ಸಕಲೇಶಪುರ: ವಾರದಲ್ಲಿ 6 ಜಾನುವಾರು ಮೇಲೆ ಚಿರತೆ ದಾಳಿ, ಮೂರು ಸಾವು

ಸಕಲೇಶಪುರ: (ನ್ಯೂಸ್ ಮಲ್ನಾಡ್ ವರದಿ)  ದನದ ಕೊಟ್ಟಿಗೆಯೊಳಗೆ ಚಿರತೆ ನುಗ್ಗಿ ಕರುವೊಂದನ್ನು ಹಿಡಿದು ಗಾಯಗೊಳಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದೆ. ಕಳೆದ ವಾರದಲ್ಲಿ 6 ಹಸುಗಳ ಮೇಲೆ ದಾಳಿ ಮಾಡಿದ್ದು, ಮೂರು ಮೃತಪಟ್ಟಿವೆ. ಚಿರತೆ ಹಿಡಿಯುವಂತೆ ಗ್ರಾಮಸ್ಥರು ಮಂಗಳವಾರ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

 

ಇದನ್ನೂ ಓದಿ; ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!; ಯಾವುದೆಲ್ಲಾ ವಸತಿ ಶಾಲೆ, ಎಲ್ಲಿ ಅರ್ಜಿ ಸಲ್ಲಿಸಬೇಕು?

ಗ್ರಾಮಕ್ಕೆ ಬುಧವಾರ ಸಿಸಿಎಫ್ ರವಿಶಂಕರ್, ಡಿಎಫ್ ಒ ಮೋಹನ್ ಭೇಟಿ ನೀಡಿ ಚಿರತೆ ದಾಳಿಗೆ ಒಳಗಾಗಿರುವ ಹಸುಗಳನ್ನು ಪರಿಶೀಲಿಸಿದರು. ಚಿರತೆ ಹಿಡಿಯಲು ಅರಣ್ಯ ಇಲಾಖೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಭಯ ಹಾಗೂ ಆತಂಕ ಬೇಡ ಎಂದು ರವಿಶಂಕರ್ ಗ್ರಾಮಸ್ಥರಿಗೆ ಮನವಿ ಮಾಡಿದರು.

ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಾರದವರಿಗೆ ಮಹತ್ವದ ಸುದ್ದಿ; ಮನೆಬಾಗಿಲಿಗೇ ಬರಲಿದ್ದರೆ ಅಂಗನವಾಡಿ ಕಾರ್ಯಕರ್ತೆಯರು

ಆರ್ ಎಫ್ ಒ ಶಿಲ್ಪಾ ವಸಂತ್ ಅವರು ಮುತ್ತೋಡಿ ವನ್ಯಜೀವಿ ಧಾಮದಿಂದ ಚಿರತೆ ಚಲನವಲನ ಪತ್ತೆ ಹಚ್ಚಲು 5 ಸಿಸಿಟಿವಿ ಕ್ಯಾಮೆರಾಗಳನ್ನು ತಂದು ಗ್ರಾಮದಲ್ಲಿ ಅಳವಡಿಸಿದರು. ಅರಸೀಕೆರೆಯಿಂದ ಹೆಚ್ಚುವರಿಯಾಗಿ ಎರಡು ಬೋನ್ ಗಳನ್ನು ತಂದು ಚಿರತೆ ಓಡಾಡಬಹುದಾದ ಪ್ರದೇಶಗಳನ್ನು ಗುರುತಿಸಿ ಇಡಲಾಗಿದೆ. ಇಲಾಖೆಯ ಸಿಬ್ಬಂದಿಯನ್ನು ಗ್ರಾಮದಲ್ಲಿಯೇ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಚಿರತೆಯನ್ನು ಶೀಘ್ರದಲ್ಲಿ ಹಿಡಿಯಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ವಸಂತ್ ಹೇಳಿದರು.

