ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಚರಣೆ ದಿಢೀರ್ ಸ್ಥಗಿತಗೊಂಡಿದೆ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಾರದವರಿಗೆ ಮಹತ್ವದ ಸುದ್ದಿ; ಮನೆಬಾಗಿಲಿಗೇ ಬರಲಿದ್ದರೆ ಅಂಗನವಾಡಿ ಕಾರ್ಯಕರ್ತೆಯರು

ಅರ್ಜುನ ಆನೆ ಮೃತಪಟ್ಟ ಹಿನ್ನೆಲೆ ಕಾರ್ಯಚರಣೆ ಸ್ಥಗಿತ:
ಮೈಸೂರು ದಸರಾ ದಲ್ಲಿ 8 ಬಾರಿ ಅಂಬಾರಿ ಹೊತ್ತು ಇತಿಹಾಸ ಸೃಷ್ಟಿಸಿ ನಾಡಿನ ಜನರ ಗಮನ ಸೆಳೆದಿದ್ದ ಅರ್ಜುನ ಆನೆ ಸಾವಿನಿಂದ ತೀವ್ರ ದುಃಖದಲ್ಲಿರುವ ಜಿಲ್ಲೆಯ ಮಾವುತರು ಹಾಗೂ ಕಾವಡಿಗರು ಕರ್ತವ್ಯಕ್ಕೆ ಗೈರಾಗಿರುವ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತವಾಗಿದೆ.
ಇದನ್ನೂ ಓದಿ; ರಾಜ್ಯದ SC/ST ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್; GIG ವರ್ಕರ್ಸ್ ಓರಿಯಂಟೇಶನ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
6 ಸಾಕಾನೆಗಳಿಂದ ಕಾರ್ಯಚರಣೆ:
ಕಾಡಾನೆ ಸೆರೆಗಾಗಿ ಶಿಬಿರದಿಂದ 6 ಸಾಕಾನೆಗಳು ಬಂದಿದ್ದವು, ಇದರಲ್ಲಿ ದಸರಾ ಗಜಪಡೆಯ ಮಹೇಂದ್ರ, ಗಜೇಂದ್ರ, ನೇತೃತ್ವ ವಹಿಸಿದ್ದವು. ಮೂಡಿಗೆರೆ ಸುತ್ತಮುತ್ತ ತೀವ್ರ ಉಪಟಳ ನೀಡುತ್ತಿದ್ದ ಆನೆಗಳ ಹಾವಳಿಯಿಂದಾಗಿ ಬೈರಾಪುರದ ಬಳಿ 3 ಕಾಡಾನೆಗಳ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು ಅರ್ಜುನನ ಅಕಾಲಿಕ ಮರಣದಿಂದ ಸದ್ಯ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದೆ.
ಎನ್.ಆರ್.ಪುರ: ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ಎರಚಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಸುಂದರ್ ರಾಜ್ ಎಂಬುವರ ಮೇಲೆ ಪಕ್ಕದ ಮನೆ ಜೇಮ್ಸ್ ಆಸಿಡ್ ದಾಳಿ ಮಾಡಿರುವ ವ್ಯಕ್ತಿ.
ಇದನ್ನೂ ಓದಿ; ಎಸ್.ಎಸ್.ಎಲ್.ಸಿ, ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ ನಾಯಿಗೆ ಬೈದಿದ್ದಾನೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಕ್ಕದ ಮನೆ ವ್ಯಕ್ತಿ ಜೇಮ್ಸ್ ಆಸಿಡ್ ದಾಳಿ ಮಾಡಿದ್ದಾನೆ. ಆಸಿಡ್ ದಾಳಿಗೊಳಗಾದ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿ, ಕಣ್ಣಿನ ಪದರ ಬದಲಿಸುವಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ವೈದ್ಯರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ; ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಳ; ಇಲ್ಲಿದೆ ಇವತ್ತಿನ ದರಪಟ್ಟಿ
ನಾಯಿ ಹೆಸರಿನಲ್ಲಿ ಜೇಮ್ಸ್ ಗೆ ಮಾಲೀಕ ಬೈಯುತ್ತಿದ್ದ ಎನ್ನಲಾಗಿದ್ದು ಇದರಿಂದ ಸಿಟ್ಟಿಗೆದ್ದು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಜೇಮ್ಸ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 05.12.2023












