ಕೊಪ್ಪದಲ್ಲಿನ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದಲ್ಲಿ ದೊರೆಯುವ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ ಎಂದು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ ನೀಡಿದೆ.


ಇದನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್; 10th, PUC ವಿದ್ಯಾರ್ಹತೆ


ಇತ್ತೀಚೆಗೆ ನಲ್ಲಿಯಲ್ಲಿ ನೀರು ಕಲ್ಮಶಗಳನ್ನು ಹೊತ್ತು ಬಂದಾಗ ಸಾರ್ವಜನಿಕರು ಗಾಬರಿಯಾಗಿ, ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಿದ್ದರು. ಇದೀಗ ಇದರ ವರದಿ ಬಂದಿದ್ದು, ಆರೋಗ್ಯಕ್ಕೆ ಅಪಾಯಕಾರಿ ಎಂದು ಬಯಲಾಗಿದೆ.

ಪಟ್ಟಣ ಪಂಚಾಯತಿಯ ಕೊಳಕು ನೀರನ್ನು ವಿತರಿಸುವಲ್ಲಿನ ಬೇಜವಬ್ದಾರಿ, ನಿರ್ಲಕ್ಷ, ನಿಷ್ಕ್ರಿಯತೆ, ಇರಬಹುದಾದ ಭ್ರಷ್ಟತೆಗೆ ಹಿಡಿದ ಕನ್ನಡಿ ಎಂಬಂತೆ, ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿರುವ ಬ್ಯಾಕ್ಟೀರಿಯಗಳ ಕರ್ಮಕಾಂಡ ಬಯಲಿಗೆ ಬಂದಂತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಇದನ್ನೂ ಓದಿ: 3 ತಿಂಗಳ ಗೃಹಲಕ್ಷ್ಮಿ ಹಣ ಯಜಮಾನಿಯರ ಖಾತೆಗೆ ಜಮೆ


ಇನ್ನಾದರೂ ಕೊಪ್ಪದ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಪಂಚಾಯತಿ ಸದಸ್ಯರು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ತೆರಿಗೆಯಲ್ಲಿ ರಿಯಾಯಿತಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.