ಶಿವಮೊಗ್ಗ/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ಘಟಿಕೋತ್ಸವ ಸಾಮಾನ್ಯ ಪದವಿ ಮಾತ್ರವಲ್ಲದೇ ದೂರ ಶಿಕ್ಷಣದಲ್ಲಿ ಪದವಿ ಪಡೆದವರಿಗೂ ವೇದಿಕೆ ಕಲ್ಪಿಸಿತು. ಹೀಗಾಗಿ ಪದವಿಯ ಮುಕುಟ ಧರಿಸುವ ಕನಸಿನೊಂದಿಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದವರ ಕಲರವಕ್ಕೆ ಸಭಾಂಗಣ ಸಾಕ್ಷಿಯಾಗಿದ್ದು, ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಬಿ. ಜಿ. ವಸಂತಕುಮಾರ್ ಹಾಗೂ ಕೊಪ್ಪ ತಾಲೂಕಿನ ಶಾನುವಳ್ಳಿಯ ಧನುರ್ವಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಆಹಾರ ಇಲಾಖೆಯಿಂದ ಬಿಗ್ ಅಪ್ಡೇಟ್; ಪಡಿತರ ಚೀಟಿ ಹೊಂದಿರುವವರು ಓದಲೇ ಬೇಕಾದ ಸುದ್ದಿ ಇಲ್ಲಿದೆ ನೋಡಿ

10 ಚಿನ್ನದ ಪದಕ ಪಡೆದ ಬಿ. ಜಿ. ವಸಂತಕುಮಾರ್:
ಎಂ.ಎ ಕನ್ನಡ ವಿಭಾಗದಲ್ಲಿ ಬಿ. ಜಿ. ವಸಂತಕುಮಾರ್ 10 ಚಿನ್ನದ ಪದಕ, 1 ನಗದು ಬಹುಮಾನ ಪಡೆದಿದ್ದಾರೆ. ನನಗೆ ಚಿನ್ನದ ಪದಕಗಳು ಬಂದಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ. ನಾನು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ಭೈರನಮಕ್ಕಿ ಗ್ರಾಮದವನು. ನಮ್ಮದು ಬಡ ಕುಟುಂಬ. ತಂದೆ ಜಗದೀಶ್ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ತಾಯಿ ಮನೆ ನೋಡಿಕೊಳ್ಳುತ್ತಾರೆ. ನನಗೆ ಓದುವುದು ಹವ್ಯಾಸವಾಗಿದೆ. ಈ ಚಿನ್ನದ ಪದಕಗಳನ್ನು ನನ್ನ ತಾಯಿ ಹಾಗೂ ನನ್ನ ಅಜ್ಜನಿಗೆ ಅರ್ಪಿಸುತ್ತೇನೆ ಎಂದರು.
ಬಿ. ಜೆ. ವಸಂತಕುಮಾರ್ ಪ್ರಸ್ತುತ ಕೊಪ್ಪ ತಾಲೂಕಿನ ಜಯಪುರ ಬಿಜಿಎಸ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಬಿಯರ್ ದರ ಮತ್ತೆ ಹೆಚ್ಚಳ; ಬೆಲೆ ಎಷ್ಟಾಗಿದೆ ನೋಡಿ!
ಬರೀ ಓದ್ಕೊಂಡೇ ಇರ್ಬೇಡಿ.. ಎಂಜಾಯ್ ಮಾಡಿ ಎಂದ ಧನುರ್ವಿ:
ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ನಾಲ್ಕು ಬಂಗಾರದ ಪದಕ ಪಡೆದ ಧನುರ್ವಿ ನಾನು ಇಂದು ನಾಲ್ಕು ಬಂಗಾರದ ಪದಕ ಪಡೆದಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ನಾನು ಈ ಹಂತಕ್ಕೆ ಬರಲು ಪೋಷಕರು ಹಾಗೂ ಉಪನ್ಯಾಸಕರು ತುಂಬಾ ಸಹಾಯ ಮಾಡಿದ್ದಾರೆ. ಪದವಿಯಲ್ಲಿಯೇ ಪ್ರಥಮ ರ್ಯಾಂಕ್ ಸ್ವಲ್ಪದರಲ್ಲಿ ತಪ್ಪಿತ್ತು. ಇದರಿಂದ ಸ್ನಾತ್ತಕೋತ್ತರ ಪದವಿಯಲ್ಲಿ ನಾಲ್ಕು ಪದಕ ಪಡೆದುಕೊಂಡಿದ್ದೇನೆ. ಮುಂದೆ ಉಪನ್ಯಾಸಕಿಯಾಗಬೇಕೆಂದುಕೊಂಡಿದ್ದೇನೆ ಎಂದರು.
ಧನುರ್ವಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿಯವರು, ಪ್ರಸ್ತುತ ಜೆಸಿಬಿಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್ ಮಾಡಿ…












