ಬಿಜೆಪಿ ಸಂಸದನನ್ನು ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕನ ಮನವಿ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದೆ.

 

ಇದನ್ನೂ ಓದಿ; 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಇಲ್ಲಿದೆ ಪಟ್ಟಿ

ಶಿವಮೊಗ್ಗದ ಬೆಕ್ಕಿನ ಕಲ್ಮಟದಲ್ಲಿ ಆಯೋಜಿಸಿರುವ ಗುರು ಬಸವಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಭಾವೈಕ್ಯತ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಅಭಿವೃದ್ಧಿ ಕೆಲಸಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವುದನ್ನು ಗಮನಿಸಿದ್ದೇನೆ. ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯವಾಗಿದೆ.

ಇದನ್ನೂ ಓದಿ; ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ ಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ

ಬಿ.ವೈ ರಾಘವೇಂದ್ರ ಅವರಂಥ ಲೋಕಸಭಾ ಸದಸ್ಯರನ್ನು ಪಡೆದಿರುವ ನೀವೇ ಧನ್ಯರು. ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿ ಮುನ್ನಡೆಯುತ್ತಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಆಗಬೇಕಿರುವುದು ಮೊದಲ ಆದ್ಯತೆಯಾಗಬೇಕು. ಜನರ ಅಭಿಲಾಷೆಯಂತೆ ಕೆಲಸ ಮಾಡಿರುವ ಲೋಕಸಭಾ ಸದಸ್ಯರನ್ನು ಮುಂಬರುವ ಚುನಾವಣೆಯಲ್ಲೂ ಗೆಲ್ಲಿಸಬೇಕು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದ್ದಾರೆ.

 

ಇದನ್ನೂ ಓದಿ; ವಿದ್ಯುತ್ ಬಿಲ್ ಹೊರೆ ಇಳಿಸಲು ಕೇಂದ್ರದ ಹೊಸ ಯೋಜನೆ ಜಾರಿ; 1 ಕೋಟಿ ಮನೆಗಳ ಮೇಲೆ ಬರಲಿದೆ ಸೋಲಾರ್‌ ಫಲಕಗಳು;ಯಾರಿಗೆ ಸಿಗಲಿದೆ ಪ್ರಯೋಜನ, ಯಾವ ದಾಖಲೆಗಳು ಬೇಕು?

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿರುವ ಸಾಮಾನ್ಯ ಕಾರ್ಯಕರ್ತರು ಎಲ್ಲಾ ಪಕ್ಷಗಳ ಮುಖಂಡರುಗಳ ಹಣೆಬರಹ ಇದು, ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದಲ್ಲೂ ಸಹ ಇಂತಹ ವಾತಾವರಣ ಇದೆ, ಕಾರ್ಯಕರ್ತರನ್ನು ಮಾತ್ರ ಬಲಿಪಶು ಮಾಡುತ್ತಾರೆ, ಈಗಿನ ಘಟನೆ ದೊಡ್ಡವರ ಹೊಂದಾಣಿಕೆ ರಾಜಕಾರಣಕ್ಕೆ ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ವಿರೋಧ ಪಕ್ಷದ ನಾಯಕನಾಗಿ ಬಂದಿದ್ದಾಗ ಕೆಲವು ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದರು

ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ದಿನಗಳಿಂದ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಮುಗಿಸಿ ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ಅವರನ್ನು ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದ್ದಾರೆ. ಈ ಬಗ್ಗೆ ಫೇಸ್​​ ಬುಕ್​ ಪೋಸ್ಟ್​ ಹಾಕಿರುವ ಸಿಎಂ, ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಬಂದಾಗ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಬರೆದುಕೊಂಡಿದ್ದಾರೆ.

ಇನ್ನು ಕೊಡಗಿನ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿದ್ದಕ್ಕೆ ಸಿಎಂ ಧನ್ಯವಾದ ತಿಳಿಸಿದರು. ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಹೊಂದಿರುವ ಪಕ್ಷ, ಸ್ವಾತಂತ್ರ‍್ಯಕ್ಕೆ ಹೋರಾಡಿದೆ. ಈಗಿರುವ ರಾಜಕೀಯ ಪಕ್ಷಗಳು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿ ಆಗಿಲ್ಲ. ಬಿಜೆಪಿ ಯಾವತ್ತೂ ಕೂಡ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿ ಆದ ಪಕ್ಷ ಅಲ್ಲ. RSS ಆಗಲಿ ಜನಸಂಘ ಆಗಲೀ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಲಿಲ್ಲ. ದೇಶಕ್ಕೆ ಸ್ವಾತಂತ್ರ‍್ಯ ಕೊಟ್ಟಿದ್ದು, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಅಲ್ಲ. 1925 ರಲ್ಲಿ RSS ಪ್ರಾರಂಭ ಆದರೂ ಯಾಕೆ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವತ್ತು ನಿಮಗೆ ದೇಶ ಭಕ್ತಿ ಇರಲಿಲ್ವಾ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಯವರನ್ನ ಪ್ರಶ್ನಿಸಿದರು.

ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ; 10th ಪಾಸಾದವರಿಗೆ ಅರ್ಜಿ ಆಹ್ವಾನ

ದೇಶದ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್:
ದೇಶದಲ್ಲಿ ಬಿಜೆಪಿಯವರು ಒಂದೇ ಒಂದು ಅಣೆಕಟ್ಟು ಕಟ್ಟಿದ ಉದಾಹರಣೆ ಇದ್ದರೆ ನಾನು ಅವರ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದೂ ಸವಾಲೆಸೆದರು. ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ ಎಂದು ಹರಿಹಾಯ್ದರು.

ಇದನ್ನೂ ಓದಿ; HSRP ನಂಬರ್ ಪ್ಲೇಟ್; ನೋಂದಣಿ ಹೇಗೆ? ವೆಬ್‌ ಸೈಟ್ ಯಾವುದು?; ರಿಜಿಸ್ಟ್ರೇಷನ್ ಪ್ರಕ್ರಿಯೆ ವೇಳೆ ಹುಷಾರು! ಯಾಮಾರಬೇಡಿ!

ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ನೇರವಾಗಿ ಹೇಳಿದರೂ ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರದು ಸಂವಿಧಾನ ವಿರೋಧಿ ನಿಲುವು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಇವತ್ತು ದೇಶ ಅಭಿವೃದ್ದಿ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ಕಾರಣ. ಕಳೆದ ಬಾರಿ ಸಿಎಂ ಆಗಿದ್ದಾಗ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆ. ಅದೇ ಬಿಜೆಪಿಯವರು 2018 ರಲ್ಲಿ 600 ಭರವಸೆ ಕೊಟ್ಟು ಕೇವಲ 10% ಭರವಸೆ ಈಡೇರಿಸಿದ್ದಾರೆ. ನರೇಂದ್ರ ಮೋದಿಜಿ ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಅಂದಿದ್ರಲ್ಲಾ ಮಾಡಿದೀರ..? ಬೆಲೆ ಏರಿಕೆ ತಡೆದು ಅಚ್ಛೇ ದಿನ್ ತರುತ್ತೀವಿ ಅಂದಿದ್ರಿ, ಬೆಲೆ ಏನಾಗಿದೆ ಅಂತ ಗೊತ್ತಾ..? ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಕಹಾಹೆ ಹೋ…? ನರೇಂದ್ರ ಮೋದೀಜಿ ಕ್ಯೋ ಇತುನೆ ಜೂಟ್ ಬೋಲಿಯೇ..? ಹೀಗಾಗಿ ಬಿಜೆಪಿ, ಮೋದಿಯನ್ನ ನಂಬಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದರು.

ನಾವು ಯಾವತ್ತೂ ಜಾತಿ, ಭಾಷೆ ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಲು ಹೋಗಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. NDRF ಹಣ ಕೇಂದ್ರದ ಅನುದಾನ ಅಲ್ಲ ನಮಗೆ ಕೊಡಬೇಕಾದ ಹಣ. ಇವತ್ತಿನವರೆಗೂ ಒಂದು ಬಿಡಿಗಾಸೂ ಕೂಡ ಕೇಂದ್ರ ಬಿಡುಗಡೆ ಮಾಡಿಲ್ಲ. ಮಿಸ್ಟರ್ ಪ್ರತಾಪ್ ಸಿಂಹ ಕೊಡಗಿಗೆ ಏನು ಮಾಡಿದೀರ..? ಸುಳ್ಳು ಹೇಳೋದು, ರೈಲು ಬಿಡೋದು ಬಿಟ್ಟು ನೀನು ಬೇರೆ ಏನು ಮಾಡಿಲ್ಲ ಎಂದು ಚಾಟಿ ಬೀಸಿದರು.

ಕಾಫಿ ಬೆಳೆಗಾರರಿಗೆ ಶೀಘ್ರವೇ ಸಿಹಿ ಸುದ್ದಿ:
ರಾಜ್ಯದ ಕಾಫಿ ಬೆಳೆಗಾರರ ಮಹತ್ವದ ಬೇಡಿಕೆಯಲ್ಲಿ ಒಂದು ಉಚಿತ ವಿದ್ಯುತ್ ನೀಡೋದಾಗಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮತಿಸಿದ್ದು, ಪರಿಶೀಲಿಸಿ, ಶೀಘ್ರವೇ ಆದೇಶ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.  ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಉಚಿತ ವಿದ್ಯುತ್ ನೀಡುವ ಬಗ್ಗೆ 2008 ರಿಂದಲೂ ಬೇಡಿಕೆ ಇದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಈ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.