ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಮನೆಯ ಗೇಟ್ ಬಳಿಯೇ ಚಿರತೆ ಸಂಚಾರ ಮಾಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ!; FSI ಗೆ ಸೂಚಿಸಿದ ಆಹಾರ ಇಲಾಖೆ

ಹಳುವಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಚಿರತೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು, ಇದೀಗ ಮನೆಯ ಗೇಟ್ ಬಳಿ ಚಿರತೆ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಪಂಪ್ಸೆಟ್ ಹೊಂದಿರುವವರಿಗೆ ಹೊಸ ಆದೇಶ ಹೊರಡಿಸಿದ ಇಂಧನ ಇಲಾಖೆ; ಏನದು ಹೊಸ ಆದೇಶ, ಇಲ್ಲಿದೆ ನೋಡಿ
ಗ್ರಾಮದಲ್ಲಿ ಚಿರತೆ ಸಂಚಾರ ಮಾಡುತ್ತಿರುವ ಕುರಿತು ಹಲವಾರು ಬಾರಿ ಅರಣ್ಯ ಇಲಾಖೆಗೆ ಮನವಿ ನೀಡಿದ್ರೂ ಸ್ಪಂದಿಸಿಲ್ಲ ಎಂದು ಕಳಸ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನಾದರೂ ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.












