ಕಾಂಗ್ರೇಸ್ ನತ್ತ ಮುಖ ಮಾಡಿದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ

ಕಳೆದ ಕೆಲ ದಿನಗಳಿಂದ ಮೂಡಿಗೆರೆಯ ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿ (mp kumarswamy) ಕಾಂಗ್ರೇಸ್ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

 

ಇದನ್ನೂ ಓದಿ; psi ನೇಮಕಾತಿ ಹಗರಣ; ಅಮೃತ್ ಪೌಲ್‌ಗೆ ಹೈಕೋರ್ಟ್‌ ನಿಂದ ಜಾಮೀನು

ಆಪರೇಷನ್ ಟಾಸ್ಕ್ ನ ಮೊದಲ ಭಾಗವಾಗಿ ಶಿರಹಟ್ಟಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ಮೂಡಿಗೆರೆಯ ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಇಡಲಾಗಿದೆ. ಇಬ್ಬರು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಾಜಿ ಶಾಸಕರಾಗಿದ್ದು, ಟಿಕೆಟ್ ಮಿಸ್ ಆಗಿದ್ದರಿಂದ ರಾಮಪ್ಪ ಅವರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಅಲ್ಲದೇ, ಕುಮಾರಸ್ವಾಮಿ ಅವರು ಕೂಡ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಹಾದಿ ತಿಳಿದಿವೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ್ದರಂತೆ.

 

ಇದನ್ನೂ ಓದಿ; ಗೂಗಲ್‌ಗೆ 25ರ ಸಂಭ್ರಮ; ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್ ಎಂಜಿನ್

ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (mp kumarswamy) ಕಾಂಗ್ರೇಸ್ ಸೇರುವುದು ಖಚಿತ!:
ಕುಮಾರಸ್ವಾಮಿಯವರು ಸಹ ಕಾಂಗ್ರೇಸ್ ಸೇರುವುದು ಖಚಿತವಾಗಿದೆ. ಈಗಾಗಲೇ ಬಿ.ಜೆ.ಪಿ. ಮುಖಂಡರೊಂದಿಗೆ ಅವರು ಮುನಿಸಿಕೊಂಡು ಹೊರನಡೆದಿರುವುದರಿಂದ ಮತ್ತು ವೈಯುಕ್ತಿಕ ಟೀಕೆಯ ಮಟ್ಟಕ್ಕೆ ಭಿನ್ನಾಭಿಪ್ರಾಯಗಳು ಇರುವುದರಿಂದ ಅವರು ಮತ್ತೆ ಬಿ.ಜೆ.ಪಿ. ಜೊತೆ ಸೇರಲು ಸೂಕ್ತ ವಾತಾವರಣ ಕಂಡುಬರುತ್ತಿಲ್ಲ. ಮತ್ತೊಂದೆಡೆ ಮೂಡಿಗೆರೆಯಲ್ಲಿ ಕಾಂಗ್ರೇಸ್ ನ ನಯನ ಮೋಟಮ್ಮ ಅವರು ಶಾಸಕರಾಗಿರುವುದರಿಂದ ಕುಮಾರಸ್ವಾಮಿಯವರಿಗೆ ಕ್ಷೇತ್ರದಲ್ಲಿ ಭವಿಷ್ಯದಲ್ಲಿಯೂ ಯಾವುದೇ ಅವಕಾಶಗಳು ದೊರಕುವುದು ಕಷ್ಟ. ಹಾಗಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರಿ ರಾಜ್ಯಮಟ್ಟದಲ್ಲಿ ಸಕ್ರಿಯವಾಗಿರಲು ಅವರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದೆ. ಆದರೆ, ಯಾವಾಗ ಸೇರುತ್ತಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಎನ್‌ಸಿಸಿ ಶಿಬಿರಕ್ಕೆ ಕಾಫಿನಾಡಿನ ಹುಡುಗಿ ಆಯ್ಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರ ಮಟ್ಟದ ಎನ್‌ಸಿಸಿ ಶಿಬಿರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದದ ಮಾನ್ಯ ಕೆಂಚೈನ್ ಡಿ.ಜೆ ಆಯ್ಕೆಯಾಗಿದ್ದಾರೆ.

 

ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಎನ್‌ಸಿಸಿ ಶಿಬಿರ- ಆಲ್ ಇಂಡಿಯಾ ವಾಯು ಸೈನಿಕ್ ಕ್ಯಾಂಪ್ ಗೆ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ನಿಂದ ಮಾನ್ಯ ಆಯ್ಕೆಯಾಗಿದ್ದಾರೆ. ಇವರು ನ್ಯಾಯಾಧೀಶರಾದ ಜಯಪ್ರಕಾಶ್ ದೇವವೃಂದ ಹಾಗೂ ವಿನುತಜಯಪ್ರಕಾಶ್ ರವರ ಪುತ್ರಿಯಾಗಿದ್ದು, ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇದೀಗ ಶಿಬಿರದಲ್ಲಿ ಸ್ಕೀಟ್ ಶೂಟಿಂಗ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ಕೊಪ್ಪ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ | ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ಮನವಿ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಅಗಳಗಂಡಿ ಗ್ರಾಮ, ಇಷ್ಟು ದಿನ ಮೂಲಸೌಕರ್ಯಗಳಿಗೆ ಹೋರಾಟ ನಡೆಸಿದ್ದಾಯ್ತು. ಈಗ ಸ್ವಚ್ಛವಾದ ಗಾಳಿಗೂ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿಯವರು ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಕಂದಾಯ ಅಧಿಕಾರಿಗಳ ಕಚೇರಿ, ಅಂಚೆ ಕಛೇರಿ ಹಾಗೂ ಇಲ್ಲಿ ದೇವಸ್ಥಾನ ಸಹ ಇದ್ದು, ಗ್ರಾಮ ಪಂಚಾಯಿತಿ ಆವರಣದ ಮುಖ್ಯ ದ್ವಾರದ ಪಕ್ಕದಲ್ಲಿ ತಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುತ್ತಿದ್ದಾರೆ. ಇದು ಅವೈಜ್ಞಾನಿಕ ಕಾಮಗಾರಿಯು ಆಗಿದ್ದು ಈ ಕಾಮಗಾರಿಯ ಬಗ್ಗೆ ಯಾವುದೇ ಗ್ರಾಮಸಭೆಯಲ್ಲಿ ತೀರ್ಮಾನವಾಗದೆ ಕೇವಲ ಕೆಲವು ಸದಸ್ಯರುಗಳ ಸ್ವಹಿತಾಸಕ್ತಿಯ ಕಾಮಗಾರಿಯಾಗಿದೆ.

ಕಛೇರಿಗಳಿಗೆ ಬರುವ ಸಾರ್ವಜನಿಕರು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಚಿಕ್ಕ ಮಕ್ಕಳು ಓದುವ ಅಂಗನವಾಡಿ, ಇದರ ಜೊತೆಗೆ ದೇವಸ್ಥಾನವೂ ಇದೆ. ಹೀಗಾಗಿ ಇವುಗಳ ಸಮೀಪದಲ್ಲಿಯೇ ನಿರ್ಮಾಣ ಮಾಡುವುದು ಬೇಡ ತಕ್ಷಣವೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು PDO ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ ಕೆರೆ ಮನೆ, ಅರೇಹಳ್ಳ ವಾಸು,ಶಾಂತ ಕುಮಾರ್ ಜೈನ್,ಕೃಪಾಲ, ಮಂಜುನಾಥ್, ಹರಿಪ್ರಸಾದ್ ಬಾಚಿನಕುಡಿಗೆ ಇನ್ನಿತರರು ಇದ್ದರು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.