ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಕುರುಬಗೇರಿ ವೃತ್ತದ ಬಳಿ ಈ ಹಿಂದೆ ಪೈಪ್ ಅಳವಡಿಸಲು ರಸ್ತೆ ಅಗೆದಿದ್ದದ್ದನ್ನು ಸರಿಯಾಗಿ ಮುಚ್ಚದ ಕಾರಣ ರಸ್ತೆ ಅಪಘಾತಕ್ಕೆ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗಲು ಕಾರಣವಾಗಿದೆ.
ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಕಾಮಗಾರಿ ನಡೆದ ಸ್ಥಳವು ತಿರುವಿನಲ್ಲಿ ಇದ್ದು , ಗುಂಡಿ ಬಿದ್ದಿರುವುದು ರಾತ್ರಿ ಸಮಯದಲ್ಲಿ ತಕ್ಷಣವೇ ಕಾಡುವುದಿಲ್ಲ ಹಾಗಾಗಿ ವಾಹನಗಳು ಒಮ್ಮೆಲೇ ಜಂಪ್ ಆಗುವುದರಿಂದ ಅಪಘಾತಕ್ಕೆ ಈಡಾಗುತ್ತಿವೆ.
ಹಾಗೆಯೇ ವಾಹನಗಳು ಗುಂಡಿ ಇದೆ ಎಂದು ನಿಲ್ಲಿಸಿ ಚಲಿಸುವ ಕಾರಣ, 3 ರಸ್ತೆ ಸೇರುವ ಜಾಗ ಆಗಿರುವುದರಿಂದ ಸಂಚಾರ ದಟ್ಟಣೆ ಸಹ ಉಂಟಾಗುತ್ತಿದೆ.
ಇದನ್ನೂ ಓದಿ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್ ಆಫರ್; 10th ಪಾಸ್ ಆದವರು ಅರ್ಜಿ ಸಲ್ಲಿಸಿ
ಕಳೆದ ಒಂದು ವಾರದಲ್ಲಿ ಎರಡು ಬೈಕ್ ಸವಾರರು ರಾತ್ರಿ ಸಮಯದಲ್ಲಿ ಅಪಘಾತಕ್ಕೆ ಒಳಗಾದ ಘಟನೆಗಳು ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಈ ಬಗ್ಗೆ ಕ್ರಮ ವಹಿಸುವಂತೆ ಸಾರ್ವಜನಿಕರು ಸಹ ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಗೃಹ ಸಾಲ ಪಡೆಯುವವರಿಗೆ ಭರ್ಜರಿ ಸುದ್ದಿ; RBI ನಿಂದ ಹೊಸ ನಿಯಮಗಳು ಜಾರಿ












