ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ದಿನಗಳಿಂದ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಮುಗಿಸಿ ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ಅವರನ್ನು ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಸಿಎಂ, ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಬಂದಾಗ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಬರೆದುಕೊಂಡಿದ್ದಾರೆ.
ಇನ್ನು ಕೊಡಗಿನ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿದ್ದಕ್ಕೆ ಸಿಎಂ ಧನ್ಯವಾದ ತಿಳಿಸಿದರು. ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಹೊಂದಿರುವ ಪಕ್ಷ, ಸ್ವಾತಂತ್ರ‍್ಯಕ್ಕೆ ಹೋರಾಡಿದೆ. ಈಗಿರುವ ರಾಜಕೀಯ ಪಕ್ಷಗಳು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿ ಆಗಿಲ್ಲ. ಬಿಜೆಪಿ ಯಾವತ್ತೂ ಕೂಡ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿ ಆದ ಪಕ್ಷ ಅಲ್ಲ. RSS ಆಗಲಿ ಜನಸಂಘ ಆಗಲೀ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಲಿಲ್ಲ. ದೇಶಕ್ಕೆ ಸ್ವಾತಂತ್ರ‍್ಯ ಕೊಟ್ಟಿದ್ದು, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಅಲ್ಲ. 1925 ರಲ್ಲಿ RSS ಪ್ರಾರಂಭ ಆದರೂ ಯಾಕೆ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವತ್ತು ನಿಮಗೆ ದೇಶ ಭಕ್ತಿ ಇರಲಿಲ್ವಾ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಯವರನ್ನ ಪ್ರಶ್ನಿಸಿದರು.

ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ; 10th ಪಾಸಾದವರಿಗೆ ಅರ್ಜಿ ಆಹ್ವಾನ


ದೇಶದ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್:
ದೇಶದಲ್ಲಿ ಬಿಜೆಪಿಯವರು ಒಂದೇ ಒಂದು ಅಣೆಕಟ್ಟು ಕಟ್ಟಿದ ಉದಾಹರಣೆ ಇದ್ದರೆ ನಾನು ಅವರ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದೂ ಸವಾಲೆಸೆದರು. ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ; HSRP ನಂಬರ್ ಪ್ಲೇಟ್; ನೋಂದಣಿ ಹೇಗೆ? ವೆಬ್ ಸೈಟ್ ಯಾವುದು?; ರಿಜಿಸ್ಟ್ರೇಷನ್ ಪ್ರಕ್ರಿಯೆ ವೇಳೆ ಹುಷಾರು! ಯಾಮಾರಬೇಡಿ!
ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ನೇರವಾಗಿ ಹೇಳಿದರೂ ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರದು ಸಂವಿಧಾನ ವಿರೋಧಿ ನಿಲುವು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಇವತ್ತು ದೇಶ ಅಭಿವೃದ್ದಿ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ಕಾರಣ. ಕಳೆದ ಬಾರಿ ಸಿಎಂ ಆಗಿದ್ದಾಗ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆ. ಅದೇ ಬಿಜೆಪಿಯವರು 2018 ರಲ್ಲಿ 600 ಭರವಸೆ ಕೊಟ್ಟು ಕೇವಲ 10% ಭರವಸೆ ಈಡೇರಿಸಿದ್ದಾರೆ. ನರೇಂದ್ರ ಮೋದಿಜಿ ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಅಂದಿದ್ರಲ್ಲಾ ಮಾಡಿದೀರ..? ಬೆಲೆ ಏರಿಕೆ ತಡೆದು ಅಚ್ಛೇ ದಿನ್ ತರುತ್ತೀವಿ ಅಂದಿದ್ರಿ, ಬೆಲೆ ಏನಾಗಿದೆ ಅಂತ ಗೊತ್ತಾ..? ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಕಹಾಹೆ ಹೋ…? ನರೇಂದ್ರ ಮೋದೀಜಿ ಕ್ಯೋ ಇತುನೆ ಜೂಟ್ ಬೋಲಿಯೇ..? ಹೀಗಾಗಿ ಬಿಜೆಪಿ, ಮೋದಿಯನ್ನ ನಂಬಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದರು.
