ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಜಯಪುರ ಗ್ರಾಮದ ಚೌಡಿಕಟ್ಟೆಯಲ್ಲಿ ಸೀತಾವನ ಹಿತರಕ್ಷಣಾ ಹೋರಾಟ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ- ಕೇಶವ, ಉಪಾಧ್ಯಕ್ಷರು- ಶ್ರೀಧರ ಮತ್ತು ಸೋಮಶೇಖರ್, ಕಾರ್ಯದರ್ಶಿ- ಮಂಜುನಾಥ, ಸಹಕಾರ್ಯದರ್ಶಿ- ಸಂಪತ್ ಕುಮಾರ್, ಖಜಾಂಚಿ- ಪ್ರಸನ್ನ ಎ.ಎಸ್, ಗೌರವಾಧ್ಯಕ್ಷರು- ಎ,ಎನ್ ಅನಿಲ್ ಗೌಡ, ಮಾನಪ್ಪ ಗೌಡ ಹಾಗೂ ಸುಮಾರು 20 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ; 10th ಪಾಸಾದವರಿಗೆ ಅರ್ಜಿ ಆಹ್ವಾನ

ಸಮಿತಿ ರಚನೆ ಬಳಿಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ, ಸೀತಾವನದ ವಿಚಾರವಾಗಿ ಚರ್ಚಿಸಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಸೀತಾವನವನ್ನು ಸಮಿತಿಯ ಕೈಗೆ ಪಡೆದು ಅಭಿವೃದ್ದಿ ಪಡಿಸಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಪ್ರವಾಸಿತಾಣವಾಗಿ ಅಭಿವೃದ್ದಿ ಪಡಿಸಿ ಪುರಾತನ ಕಾಲದಿಂದಲೂ ಇದ್ದಂತಹ ಒಂದು ಪ್ರಸಿದ್ದ ತಾಣವಾಗಿ ಉಳಿಸಲು ತೀರ್ಮಾನಿಸಲಾಯಿತು.
ಇದನ್ನೂ ಓದಿ; HSRP ನಂಬರ್ ಪ್ಲೇಟ್; ನೋಂದಣಿ ಹೇಗೆ? ವೆಬ್ ಸೈಟ್ ಯಾವುದು?; ರಿಜಿಸ್ಟ್ರೇಷನ್ ಪ್ರಕ್ರಿಯೆ ವೇಳೆ ಹುಷಾರು! ಯಾಮಾರಬೇಡಿ!
ಸೀತಾವನ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದು. ಹಬ್ಬ ಹರಿದಿನಗಳಲ್ಲಿ ಹಿಂದೂಗಳು ಸೀತಾವನದ ಗುಹೆಯ ಒಳಬಾಗದ ನೀರಿನಲ್ಲಿ ಸ್ನಾನ ಮಾಡಿದರೆ ರೋಗ ರುಜಿನೆಗಳು ಬರುವುದಿಲ್ಲ ಎಂದು ಹಿಂದಿನ ಕಾಲದಿಂದಲೂ ನಡೆದು ಬಂದ ಪದ್ದತಿಯಾಗಿರುತ್ತದೆ. ಆದರೆ ಈಗಿನ ಸ್ಥಳಕ್ಕೆ ಗ್ರಾಮಸ್ಥರು ಹೋಗಲು ಬೀಡದೆ NSR ಎಸ್ಟೇಟಿನ ಮಾಲೀಕರು ತಕರಾರು ಮಾಡುತ್ತಿದ್ದು, ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮುಂಖಾಂತರ ಧಾರ್ಮಿಕ ಕೇಂದ್ರವನ್ನು ಉಳಿಸಬೇಕೆಂದು ತೀರ್ಮಾನಿಸಲಾಯಿತು.
ಶೃಂಗೇರಿ ಶ್ರೀಗಳಿಂದ ಮಹತ್ವದ ಆದೇಶ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ. ಎ. ಮುರಳಿ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ; ಆಡಳಿತ ತರಬೇತಿ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಆಹ್ವಾನ; ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದವರಿಗೆ ಜಾಬ್
ಈ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ನಿರ್ದೇಶನದಂತೆ 1989ರಲ್ಲಿ ಡಾ. ವಿ. ಆರ್. ಗೌರಿಶಂಕರ್ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಸುಮಾರು 35 ವರ್ಷಗಳ ಕಾಲ ಡಾ. ವಿ ಆರ್ ಗೌರಿಶಂಕರ್ ಮಠದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಶ್ರೀ ಶಾರದ ಪೀಠದ ನೂತನ ಸಿಇಒ ಮತ್ತು ಆಡಳಿತಾಧಿಕಾರಿ ಆಗಿ ಪಿ. ಎ. ಮುರಳಿ ಅವರನ್ನು ನೇಮಿಸಲಾಗಿದೆ. ವಿ.ಆರ್ ಗೌರಿಶಂಕರ್ ಅವರು ನೂತನ ಸಿಇಒ ಅವರಿಗೆ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ವಿಜಯ್ ಮಲ್ಯ ಮಾಲೀಕತ್ವದ UB Groups ಕಂಪನಿಯ ಸಿಇಓ ಆಗಿದ್ದರು. ಬಳಿಕ ಕಂಪೆನಿಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ; ಬಿಯರ್ ಪ್ರಿಯರಿಗೆ ಬಿಗ್ ಶಾಕ್; ಮತ್ತೆ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಸಿದ್ಧತೆ