 

ಇದನ್ನೂ ಓದಿ; ರಾಜ್ಯದ SC/ST ಸಮುದಾಯಕ್ಕೆ ಮತ್ತೊಂದು ಗುಡ್‌ ನ್ಯೂಸ್‌; GIG ವರ್ಕರ್ಸ್‌ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಜಯಪುರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಸೀದಿ ಜಮಾತ್ ಸದಸ್ಯ ಹನೀಫ್ | ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಮಸೀದಿ ಸದಸ್ಯತ್ವದಿಂದ ಕಿಕ್ಕೌಟ್

 

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮುಸ್ಲಿಂ ಸಮುದಾಯವೇ ತಲೆ ತಗ್ಗಿಸುವಂತೆ ಮಾಡಿದ್ದು, ಜಯಪುರ ಬದ್ರಿಯಾ ಜುಮ್ಮಾ ಮಸೀದಿಯ ಜಮಾತ್ ನಿಂದ ಸದಸ್ಯತ್ವ ರದ್ದುಗೊಳಿಸಿ ಬಹಿಷ್ಕರಿಸಲು ಮಸೀದಿಯ ಸಮಿತಿ ವತಿಯಿಂದ ನಿರ್ಧರಿಸಲಾಗಿದೆ ಎಂದು ಮಸೀದಿ ಸಮಿತಿಯ ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಹೇಳಿದರು.

ಏನಿದು ಘಟನೆ:
ಅಂಗಡಿಗೆ ವಸ್ತುಕೊಳ್ಳಲು ಬಂದ ಅಪ್ರಾಪ್ತ ಬಾಲಕಿಗೆ ಆರೋಪಿ ಹನೀಫ್ ಲೈಂಗಿಕ ಕಿರುಕುಳ ನೀಡಿದ್ದು , ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಸಂತ್ರಸ್ಥ ಬಾಲಕಿಯ ಪೋಷಕರು ಆರೋಪಿಯ ವಿರುದ್ದ ಜಯಪುರ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಜಯಪುರ ಪೊಲೀಸ್ ಠಾಣೆಯ ಪಿಎಸ್ ಐ ಅಂಬರೀಶ್ ಆರೋಪಿಯನ್ನು ಬಂಧಿಸಿ, ಪೋಕ್ಸೋ ಹಾಗೂ ಐಪಿಸಿ 354 ಖಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಬುಧವಾರ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯ ಜಮಾತ್ ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಜಮಾತ್ ಖಂಡಿಸುತ್ತದೆ. ಜಮಾತ್ ನಿಂದ ಆರೋಪಿಯ ಸದಸ್ಯತ್ವ ರದ್ದುಪಡಿಸಲಾಗಿದೆ. ಇನ್ನು ಮುಂದೆ ಆ ವ್ಯಕ್ತಿಗೂ ಜಮಾತ್ ಗೂ ಯಾವುದೇ ಸಂಬಂಧ ಇಲ್ಲ ಎಂದರು.

ಈ ಸಂದರ್ಭದಲ್ಲಿ ಜಯಪುರ ಬದ್ರಿಯಾ ಜುಮ್ಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬೂಬಕರ್, ಉಪಾಧ್ಯಕ್ಷ ನಾಸಿರ್ ಹುಸೇನ್, ಕಾರ್ಯದರ್ಶಿ ಖಾದರ್ ಕೆ, ಖಜಾಂಚಿ ಎಂ ಕೆ ಮಹಮ್ಮದ್, ಪತ್ರಿಕಾ ವಿತರಕರಾದ ಅಬ್ದುಲ್ ಲತೀಫ್, ಯುವ ಮುಖಂಡರುಗಳಾದ ರಶೀದ್, ಇಸ್ಮಾಯಿಲ್ ಮಕ್ಕಿಕೊಪ್ಪ, ಮುಸ್ತಾಫಾ, ಮಾಜಿ ಕಾರ್ಯದರ್ಶಿ ಮಹಮ್ಮದ್ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.