ನಾವು ಯಾವತ್ತೂ ಜಾತಿ, ಭಾಷೆ ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಲು ಹೋಗಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. NDRF ಹಣ ಕೇಂದ್ರದ ಅನುದಾನ ಅಲ್ಲ ನಮಗೆ ಕೊಡಬೇಕಾದ ಹಣ. ಇವತ್ತಿನವರೆಗೂ ಒಂದು ಬಿಡಿಗಾಸೂ ಕೂಡ ಕೇಂದ್ರ ಬಿಡುಗಡೆ ಮಾಡಿಲ್ಲ. ಮಿಸ್ಟರ್ ಪ್ರತಾಪ್ ಸಿಂಹ ಕೊಡಗಿಗೆ ಏನು ಮಾಡಿದೀರ..? ಸುಳ್ಳು ಹೇಳೋದು, ರೈಲು ಬಿಡೋದು ಬಿಟ್ಟು ನೀನು ಬೇರೆ ಏನು ಮಾಡಿಲ್ಲ ಎಂದು ಚಾಟಿ ಬೀಸಿದರು.
ಕಾಫಿ ಬೆಳೆಗಾರರಿಗೆ ಶೀಘ್ರವೇ ಸಿಹಿ ಸುದ್ದಿ:
ರಾಜ್ಯದ ಕಾಫಿ ಬೆಳೆಗಾರರ ಮಹತ್ವದ ಬೇಡಿಕೆಯಲ್ಲಿ ಒಂದು ಉಚಿತ ವಿದ್ಯುತ್ ನೀಡೋದಾಗಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮತಿಸಿದ್ದು, ಪರಿಶೀಲಿಸಿ, ಶೀಘ್ರವೇ ಆದೇಶ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಉಚಿತ ವಿದ್ಯುತ್ ನೀಡುವ ಬಗ್ಗೆ 2008 ರಿಂದಲೂ ಬೇಡಿಕೆ ಇದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಈ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದರು.
ಶೃಂಗೇರಿ ಶ್ರೀಗಳಿಂದ ಮಹತ್ವದ ಆದೇಶ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ. ಎ. ಮುರಳಿ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ; ಆಡಳಿತ ತರಬೇತಿ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಆಹ್ವಾನ; ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದವರಿಗೆ ಜಾಬ್
ಈ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ನಿರ್ದೇಶನದಂತೆ 1989ರಲ್ಲಿ ಡಾ. ವಿ. ಆರ್. ಗೌರಿಶಂಕರ್ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಸುಮಾರು 35 ವರ್ಷಗಳ ಕಾಲ ಡಾ. ವಿ ಆರ್ ಗೌರಿಶಂಕರ್ ಮಠದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಶ್ರೀ ಶಾರದ ಪೀಠದ ನೂತನ ಸಿಇಒ ಮತ್ತು ಆಡಳಿತಾಧಿಕಾರಿ ಆಗಿ ಪಿ. ಎ. ಮುರಳಿ ಅವರನ್ನು ನೇಮಿಸಲಾಗಿದೆ. ವಿ.ಆರ್ ಗೌರಿಶಂಕರ್ ಅವರು ನೂತನ ಸಿಇಒ ಅವರಿಗೆ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ವಿಜಯ್ ಮಲ್ಯ ಮಾಲೀಕತ್ವದ UB Groups ಕಂಪನಿಯ ಸಿಇಓ ಆಗಿದ್ದರು. ಬಳಿಕ ಕಂಪೆನಿಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ; ಬಿಯರ್ ಪ್ರಿಯರಿಗೆ ಬಿಗ್ ಶಾಕ್; ಮತ್ತೆ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಸಿದ್ಧತೆ













