ಜಯಪುರ: ಜೆಜೆಎಮ್ ಕಾಮಗಾರಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ ಸರ್ಕಾರದ ಹಣವನ್ನು ಹಾಳುಮಾಡಲಾಗಿದೆ ಎಂದು ಮುಖಂಡ ಕುಕ್ಕುಡಿಗೆ ರವಿಂದ್ರ ದೂರಿದರು.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ಹೇರೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜೆಜೆಎಮ್ ಕಾಮಗಾರಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಜೆಜೆಎಮ್ ಕಾಮಗಾರಿಯಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ನೀರಿನ ಮೂಲವಿಲ್ಲದೆ ಅನಗತ್ಯವಾಗಿ ಪೈಪ್ ಲೈನ್ ಹಾಗೂ ನೀರಿನ ಟ್ಯಾಂಕ್ ಮಾಡಲಾಗಿದೆ. ಕಾಮಗಾರಿ ಎಸ್ಟೀಮೇಟ್ ಮತ್ತು ಪ್ಲಾನಿಂಗ್ ಮಾಡುವ ಸಮಯದಲ್ಲಿ ಸ್ಥಳೀಯ ನಾಗರೀಕರು ಹಾಗೂ ಗ್ರಾಮ ಪಂಚಾಯಿತಿಯ ಸಲಹೆ ಪಡೆಯದೆ ನಿಯಮ ಭಾಹಿರವಾಗಿ ಪ್ಲಾನಿಂಗ್ ಹಾಗೂ ಕಾಮಗಾರಿ ಮಾಡಲಾಗಿದ್ದು, ಸರ್ಕಾರಿ ಹಣ ಲೂಟಿ ಮಾಡುವ ಯೋಜನೆಯಾಗಿದೆ.

ಜನರಿಗೆ ಕುಡಿಯುವ ನೀರು ಕೊಡುವ ಯಾವ ಉದ್ದೇಶವೂ ಅಧಿಕಾರಿಗಳು ಗುತ್ತಿಗೆದಾರರಿಗಿಲ್ಲ. ಈಗಾಗಲೇ ಕಳಪೆ ಕಾಮಗಾರಿ ನಡೆಸಿ ಬಿಲ್ ಪಡೆಯಲಾಗಿದೆ. ಈ ಬಗ್ಗೆ ತಾ. ಪಂ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಗೆ ದೂರು ನೀಡಿದ್ದು, ಲೋಕಾಯುಕ್ತಕ್ಕೆ ಪ್ರಕರಣದ ತನಿಖೆಗೆ ಒತ್ತಾಯಿಸಿ ದೂರು ನೀಡುತ್ತೇವೆ ಎಂದರು.


ಇದನ್ನೂ ಓದಿ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್‌ ಆಫರ್; 10th ಪಾಸ್‌ ಆದವರು ಅರ್ಜಿ ಸಲ್ಲಿಸಿ


ಕಾಮಗಾರಿಗೆ ಬಳಸಿರುವ ಪೈಪ್ ಗುಣಮಟ್ಟ ಕಳಪೆಯಾಗಿದ್ದು, ಕಾಮಗಾರಿಯೂ ಸರಿಯಾಗಿ ನಡೆದಿಲ್ಲ, ಈ ಬಗ್ಗೆ ಸಂಬಂಧ ಪಟ್ಟ ಇಂಜೀನಿಯರ್ʼಗೆ ದೂರು ನೀಡಿದರೂ ಕ್ರಮ ವಹಿಸಿಲ್ಲ. ಹೇರೂರು ಗ್ರಾ ಪಂ ಒಂದರಲ್ಲಿಯೇ 9ಕೋಟಿ ಕಾಮಗಾರಿ ನಡೆದಿದ್ದು, ಒಂದೇ ಒಂದು ಮನೆಗೆ ನೀರು ಬರುತ್ತಿಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ದ ಕ್ರಮ ವಾಗಬೇಕು ಎಂದು ಕೆಡಿಪಿ ಸದಸ್ಯ ನಾಗೇಶ್ ಅಮೀನ್ ಹೇಳಿದರು.

ದೂರು ಆಲಿಸಿದ ಕೊಪ್ಪ ತಾಲೂಕು ಪಂಚಾಯಿತಿ ಇಒ ನವೀನ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿಯ ಗಮನಕ್ಕೆ ತರದೆ ಕಾಮಗಾರಿಯ ಎಸ್ಟೀಮೇಟ್ ಹಾಗೂ ಕೆಲಸ ಮಾಡಿರುವುದು ಹಾಗೂ ನೀರಿನ ಲಭ್ಯತೆ ಇಲ್ಲದೆಡೆ ಕಾಮಗಾರಿ ನಡೆಸಿರುವುದು ನಿಯಮ ಬಾಹಿರವಾಗಿದೆ. ಕಳಪೆ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡು ಮನೆಗಳಿಗೆ ನೀರು ಬಾರದೆ ಉಳಿದ ಹಣ ಬಿಡುಗಡೆ ಮಾಡದಂತೆ ಸೂಚಿಸಲಾಗುತ್ತದೆ ಎಂದರು.


