ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮುಸ್ಲಿಂ ಸಮುದಾಯವೇ ತಲೆ ತಗ್ಗಿಸುವಂತೆ ಮಾಡಿದ್ದು, ಜಯಪುರ ಬದ್ರಿಯಾ ಜುಮ್ಮಾ ಮಸೀದಿಯ ಜಮಾತ್ ನಿಂದ ಸದಸ್ಯತ್ವ ರದ್ದುಗೊಳಿಸಿ ಬಹಿಷ್ಕರಿಸಲು ಮಸೀದಿಯ ಸಮಿತಿ ವತಿಯಿಂದ ನಿರ್ಧರಿಸಲಾಗಿದೆ ಎಂದು ಮಸೀದಿ ಸಮಿತಿಯ ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಹೇಳಿದರು.
ಇದನ್ನೂ ಓದಿ; ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!; ಯಾವುದೆಲ್ಲಾ ವಸತಿ ಶಾಲೆ, ಎಲ್ಲಿ ಅರ್ಜಿ ಸಲ್ಲಿಸಬೇಕು?

ಏನಿದು ಘಟನೆ:
ಅಂಗಡಿಗೆ ವಸ್ತುಕೊಳ್ಳಲು ಬಂದ ಅಪ್ರಾಪ್ತ ಬಾಲಕಿಗೆ ಆರೋಪಿ ಹನೀಫ್ ಲೈಂಗಿಕ ಕಿರುಕುಳ ನೀಡಿದ್ದು , ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಸಂತ್ರಸ್ಥ ಬಾಲಕಿಯ ಪೋಷಕರು ಆರೋಪಿಯ ವಿರುದ್ದ ಜಯಪುರ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಜಯಪುರ ಪೊಲೀಸ್ ಠಾಣೆಯ ಪಿಎಸ್ ಐ ಅಂಬರೀಶ್ ಆರೋಪಿಯನ್ನು ಬಂಧಿಸಿ, ಪೋಕ್ಸೋ ಹಾಗೂ ಐಪಿಸಿ 354 ಖಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಾರದವರಿಗೆ ಮಹತ್ವದ ಸುದ್ದಿ; ಮನೆಬಾಗಿಲಿಗೇ ಬರಲಿದ್ದರೆ ಅಂಗನವಾಡಿ ಕಾರ್ಯಕರ್ತೆಯರು
ಈ ಕುರಿತು ಬುಧವಾರ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯ ಜಮಾತ್ ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಜಮಾತ್ ಖಂಡಿಸುತ್ತದೆ. ಜಮಾತ್ ನಿಂದ ಆರೋಪಿಯ ಸದಸ್ಯತ್ವ ರದ್ದುಪಡಿಸಲಾಗಿದೆ. ಇನ್ನು ಮುಂದೆ ಆ ವ್ಯಕ್ತಿಗೂ ಜಮಾತ್ ಗೂ ಯಾವುದೇ ಸಂಬಂಧ ಇಲ್ಲ ಎಂದರು.
ಇದನ್ನೂ ಓದಿ; ರಾಜ್ಯದ SC/ST ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್; GIG ವರ್ಕರ್ಸ್ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಜಯಪುರ ಬದ್ರಿಯಾ ಜುಮ್ಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬೂಬಕರ್, ಉಪಾಧ್ಯಕ್ಷ ನಾಸಿರ್ ಹುಸೇನ್, ಕಾರ್ಯದರ್ಶಿ ಖಾದರ್ ಕೆ, ಖಜಾಂಚಿ ಎಂ ಕೆ ಮಹಮ್ಮದ್, ಪತ್ರಿಕಾ ವಿತರಕರಾದ ಅಬ್ದುಲ್ ಲತೀಫ್, ಯುವ ಮುಖಂಡರುಗಳಾದ ರಶೀದ್, ಇಸ್ಮಾಯಿಲ್ ಮಕ್ಕಿಕೊಪ್ಪ, ಮುಸ್ತಾಫಾ, ಮಾಜಿ ಕಾರ್ಯದರ್ಶಿ ಮಹಮ್ಮದ್ ಇದ್ದರು.
ಮೂಡಿಗೆರೆ: ಕಾಡಾನೆ ಸೆರೆ ಕಾರ್ಯಚರಣೆ ದಿಢೀರ್ ಸ್ಥಗಿತ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಚರಣೆ ದಿಢೀರ್ ಸ್ಥಗಿತಗೊಂಡಿದೆ.
ಇದನ್ನೂ ಓದಿ; ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜುನ ಆನೆ ಮೃತಪಟ್ಟ ಹಿನ್ನೆಲೆ ಕಾರ್ಯಚರಣೆ ಸ್ಥಗಿತ:
ಮೈಸೂರು ದಸರಾ ದಲ್ಲಿ 8 ಬಾರಿ ಅಂಬಾರಿ ಹೊತ್ತು ಇತಿಹಾಸ ಸೃಷ್ಟಿಸಿ ನಾಡಿನ ಜನರ ಗಮನ ಸೆಳೆದಿದ್ದ ಅರ್ಜುನ ಆನೆ ಸಾವಿನಿಂದ ತೀವ್ರ ದುಃಖದಲ್ಲಿರುವ ಜಿಲ್ಲೆಯ ಮಾವುತರು ಹಾಗೂ ಕಾವಡಿಗರು ಕರ್ತವ್ಯಕ್ಕೆ ಗೈರಾಗಿರುವ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತವಾಗಿದೆ.
ಇದನ್ನೂ ಓದಿ; ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಳ; ಇಲ್ಲಿದೆ ಇವತ್ತಿನ ದರಪಟ್ಟಿ
6 ಸಾಕಾನೆಗಳಿಂದ ಕಾರ್ಯಚರಣೆ:
ಕಾಡಾನೆ ಸೆರೆಗಾಗಿ ಶಿಬಿರದಿಂದ 6 ಸಾಕಾನೆಗಳು ಬಂದಿದ್ದವು, ಇದರಲ್ಲಿ ದಸರಾ ಗಜಪಡೆಯ ಮಹೇಂದ್ರ, ಗಜೇಂದ್ರ, ನೇತೃತ್ವ ವಹಿಸಿದ್ದವು. ಮೂಡಿಗೆರೆ ಸುತ್ತಮುತ್ತ ತೀವ್ರ ಉಪಟಳ ನೀಡುತ್ತಿದ್ದ ಆನೆಗಳ ಹಾವಳಿಯಿಂದಾಗಿ ಬೈರಾಪುರದ ಬಳಿ 3 ಕಾಡಾನೆಗಳ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು ಅರ್ಜುನನ ಅಕಾಲಿಕ ಮರಣದಿಂದ ಸದ್ಯ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದೆ.












