ಜಯಪುರ: ಕಸ್ತೂರಿ ರಂಗನ್, ಜಮೀನು ತೆರವಿನ ವಿರುದ್ದ ವಿಶೇಷ ಗ್ರಾಮ ಸಭೆ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಸಲುವಾಗಿ ಜನವಿರೋದಿ ಅರಣ್ಯ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ. ಸೆಕ್ಷನ್ 4 ಮುಂದೆ ಮೀಸಲು ಅರಣ್ಯವಾಗಲಿದ್ದು, ಮೀಸಲು ಅರಣ್ಯವಾದರೆ ಆ ಜಾಗಕ್ಕೆ ಕಾಲಿಡದಂತೆ ಅರಣ್ಯ ಇಲಾಖೆ ನಿರ್ಬಂಧ ಮಾಡಲಿದೆ ಎಂದು ಮೇಗುಂದಾ ಹೋಬಳಿ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿಯ ಸಂಚಾಲಕ ಕೌಳಿ ರಾಮು ಹೇಳಿದರು.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಹಿರೇಗದ್ದೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕಸ್ತೂರಿ ರಂಗನ್ ವರದಿ ಹಾಗೂ ಸೆಕ್ಷನ್ 4 ಅರಣ್ಯ ಕಾಯ್ದೆ ಮತ್ತು ಸಾಗುವಳಿ ಜಮೀನು ತೆರವಿನ ವಿರುದ್ದ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ, ಸೆಕ್ಷನ್ 4, ಸೆಕ್ಷನ್ 17 ಅರಣ್ಯ ಕಾಯ್ದೆಗಳು ಜಮೀನು ಉಳ್ಳವರ ಸಮಸ್ಯೆಯಲ್ಲ, ಪ್ರತಿಯೊಬ್ಬ ಜನಸಾಮಾನ್ಯನ ಸಮಸ್ಯೆಯಾಗಿದೆ. ಇವುಗಳು ಜಾರಿಯಾದರೆ ಜನರು ಸ್ವತಂತ್ರವಾಗಿ ಈ ನೆಲದಲ್ಲಿ ವಾಸಿಸುವ ಹಕ್ಕು ಕಳೆದುಕೊಳ್ಳುವ ಜೊತೆಗೆ ವಸತಿ ರಹಿತ ಬಡವರು ನಿವೇಶನ ಪಡೆಯಲಾಗದೆ. ತಮ್ಮ ಜೀವಿತಾವದಿ ಪೂರ್ತಿ ಬಾಡಿಗೆಯ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆಗೆ ಬೀಳಬೇಕಾಗುತ್ತದೆ. ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶವಾಗಿ ಇಲ್ಲಿನ ಅಡಿಗೆಬೈಲು ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಇದು ಜಾರಿಯಾದರೆ ಇಲ್ಲಿನ ರೈತರು ಅರಣ್ಯ ಇಲಾಖೆಯ ಅಣತಿಯಂತೆ ಕೆಲಸ ಮಾಡಬೇಕಾಗುತ್ತದೆ. ರಸಗೊಬ್ಬರ, ಕೀಟ ನಾಶಕ ಬಳಸದೇ ಕೃಷಿ ಮಾಡಬೇಕಾಗುತ್ತದೆ. ಕುಡಿಯುವ ನೀರು, ವಿದ್ಯುತ್ ಲೈನ್, ಹೊಲ ಗದ್ದೆಗಳ ರಸ್ತೆಗಳು ಎಲ್ಲದಕ್ಕೂ ಅರಣ್ಯ ಇಲಾಖೆ ಅನುಮತಿ ಬೇಕು. ಹೊಸ ಯೋಜನೆಗಳಿಗೆ ಅನುಮತಿ ಸಿಗುವುದಿಲ್ಲ. ವಸತಿ ರಹಿತರು, ಮನೆ ನಿರ್ಮಿಸಲು, ಕಾಡಿನಲ್ಲಿ ಶವ ಸುಡಲೂ ಸಹ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅವಕಾಶ ನೀಡುವುದಿಲ್ಲ ಎಂದರು.

