ಬಾಳೆಹೊನ್ನೂರು: ರೈತ ಹಿತರಕ್ಷಣಾ ಸಮಿತಿ ರಚನೆ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದು ಪರಿಹರಿಸುವ ಉದ್ದೇಶದಿಂದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಶೃಂಗೇರಿ ಕ್ಷೇತ್ರ ಮಟ್ಟದ ಸಮಿತಿಯನ್ನು ರಚಿಸಲಾಯಿತು.

 

ಇದನ್ನೂ ಓದಿ; ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; ಈ ದಿನ ಬರಲಿದೆ 16 ಕಂತಿನ ಹಣ

ಎನ್.ಆರ್.ಪುರ, ಖಾಂಡ್ಯ, ಕೊಪ್ಪ, ಶೃಂಗೇರಿ ಭಾಗಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ನೂತನ ಕಾರ್ಯಾಧ್ಯಕ್ಷರಾಗಿ ಎಂ.ಎನ್.ನಾಗೇಶ್, ಗೌರವ ಅಧ್ಯಕ್ಷರಾಗಿ ರಾಯಪ್ಪ ಗೌಡ, ಗೌರವ ಸಲಹೆಗಾರರಾಗಿ ರವೀಂದ್ರ ಕೆಸುವಿನ ಮನೆ ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ; ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾನಿಂದ ನೇಮಕಾತಿ; 3000 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ?

ಈ ಕುರಿತು ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಎಂ.ಎನ್.ನಾಗೇಶ್ ಮಾತನಾಡಿ, ಮಲೆನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದು ಪರಿಹರಿಸಲು ಕಾರ್ಯ ನಿರ್ವಹಿಸಲಾಗುವುದು. ಇದಕ್ಕಾಗಿ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಹೋಬಳಿ ಕೇಂದ್ರಗಳಲ್ಲಿ ಸಭೆ ನಡೆಸಲಾಗುವುದು. ಭದ್ರಾ ವನ್ಯಜೀವಿ ಸಂರಕ್ಷಣಾ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು. ಸೆಕ್ಷನ್ 4ರ ಮೀಸಲು ಅರಣ್ಯ ಭೂಮಿ ಸಂಬಂಧ ನೇಮಕ ಆಗಿರುವ ನೋಡೆಲ್ ಅಧಿಕಾರಿ ಕ್ಷೇತ್ರ ಪ್ರವಾಸ ಮಾಡಲು ಸಮಿತಿ ಮಾತುಕತೆ ನಡೆಸಲಾಗುವುದು. ಫಾರ್ಮ್ 50, 53 ಅರಣ್ಯ ಹಕ್ಕು ಸಮಿತಿ ಅಡಿ ಹಕ್ಕುಪತ್ರ ವಿತರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

 

ತಾಲೂಕು ಮಲೆನಾಡು ಹಿತರಕಣಾ ವೇದಿಕೆ ಕಾರ್ಯದರ್ಶಿ ಪುರುಷೋತ್ತಮ್, ಖಾಂಡ್ಯ ನಾಗರಿಕ ವೇದಿಕೆ ಸದಸ್ಯ ನವೀನ್ ಕರಗಣೆ, ಪ್ರಮುಖರಾದ ವಿನಯ್ ಕಣಿವೆ, ಚಂದ್ರಶೇಖರ್ ರೈ, ಮನೋಹರ್ ಮುತ್ತಿನಕೊಪ್ಪ, ಶೇಷಪ್ಪಗೌಡ, ಮಂಜು ಶೆಟ್ಟಿ, ರಂಜಿತ್, ಆದರ್ಶ್, ಕಾರ್ತಿಕ್ ಕಾರ್‌ಗದ್ದೆ, ಸಂದೀಪ್ ಇದ್ದರು.

ಶೃಂಗೇರಿ: ಸಾಲ ಮರುಪಾವತಿ ಮಾಡುವಂತೆ ನಿಂದಿಸಿ ಹಲ್ಲೆ ಆರೋಪ; ಮಹಿಳೆ ಆತ್ಮಹತ್ಯೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಾಲ ವಸೂಲಾತಿಗೆ ಬಂದ ವೇಳೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹನುಮಂತನಗರ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಪಿತಾ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಇದನ್ನೂ ಓದಿ; ನರೇಗಾ ಕಾರ್ಮಿಕರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್

ಕಳೆದ ಆರೇಳು ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ ಅರ್ಪಿತಾ 1 ಲಕ್ಷ ಸಾಲ ಪಡೆದಿದ್ದರು. ಇಂದು ಸಾಲದ ವಿಚಾರವಾಗಿ ಆಕೆಯ ಮನೆಗೆ ಸಂಘದವರು ತೆರಳಿದ್ದಾರೆ. ಈ ವೇಳೆ ಅರ್ಪಿತಾ ಹಾಗೂ ಸಂಘದವರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಾಲ ಕಟ್ಟಲು ಆಗದಿದ್ದರೆ ಎಲ್ಲಾದ್ರೂ ಹೋಗಿ ಸಾಯಿ ಎಂದು ಗಲಾಟೆ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಯಿಂದ ಮನನೊಂದ ಅರ್ಪಿತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅರ್ಪಿತಾಗೆ 5 ವರ್ಷದ ಹಿಂದೆ ಹನುಮಂತಪ್ಪನ ಜೊತೆ ವಿವಾಹವಾಗಿದ್ದು, ಮೂರುವರೆ ವರ್ಷದ ಮಗನಿದ್ದಾನೆ. ಇಂದು ಮನೆಯಲ್ಲಿ ತಾಯಿ ಹಾಗೂ ಮಗ ನಾಗಾರ್ಜುನ್ ಮಾತ್ರ ಇದ್ದರು.

ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯಬೇಕಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.