ಜಯಪುರ: ಕುಡಿಯುವ ನೀರಿಗೆ ವಿಷಪೂರಿತ ಕಾಫಿ ಪಲ್ಪರ್ ನೀರು

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಜಯಪುರದ ಗುಡ್ಡೆತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಸೀತಾನದಿಗೆ ಪಲ್ಪರ್ ನೀರನ್ನು ಹರಿ ಬಿಡುತ್ತಿರುವ ಖಾಸಗಿ ಎಸ್ಟೇಟ್ ಮಾಲೀಕರ ವಿರುದ್ಧ ಸಾರ್ವಜನಿಕರು ಜಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಇದನ್ನೂ ಓದಿ; ಪ್ರೊಬೆಷನರಿ ನೌಕರರನ್ನು ಏಕಾಏಕಿ ವಜಾ ಮಾಡುವಂತಿಲ್ಲ: ಹೈಕೋರ್ಟ್ ಆದೇಶ

ಸೀತಾನದಿಯಿಂದ ಹೆಗೆದ್ದೆ, ಮಕ್ಕಿಕೊಪ್ಪ, ಜಯಪುರ ಭಾಗಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಗುಡ್ಡೆತೋಟ ಗ್ರಾಮದಲ್ಲಿ ಭದ್ರ ಎಸ್ಟೇಟ್ ಎಂಬ ಖಾಸಗಿ ಕಂಪನಿಯು ಕಾಫಿ ಪಲ್ಪರ್ ಮಾಡಿದ ವಿಷಪೂರಿತ ನೀರನ್ನು ನೇರವಾಗಿ ಬೀಡಲಾಗುತ್ತದೆ. ಇದೇ ನೀರು ಪಂಚಾಯಿತಿ ವತಿಯಿಂದ ಎಲ್ಲಾ ಗ್ರಾಮಗಳಿಗೂ ಸರಬರಾಜು ಆಗುತ್ತಿದ್ದು, ಅನೇಕ ಗ್ರಾಮದ ಜನರಿಗೆ ಆರೋಗ್ಯ ಹದಗೆಟ್ಟಿದೆ ಅಷ್ಟೇ ಅಲ್ಲದೆ ಜಲಚರಗಳು ನಾಶವಾಗುತ್ತಿದೆ ಎಂದು ಸಾರ್ವಜನಿಕರು ಖಾಸಗಿ ಎಸ್ಟೇಟ್ ಮಾಲೀಕರ ವಿರುದ್ಧ ಜಯಪುರ ಪೊಲೀಸ್ ಠಾಣೆಗೆ ಜೀವ ಹಾನಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ; ಗಮನಿಸಿ; ಈ ಕಾರ್ಡ್ ನಲ್ಲಿ 5 ಲಕ್ಷ ಉಚಿತ ಚಿಕಿತ್ಸೆ; ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಬೈಕ್‌ ಚಲಾಯಿಸಿದ ಅಪ್ರಾಪ್ತ ಬಾಲಕ | ತಾಯಿಗೆ 30 ಸಾವಿರ ದಂಡ!

 

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ಕೊಟ್ಟ ಬಾಲಕನ ತಾಯಿಗೆ 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಬರಪರಿಹಾರದ ಹಣ ಜಮಾ; ನಿಮಗೂ ಬಂತಾ ಹಣ, ಹೀಗೆ ಚೆಕ್ ಮಾಡಿ

 

2024 ರ ಜನವರಿ 30 ರಂದು ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿ.ಎಸ್.ಐ ನವೀನ್ ಕುಮಾರ್ ಮಠಪತಿ ಅವರು ಶಿವಮೊಗ್ಗ ನಗರದ ಎಸ್ ಪಿ.ಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕ ಯಾವುದೇ ಚಾಲನಾ ಪರವಾನಗಿ ಪತ್ರವಿಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಕಂಡು ಬಂದಿದ್ದು, ಇದನ್ನ ಗಮನಿಸಿದ ಪಿ.ಎಸ್.ಐ ಅಪ್ರಾಪ್ತನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ಬಾಲಕನ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ; ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ; 93 ಪೌರಕಾರ್ಮಿಕರ ಭರ್ತಿಗೆ ಅಧಿಸೂಚನೆ

ಇದೀಗ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ನೀಡಿದ ಬಾಲಕನ ತಾಯಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ರೂ ದಂಡ ವಿಧಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.