ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 2023 ರ ಅತ್ಯುತ್ತಮ ಲಾಡ್ಜ್ ನ್ಯಾಚುರಲಿಸ್ಟ್ ಪ್ರಶಸ್ತಿಯನ್ನು ಅಮಿತ್ ಭಾಂಗ್ರೆ ಪಡೆದಿದ್ದಾರೆ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಾರದವರಿಗೆ ಮಹತ್ವದ ಸುದ್ದಿ; ಮನೆಬಾಗಿಲಿಗೇ ಬರಲಿದ್ದರೆ ಅಂಗನವಾಡಿ ಕಾರ್ಯಕರ್ತೆಯರು

ಮೂಲತಃ ಕರ್ನಾಟಕದ ಕಾಫಿನಾಡು ಚಿಕ್ಕಮಗಳೂರಿನವರಾದ ಅಮಿತ್ ಭಾಂಗ್ರೇ, ಪ್ರಖ್ಯಾತ ನಿಸರ್ಗಶಾಸ್ತ್ರಜ್ಞ ಮತ್ತು ಸಮರ್ಪಿತ ಸಂರಕ್ಷಣಾ ತಜ್ಞ, ಅಂತರ್ ರಾಷ್ಟ್ರೀಯ ಹುಲಿ ಸಂರಕ್ಷಣ ಸಂಸ್ಥೆಯ ಟಾಫ್ಟ್ ಟೈಗರ್ ನಿಂದ ಪ್ರತಿಷ್ಠಿತ 2023 ರ ಅತ್ಯುತ್ತಮ ಲಾಡ್ಜ್ ನ್ಯಾಚುರಲಿಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ; ರಾಜ್ಯದ SC/ST ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್; GIG ವರ್ಕರ್ಸ್ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಎರಡು ದಶಕಗಳಿಂದ ವನ್ಯಜೀವಿ ಸಂರಕ್ಷಣೆಗೆ ಅಚಲವಾದ ಬದ್ಧತೆಯೊಂದಿಗೆ ಕೆಲಸ ಮಾಡಿದ್ದು, ಉತ್ತರ ಪ್ರದೇಶ, ಮದ್ಯ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯದಲ್ಲಿ ಸಂರಕ್ಷಣೆ ಕೆಲಸ ಮಾಡಿದ್ದಾರೆ. ಡಿಸೆಂಬರ್ 5, 2023 ರಂದು ನವದೆಹಲಿಯ ಬಿಕಾನೆರ್ ಹೌಸ್ ನಲ್ಲಿ ನಡೆದ ತೋಫ್ಟ್ ಟೈಗರ್ ವನ್ಯಜೀವಿ ಮತ್ತು ಪ್ರಯಾಣ ಪ್ರಶಸ್ತಿಗಳ 6 ನೇ ಆವೃತ್ತಿಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ; ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ತೋಫ್ಟ್ ಟೈಗರ್, ಟೂರ್ ಆಪರೇಟರ್ಸ್ ಫಾರ್ ಟೈಗರ್ಸ್, ಹುಲಿಗಳ ಸಂರಕ್ಷಣೆಗೆ ಹಣವನ್ನು ಚಾನಲ್ ಮಾಡಲು ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರಯಾಣದ ಉಪಕ್ರಮಗಳನ್ನು ಮುನ್ನಡೆಸುತ್ತದೆ. ಉತ್ತಮವಾಗಿ ನಿರ್ವಹಿಸಲಾದ ವನ್ಯಜೀವಿ ಪ್ರವಾಸೋದ್ಯಮದ ಪ್ರಮುಖ ಪಾತ್ರವನ್ನು ಅಂಗೀಕರಿಸುವ ಸಂಸ್ಥೆ ವನ್ಯಜೀವಿಗಳನ್ನು ಉಳಿಸಲು ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಅದರ ಸಾಮರ್ಥ್ಯವನ್ನು ಪ್ರತಿಪಾದಿಸುತ್ತದೆ ಎಂದು ಪರಿಸರ ಪ್ರೇಮಿ ವೀರೇಶ್ ತಿಳಿಸಿದ್ದಾರೆ.
ಎನ್.ಆರ್.ಪುರ: ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ
ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ ನಾಯಿಗೆ ಬೈದಿದ್ದಾನೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಕ್ಕದ ಮನೆ ವ್ಯಕ್ತಿ ಜೇಮ್ಸ್ ಆಸಿಡ್ ದಾಳಿ ಮಾಡಿದ್ದಾನೆ. ಆಸಿಡ್ ದಾಳಿಗೊಳಗಾದ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿ, ಕಣ್ಣಿನ ಪದರ ಬದಲಿಸುವಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ವೈದ್ಯರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ; ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಳ; ಇಲ್ಲಿದೆ ಇವತ್ತಿನ ದರಪಟ್ಟಿ
ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಮಾಲೀಕ ಬೈಯುತ್ತಿದ್ದ ಎನ್ನಲಾಗಿದ್ದು ಇದರಿಂದ ಸಿಟ್ಟಿಗೆದ್ದು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಜೇಮ್ಸ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 05.12.2023












