ಶೃಂಗೇರಿ: ಸಿದ್ದರಾಮಯ್ಯನವರ ಸರ್ಕಾರವನ್ನ ವಜಾಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಮನವಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶಂಕಿತ ಐಸಿಸ್ ಉಗ್ರನ ಜೊತೆ ಸಿಎಂ ಸಿದ್ದರಾಮಯ್ಯನವರು ವೇದಿಕೆ ಹಂಚಿಕೊಂಡಿದ್ದು ಹಾಗೂ ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿರುವುದನ್ನ ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ತಹಸೀಲ್ದಾರ್ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

 

ಇದನ್ನೂ ಓದಿ;  ರಾಜ್ಯದ ರೈತರಿಗೆ ಗುಡ್ ನ್ಯೂಸ್; 22.500ವರೆಗೆ ಬೆಳೆ ಪರಿಹಾರ ಪಾವತಿ

ಡಿ.4 ರಂದು ಮಸೀದಿ ಮೌಲ್ವಿಗಳ ಜೊತೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲೀಂ ಧರ್ಮಗುರುಗಳ ಸಮಾವೇಶದಲ್ಲಿ ತನ್ವೀರ್ ಪೀರ್ ಜೊತೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು, ಈ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುಧಾನದ ಘೋಷಣೆ ಮಾಡಿರುವುದು ಸಂವಿಧಾನ ಬಾಹಿರ ಎಂದು ಸಂಘಟನೆ ಆಗ್ರಹಿಸಿದೆ.

ಇದನ್ನೂ ಓದಿ; ಶ್ರಮ ಶಕ್ತಿ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ

Article-29 ಮತ್ತು 30 ರ ಪ್ರಕಾರ ಅಲ್ಪಸಂಖ್ಯಾತರ ಹಿತರಕ್ಷಣೆ ಪ್ರಕಾರ ಭಾರತದ ಯಾವುದೇ ರಾಜ್ಯ, ಅಥವಾ ವಿಶಿಷ್ಟಭಾಷೆ, ಲಿಪಿ, ಅಥವಾ ಸಂಸ್ಕೃತಿಯನ್ನ ಹೊಂದಿರುವವರಿಗೆ ಮಾತ್ರ ಅನುದಾನ ಘೋಷಿಸಲು ಅವಕಾಶವಿದೆ. ಆದರೆ ಮುಸ್ಲೀಂ ಸಮುದಾಯಕ್ಕೆ ವಿಶಿಷ್ಟ ಭಾಷೆ, ಲಿಪಿ ಸಂಪ್ರದಾಯ ಭಾಷೆ ಇಲ್ಲದಿರುವುದರಿಂದ ವಿಶೇಷ ಅನುದಾನ ನೀಡಲು ಅವಕಾಶವಿಲ್ಲ ಎಂದು ಸಂಘಟನೆ ಆಗ್ರಹಿಸಿದೆ. ಅಲ್ಲದೆ ಸಿಎಂ ಘೋಷಣೆಯಿಂದ ರಾಜ್ಯದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತಾಗಿದೆ. ಹಾಗಾಗಿ ಸಂವಿಧಾನ ವಿರೋಧವಾಗಿ ರಾಜ್ಯದ ಬೊಕ್ಕಸವನ್ನ ಖರ್ಚುಮಾಡಲಾಗುತ್ತಿದೆ. ಇದನ್ನ ರಾಜ್ಯಪಾಲರು ಗಮನಿಸಬೇಕು ಮತ್ತು ಸಿದ್ದರಾಮಯ್ಯನವರ ಸರ್ಕಾರವನ್ನ ವಜಾಗೊಳಿಸಬೇಕೆಂದು ಎಂದು ಆಗ್ರಹಿಸಲಾಗಿದೆ.

 

ಅಲ್ಲದೆ ಶಂಕಿತ ಉಗ್ರರ ಪಟ್ಟಿಯಲ್ಲಿ ಮೌಲ್ವಿ ತನ್ವೀರ್ ಪೀರಾ ಎಂಬುವರ ಹೆಸರಿದ್ದು ಅವರೊಂದಿಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ. ಪೀರಾರಿಗೆ ಸೌದಿ, ಯಮನ್, ಹಾಗೂ ಮಧ್ಯಪ್ರಾಚ್ಯ ದೇಶಗಳ ಪ್ರವಾಸದಲ್ಲಿ ಭಯೋತ್ಪಾದಕ ಸಂಘಟನೆಯ ಮುಖಂಡರನ್ನ ಭೇಟಿಯಾದ ಫೋಟೋ ಹಂಚಿಕೊಂಡಿದ್ದಾರೆ. ಭಾರತದ ಚಟುವಟಿಕೆಗಳನ್ನ ಅರಬ್ ದೇಶಗಳಿಗೆ ರವಾನಿಸಿರುವುದು ಅವರ ಟ್ವೀಟ್ ನಿಂದ ಬಹಿರಂಗವಾಗಿದೆ. ಹಾಗಾಗಿ ಈ ಪ್ರಕರಣವನ್ನ ಉನ್ನತಮಟ್ಟದಲ್ಲಿ ತನಿಖೆಯಾಗಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ.

ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಮೂಲಕ ಮನವಿ:
ಭಾರತೀಯರ ತೆರಿಗೆ ಹಣವನ್ನು ಒಂದು ಧರ್ಮಕ್ಕೆ 10,000 ಕೋಟಿ ಕೊಡುವುದಾಗಿ ಘೋಷಣೆ ಮಾಡಿ ಭಯೋತ್ಪಾದಕನ ಜೊತೆ ವೇದಿಕೆ ಹಂಚಿಕೊಂಡ ಮುಖ್ಯಮಂತ್ರಿಯನ್ನು ವಜಾಗೂಳಿಸಬೇಕು ಎಂದು ಮಾನ್ಯ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಇಂದು ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ ಮಾಡಲಾಯಿತು.

 

ಜಯಪುರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಸೀದಿ ಜಮಾತ್ ಸದಸ್ಯ ಹನೀಫ್ | ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಮಸೀದಿ ಸದಸ್ಯತ್ವದಿಂದ ಕಿಕ್ಕೌಟ್

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮುಸ್ಲಿಂ ಸಮುದಾಯವೇ ತಲೆ ತಗ್ಗಿಸುವಂತೆ ಮಾಡಿದ್ದು, ಜಯಪುರ ಬದ್ರಿಯಾ ಜುಮ್ಮಾ ಮಸೀದಿಯ ಜಮಾತ್ ನಿಂದ ಸದಸ್ಯತ್ವ ರದ್ದುಗೊಳಿಸಿ ಬಹಿಷ್ಕರಿಸಲು ಮಸೀದಿಯ ಸಮಿತಿ ವತಿಯಿಂದ ನಿರ್ಧರಿಸಲಾಗಿದೆ ಎಂದು ಮಸೀದಿ ಸಮಿತಿಯ ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಹೇಳಿದರು.

ಏನಿದು ಘಟನೆ:
ಅಂಗಡಿಗೆ ವಸ್ತುಕೊಳ್ಳಲು ಬಂದ ಅಪ್ರಾಪ್ತ ಬಾಲಕಿಗೆ ಆರೋಪಿ ಹನೀಫ್ ಲೈಂಗಿಕ ಕಿರುಕುಳ ನೀಡಿದ್ದು , ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಸಂತ್ರಸ್ಥ ಬಾಲಕಿಯ ಪೋಷಕರು ಆರೋಪಿಯ ವಿರುದ್ದ ಜಯಪುರ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಜಯಪುರ ಪೊಲೀಸ್ ಠಾಣೆಯ ಪಿಎಸ್ ಐ ಅಂಬರೀಶ್ ಆರೋಪಿಯನ್ನು ಬಂಧಿಸಿ, ಪೋಕ್ಸೋ ಹಾಗೂ ಐಪಿಸಿ 354 ಖಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಾರದವರಿಗೆ ಮಹತ್ವದ ಸುದ್ದಿ; ಮನೆಬಾಗಿಲಿಗೇ ಬರಲಿದ್ದರೆ ಅಂಗನವಾಡಿ ಕಾರ್ಯಕರ್ತೆಯರು

ಈ ಕುರಿತು ಬುಧವಾರ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯ ಜಮಾತ್ ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಜಮಾತ್ ಖಂಡಿಸುತ್ತದೆ. ಜಮಾತ್ ನಿಂದ ಆರೋಪಿಯ ಸದಸ್ಯತ್ವ ರದ್ದುಪಡಿಸಲಾಗಿದೆ. ಇನ್ನು ಮುಂದೆ ಆ ವ್ಯಕ್ತಿಗೂ ಜಮಾತ್ ಗೂ ಯಾವುದೇ ಸಂಬಂಧ ಇಲ್ಲ ಎಂದರು.

ಇದನ್ನೂ ಓದಿ; ರಾಜ್ಯದ SC/ST ಸಮುದಾಯಕ್ಕೆ ಮತ್ತೊಂದು ಗುಡ್‌ ನ್ಯೂಸ್‌; GIG ವರ್ಕರ್ಸ್‌ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಜಯಪುರ ಬದ್ರಿಯಾ ಜುಮ್ಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬೂಬಕರ್, ಉಪಾಧ್ಯಕ್ಷ ನಾಸಿರ್ ಹುಸೇನ್, ಕಾರ್ಯದರ್ಶಿ ಖಾದರ್ ಕೆ, ಖಜಾಂಚಿ ಎಂ ಕೆ ಮಹಮ್ಮದ್, ಪತ್ರಿಕಾ ವಿತರಕರಾದ ಅಬ್ದುಲ್ ಲತೀಫ್, ಯುವ ಮುಖಂಡರುಗಳಾದ ರಶೀದ್, ಇಸ್ಮಾಯಿಲ್ ಮಕ್ಕಿಕೊಪ್ಪ, ಮುಸ್ತಾಫಾ, ಮಾಜಿ ಕಾರ್ಯದರ್ಶಿ ಮಹಮ್ಮದ್ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.