ಕಡೂರು: (ನ್ಯೂಸ್ ಮಲ್ನಾಡ್ ವರದಿ) ಖಾಸಗಿ ಬ್ಯಾಂಕ್ ಕಿರುಕುಳಕ್ಕೆ ಬೇಸತ್ತು ಮನೆಗೆ ಬೀಗ ಹಾಕಿ ಊರೇಬಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಆಹಾರ ಇಲಾಖೆಯಿಂದ ಬಿಗ್ ಅಪ್ಡೇಟ್; ಪಡಿತರ ಚೀಟಿ ಹೊಂದಿರುವವರು ಓದಲೇ ಬೇಕಾದ ಸುದ್ದಿ ಇಲ್ಲಿದೆ ನೋಡಿ

ಎಮ್ಮೆದೊಡ್ಡಿ ಗ್ರಾಮದ ಶ್ರೀನಿವಾಸ್ ಎನ್ನುವವರು ಮನೆ ನಿರ್ಮಾಣಕ್ಕಾಗಿ IDFC ಬ್ಯಾಂಕಿನ ಕಡೂರು ಶಾಖೆಯಲ್ಲಿ 8 ವರ್ಷಗಳ ಕಾಲ EMI ರೂಪದಲ್ಲಿ 7 ಲಕ್ಷ ಲೋನ್ ಮಾಡಿದ್ದರು. ಮೂರು ವರ್ಷಗಳಿಂದ ಕಂತು ಕಟ್ಟಿದ ಶ್ರೀನಿವಾಸ್ ಅವರು ಅರ್ಥಿಕ ಸಂಕಷ್ಟದಿಂದ ಕಳೆದ ನಾಲ್ಕು ತಿಂಗಳಿನಿಂದ EMI ಕಟ್ಟಿರಲಿಲ್ಲ. ಬ್ಯಾಂಕಿನ ಸಿಬ್ಬಂದಿಗಳು ತಿಂಗಳ ಕಂತು ಬಡ್ಡಿ ಕಟ್ಟುವಂತೆ ಮನೆ ಬಾಗಿಲಿಗೆ ಬಂದು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಮನೆ ಹರಾಜು ಹಾಕುವುದಾಗಿ ಬೆದರಿಕೆ ಆರೋಪ ಕೂಡ ಕೇಳಿ ಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಯರ್ ದರ ಮತ್ತೆ ಹೆಚ್ಚಳ; ಬೆಲೆ ಎಷ್ಟಾಗಿದೆ ನೋಡಿ!
ಮರ್ಯಾದೆಗೆ ಅಂಜಿ ಊರೇಬಿಟ್ಟ ಕುಟುಂಬ!:
ಶ್ರೀನಿವಾಸ್ ಅವರ ಮನೆಯ ಗೋಡೆಯ ಮೇಲೆ IDFC ನಿಂದ ಬ್ಯಾಂಕಿಗೆ ಸೇರಿದ್ದು ಎಂಬ ಬರಹ ಕೂಡ ಬರೆಯಲಾಗಿದೆ. ಬ್ಯಾಂಕ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಊರು ಬಿಟ್ಟು ತುಮಕೂರು ಸೇರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್ ಮಾಡಿ…












