅರೇಹಳ್ಳ ವಾಸು,ಶಾಂತ ಕುಮಾರ್ ಜೈನ್,ಕೃಪಾಲ, ಮಂಜುನಾಥ್, ಹರಿಪ್ರಸಾದ್ ಬಾಚಿನಕುಡಿಗೆ ಇನ್ನಿತರರು ಇದ್ದರು