ಸಮಿತಿಯ ಸಂಚಾಲಕರಾದ ವಕೀಲ ಸುಭಾಶ್ ಕೊಬಡೆ ಮಾತನಾಡಿ, ಈ ಹಿಂದಿನ ಬಿಜೆಪಿ ಹಾಗೂ ಕಾಂಗ್ರೇಸ್ ಆಡಳಿತದ ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ 5 ಬಾರಿ ವರದಿಯನ್ನು ತಿರಸ್ಕಾರ ಮಾಡಿದ್ದರೂ, ಕೇಂದ್ರ ಸರ್ಕಾರ ಹೆಸರನ್ನು ತಿರುಚಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ನಾಮಕರಣ ಮಾಡಿ ಹಿಂಬಾಗಿಲ ಮೂಲಕ ಕಸ್ತೂರಿ ರಂಗನ್ ವರದಿ ಜಾರಿಗೆ ಹೊರಟಿದ್ದು, ಜುಲೈ 31ರಂದು ಆರನೇ ಅಧಿಸೂಚನೆ ಹೊರಡಿಸಿದೆ. ಇಲ್ಲಿನ ಜನರ ಅಭಿಪ್ರಾಯ ಪಡೆಯದೆ, ಸ್ಯಾಟ್ಲೈಟ್ ಸರ್ವೆ ನಡೆಸಿ ಹಸಿರು ಕಂಡದ್ದನ್ನೆಲ್ಲ ದಟ್ಟ ಅರಣ್ಯವೆಂದುಕೊಂಡು ತಯಾರಿಸಿರುವ ಈ ಜನವಿರೋಧಿ ವರದಿಯಿಂದ ಈ ಭಾಗದ ಜನ ಸಂಕಷ್ಟಕ್ಕೆ ಸಿಲುಕಲಿದ್ದು, ಇದನ್ನು ವಿರೋಧಿಸಿ ನಾವೆಲ್ಲರೂ ಆಕ್ಷೇಪಣೆ ಸಲ್ಲಿಸಬೇಕು ಎಂದರು.


ಇದನ್ನೂ ಓದಿ; ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಸ್ಥಗಿತಗೊಂಡಿದ್ದ ಈ ಯೋಜನೆ ಪುನಾರಂಭ


ಸಮಿತಿಯ ಅದ್ಯಕ್ಷ ಅತ್ತಿಕುಳಿ ಸುಂದರೇಶ್ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶ, ಸೆಕ್ಷನ್ 4 ಮತ್ತು ಸೆಕ್ಷನ್ 17ರ ಹೆಸರಿನಲ್ಲಿ ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದ್ದು, ರೈತರು ಮಾಡಿರುವ ಕೃಷಿ ಜಮೀನು, ಮನೆಗಳ ತೆರವಿಗೆ ಸರ್ಕಾರ ಆದೇಶ ಹೊರಡಿಸುತ್ತಿವೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಾನ ಪಾತ್ರವಿದ್ದು, ವಿದೇಶಿ ಎನ್.ಜಿ.ಒ ಗಳ ಲಾಭಿಗೆ ಮಣಿದಿರುವ ಮಂತ್ರಿಗಳು ಮಲೆನಾಡಿನ ನೆಲವಾಸಿಗಳಿಕೆ ಅರಣ್ಯ ಕಾಯ್ದೆಗಳ ಮೂಲಕ ಕುಣಿಕೆಯನ್ನು ಹಾಕುತ್ತಿದ್ದಾರೆ ಎಂದರು.

ಸಾಮಾಜಿಕ ಹೋರಾಟಗಾರ ಕೋಗಳಿ ಪ್ರಭಾಕರ ಮಾತನಾಡಿ, ಅರಣ್ಯ ರಕ್ಷಣೆಯನ್ನು ನಾವು ಮಾತ್ರ ಮಾಡಿದರೆ ಸಾಲದು, ದೇಶದ ಎಲ್ಲಾ ಭಾಗಗಳಲ್ಲೂ ಅರಣ್ಯ ರಕ್ಷಣೆಯಾಗಲಿ. ಜೊತೆಗೆ ನಗರಗಳಲ್ಲಿ ನಡೆಯುತ್ತಿರುವ ಮಾಲಿನ್ಯವನ್ನು ಸರ್ಕಾರ ಮೊದಲು ನಿಲ್ಲಿಸಲಿ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್, ಸದಸ್ಯ ಸಂದೀಪ್ ಚೌಡಿಕಟ್ಟೆ, ಹಿರೇಗದ್ದೆ ಗ್ರಾ ಪಂ ಅದ್ಯಕ್ಷೆ ಜ್ಯೋತಿ, ಸದಸ್ಯರುಗಳಾದ ಸಾಗರ್ ದೀಪ್, ಸುರೇಶ್, ಆರ್. ಐ ಸುಧೀರ್, ಡಿಆರ್‌ಎಫ್‌ಒ ಶಂಕರ್, ಪಿಡಿಒ ಸುಜಾತ ಹಾಗೂ ಗ್ರಾಮಸ್ಥರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.