ಶೃಂಗೇರಿ: ಸಿಎಂ ರಾಜೀನಾಮೆಗೆ ಆಗ್ರಹಿಸಿ ಭಾಜಪಾ ಕಾರ್ಯಕರ್ತರಿಂದ ಪ್ರತಿಭಟನೆ

ಶೃಂಗೇರಿ:  (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿ ಇಂದು ಶೃಂಗೇರಿಯ ಕುರುಬಕೇರಿ ವೃತ್ತದಲ್ಲಿ ಭಾಜಪಾ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.


ಇದನ್ನೂ ಓದಿ; Bigg Boss Kannada:ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್!


ರಾಜ್ಯದ ಮುಖ್ಯಮಂತ್ರಿ ಮೈತುಂಬಾ ಭ್ರಷ್ಟಾಚಾರದ ಕಪ್ಪು ಚುಕ್ಕಿ ಇದ್ದರು ಪ್ರಾಮಾಣಿಕ ಎಂಬಂತೆ ಜನರ ಎದುರಿಗೆ ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಈಗ ತಾಲಿಬಾನ್ ಸರ್ಕಾರದಂತೆ ವರ್ತಿಸುತ್ತಿದೆ. ರಾಜ್ಯದ ಅಂಗನವಾಡಿ ಶಿಕ್ಷಕಿಯರಿಗೆ ಉರ್ದು ಕಡ್ಡಾಯ ಮಾಡಿದೆ. ರಾಜ್ಯ ಸರ್ಕಾರ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದೆ. ಶೃಂಗೇರಿ ತಾಲ್ಲೂಕಿನಲ್ಲಿ ಅಭಿವೃದ್ದಿ ಸಂಪೂರ್ಣ ಶೂನ್ಯವಾಗಿದೆ. ಕ್ಷೇತ್ರದಲ್ಲಿ ರಸ್ತೆಗಳೆಲ್ಲ ಗುಂಡಿ ರಸ್ತೆಗಳಾಗಿದೆ. ಹಿಂದೆ ಡಿ. ಎನ್ ಜೀವರಾಜ್ ಅವರು ಶಾಸಕರು ಆಗಿದ್ದಾಗ ಕಾಂಗ್ರೆಸ್ ಸರ್ಕಾರವಿದ್ದರೂ ರಸ್ತೆಗಳು ಗುಂಡಿ ಬಿದ್ದಿರಲಿಲ್ಲ ಎಂದು ಭಾಜಪಾ ತಾಲೂಕು ಅಧ್ಯಕ್ಷ ತಲಾಗಾರು ಉಮೇಶ್ ಹೇಳಿದರು.


ಇದನ್ನೂ ಓದಿ; SSLC ಫೇಲಾದ್ರೂ ಕ್ಲಾಸ್ ಗೆ ಹೋಗಬಹುದು; ರಾಜ್ಯ ಸರ್ಕಾರ ಮಹತ್ವದ ಆದೇಶ


ಪ್ರತಿಭಟನೆಯಲ್ಲಿ ವೇಣುಗೋಪಾಲ್, ಶೃಂಗೇರಿ ಶಿವಣ್ಣ, ಹರೀಶ್ ಶೆಟ್ಟಿ, ನೂತನ್ ಕಿಗ್ಗ, ಕಚ್ಚೋಡಿ ಶ್ರೀನಿವಾಸ್ ಹಾಗೂ ಹಲವಾರು ಕಾರ್ಯಕರ್ತರು ಇದ್ದರು.


ಇದನ್ನೂ ಓದಿ; BBK 11 ನಲ್ಲಿ ಹೊಸ ಅಧ್ಯಾಯ!; ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಹೆಲ್ & ಹೆವೆನ್ ಕಾನ್ಸೆಪ್ಟ್; ಕಿಚ್ಚ ಸುದೀಪ್ ಹೇಳಿದ್ದೇನು?


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.