ಇದನ್ನೂ ಓದಿ; ಗೃಹ ಸಾಲ ಪಡೆಯುವವರಿಗೆ ಭರ್ಜರಿ ಸುದ್ದಿ;  RBI ನಿಂದ ಹೊಸ ನಿಯಮಗಳು ಜಾರಿ


ನಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇಇ ವೆಂಕಟೇಶ್ ಮಾತನಾಡಿ, ಕಾಮಗಾರಿಯಲ್ಲಾದ ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಹಾಗೂ ಪೈಪ್ಗಳನ್ನು ಇನ್ನೊಮ್ಮೆ ಗುಣಮಟ್ಟ ಪರೀಕ್ಷೆಗೆ ಕಳುಹಿಸುತ್ತೇವೆ ಎಂದರು.

ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆ, ಅವೈಜ್ಞಾನಿಕ:
* ವೀರಗಲ್ಲುಮಕ್ಕಿಯ 73 ಮನೆಗಳಿಗೆ ಕುಡಿಯುವ ನೀರು ನೀಡಲು 90 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 25 ಲಕ್ಷ ಬಲ್ ಆಗಿದೆ.
* ಸ್ಥೀರೂರಿನ 36 ಮನೆಗಳಿಗೆ ಕುಡಿಯುವ ನೀರು ನೀಡಲು 24.5 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 21 ಲಕ್ಷ ಬಲ್ ಆಗಿದೆ.
* ಹೇರೂರಿನ 80 ಮನೆಗಳಿಗೆ ಕುಡಿಯುವ ನೀರು ನೀಡಲು 65 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 51 ಲಕ್ಷ ಬಲ್ ಆಗಿದೆ.
* ಸುಂಕದಗದ್ದೆಯ 72 ಮನೆಗಳಿಗೆ ಕುಡಿಯುವ ನೀರು ನೀಡಲು 35 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 11ಲಕ್ಷ ಬಿಲ್ ಆಗಿದೆ.
* ಮೇದಕ್ಕಿಯ 20 ಮನೆಗಳಿಗೆ ಕುಡಿಯುವ ನೀರು ನೀಡಲು 34 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 23 ಲಕ್ಷ ಬಿಲ್ ಆಗಿದೆ.
* ಹುತ್ತಿನಗದ್ದೆಯ 87 ಮನೆಗಳಿಗೆ ಕುಡಿಯುವ ನೀರು ನೀಡಲು 78.8 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 23.28 ಲಕ್ಷ ಬಿಲ್ ಆಗಿದೆ.
* ಸೀಗೋಡಿನ 61 ಮನೆಗಳಿಗೆ ಕುಡಿಯುವ ನೀರು ನೀಡಲು 1 ಕೋಟಿ 24 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 60.23 ಲಕ್ಷ ಬಿಲ್ ಆಗಿದೆ.
* ಕಿಬ್ಳಿ, ತಿಪ್ಪಿನಗದ್ದೆಯ 69 ಮನೆಗಳಿಗೆ ಕುಡಿಯುವ ನೀರು ನೀಡಲು 50 ಲಕ್ಷ ಹಣ ಇರಿಸಿದ್ದು, ಗುತ್ತಿಗೆದಾರನಿಗೆ ರೂ 23 ಲಕ್ಷ ಬಿಲ್ ಆಗಿದೆ.
ಪರಿಶೀಲನೆ ವೇಳೆ ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆಯಾಗಿದ್ದು, ಅವೈಜ್ಞಾನಿಕವಾಗಿದೆ. ಯಾವ ಮನೆಗೂ ನೀರು ಬರುತ್ತಿಲ್ಲ.


ಇದನ್ನೂ ಓದಿ; ಗೃಹಜ್ಯೋತಿ ಯೋಜನೆ ನೋಂದಣಿಗೆ ಇನ್ನೂ ಇದೆ ಅವಕಾಶ;  ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ


“ಕೊಪ್ಪ ತಾಲೂಕಿನ 216 ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ ರೂ 107.39 ಕೋಟಿ ರೂ ಹಣ ಮಂಜೂರಾಗಿದೆ. ಬಹುತೇಕ ಎಲ್ಲಾ ಕಡೆಯೂ ಕಾಮಗಾರಿ ಕಳಪೆ ಮತ್ತು ಅವೈಜ್ಞಾನಿಕವಾಗಿದ್ದೂ, ಜನರಿಗೆ ಅನುಕೂಲವಾಗಿಲ್ಲ. ಇದರಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೋಟ್ಯಾಂತರ ರೂಗಳ ಭ್ರಷ್ಟಾಚಾರ ನಡೆಸಿದ್ದು, ಲೋಕಾಯುಕ್ತ ತನಿಖೆಗೆ ದೂರು ನೀಡುತ್ತೇವೆ”– ಕುಕ್ಕುಡಿಗೆ ರವಿಂದ್ರ, ಕೊಪ್ಪ ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.