ಕಳಸ: (ನ್ಯೂಸ್ ಮಲ್ನಾಡ್ ವರದಿ) ಅನಾರೋಗ್ಯ ಪೀಡಿತ ವೃದ್ಧೆಯನ್ನ 3 ಕಿ.ಮೀ. ಹೊತ್ತುಕೊಂಡು ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ; Bigg Boss Kannada:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್!

ಲಕ್ಷ್ಮಿ ಎಂಬ 70ರ ವೃದ್ಧೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ಪರದಾಡುವಂತಾಗಿತ್ತು. ರಸ್ತೆಯಿಲ್ಲದ ಕಾರಣ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆಯೇ ಹಳ್ಳಿಗರು ವೃದ್ಧೆಯನ್ನು ಹೊತ್ತು ಸಾಗಿದರು.
ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ, ಕಟ್ಟೆಮನೆ, ಕೋಣೆಮನೆ ಸೇರಿ 10ಕ್ಕೂ ಹೆಚ್ಚು ಹಳ್ಳಿಗೆ ರಸ್ತೆ ಇಲ್ಲ, ದಶಕಗಳಿಂದಲೂ ಭದ್ರಾ ನದಿಯ ತೂಗು ಸೇತುವೆ ಮೇಲೆ ಜನರ ಜೀವನ ಸಾಗುತ್ತಿದೆ. ಹಳ್ಳಿಯಿಂದ ಮುಖ್ಯ ರಸ್ತೆಗೆ ಬರಲು 3 ಕಿ.ಮೀ. ಸಾಗಬೇಕು. ಬೇಸಿಗೆಯಲ್ಲಿ ಭದ್ರೆಯ ಒಡಲಲ್ಲೇ ಗಾಡಿಗಳು ಓಡಾಡುತ್ವೆ, ಮಳೆಗಾಲದಲ್ಲಿ ಆಗಲ್ಲ.
ಇದನ್ನೂ ಓದಿ; SSLC ಫೇಲಾದ್ರೂ ಕ್ಲಾಸ್ ಗೆ ಹೋಗಬಹುದು; ರಾಜ್ಯ ಸರ್ಕಾರ ಮಹತ್ವದ ಆದೇಶ
ಭದ್ರಾ ನದಿಗೆ ಸೇತುವೆ ನಿರ್ಮಿಸಿಕೊಡುವಂತೆ 7 ದಶಕಗಳಿಂದ ಮನವಿ ಮಾಡುತ್ತಿದ್ದು, ಅಧಿಕಾರಿಗಳು, ರಾಜಕಾರಣಿಗಳ ಕಿವಿಗೆ ಮಾತ್ರ ಹಳ್ಳಿಗರ ಸಂಕಷ್ಟ ಕೇಳುತ್ತಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು ಗ್ರಾಮಸ್ಥರ ಮನವಿಗೆ ಸ್ಪಂದಿಸಬೇಕಿದೆ.

ಇದನ್ನೂ ಓದಿ; BBK 11 ನಲ್ಲಿ ಹೊಸ ಅಧ್ಯಾಯ!; ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಹೆಲ್ & ಹೆವೆನ್ ಕಾನ್ಸೆಪ್ಟ್; ಕಿಚ್ಚ ಸುದೀಪ್ ಹೇಳಿದ್ದೇನು?












