ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮೂಲಭೂತ ಸೌಲಭ್ಯ ಹಾಗೂ ಸೇವಾ ವಿಷಯಗಳ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಶೃಂಗೇರಿ ಘಟಕ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಇದನ್ನೂ ಓದಿ; ಶಾಲಾ ಮಕ್ಕಳಿಗೆ ದಸರಾ ರಜೆ ವೇಳಾಪಟ್ಟಿ ಪ್ರಕಟ; ಎಷ್ಟು ದಿನ ರಜೆ, ಇಲ್ಲಿದೆ ಚೆಕ್ ಮಾಡಿ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿಗಳಿಲ್ಲ ಅಲ್ಲದೆ ಮೂಲಭೂತ ಸೌಕರ್ಯಗಳಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆ ಎಲ್ಲಾ ಕೆಲಸಗಳೊಂದಿಗೆ ಸರ್ಕಾರದ ಆದೇಶದಂತೆ ಇತರೆ ಚುನಾವಣೆ ಕೆಲಸ, ಅತಿವೃಷ್ಟಿ, ಅನಾವೃಷ್ಠಿ ಇನ್ನಿತರ ಕಾರ್ಯ ನಿರ್ವಹಿಸಬೇಕಿದೆ. ದಿನನಿತ್ಯದ ಸಾರ್ವಜನಿಕ ಕಾರ್ಯಗಳಲ್ಲಿ ನೂರಾರು ಸೇವೆ ನೀಡುವಾಗ ಮಾರಣಾಂತಿಕ ಹಲ್ಲೆ , ದೈಹಿಕ ಹಲ್ಲೆ ಇತರೆ ಪ್ರಕರಣ ನಿರಂತರ ನಡೆಯುತ್ತಿದೆ ಎಂದು ತಾಲೂಕು ಘಟಕ ಅಧ್ಯಕ್ಷ ವಿನಯ್ ಕುಮಾರ್ ಹೇಳಿದರು.
ಇದನ್ನೂ ಓದಿ; ಇಂತಹವರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5,000; ಯಾರಿಗೆ? ಇಲ್ಲಿದೆ ನೋಡಿ
ಇನ್ನು ಕಾರ್ಯದರ್ಶಿ ಶಿಲ್ಪ ಮಾತನಾಡಿ, ಮಹಿಳಾ ಅಧಿಕಾರಿ, ನೌಕರರಿಗೆ ಹೆಚ್ಚಿನ ಕೆಲಸದ ಒತ್ತಡಗಳಿವೆ. ಅಂತರಜಿಲ್ಲಾ ವರ್ಗಾವಣೆ ಸೌಲಭ್ಯವಿಲ್ಲದೇ ತೊಂದರೆಯಾಗಿದೆ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ, ತಾಂತ್ರಿಕ ಹುದ್ದೆಗೆ ನೀಡುವ ವೇತನ ಶ್ರೇಣಿ ನಿಗದಿ ಪಡಿಸಿ ಆದೇಶ ನೀಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ, ಅಂತರ ಜಿಲ್ಲಾ ವರ್ಗಾವಣೆ ಮರು ಆರಂಭಿಸಬೇಕು ಎಂದರು.
ಇದನ್ನೂ ಓದಿ; ಜ್ವರ ಬಂದ್ರೆ ಮಾತ್ರೆ ತಗೋತೀರಾ? ಹುಷಾರ್…!; ಪ್ಯಾರಸಿಟಮಲ್ ಸೇರಿ 53 ಔಷಧಗಳ ಗುಣಮಟ್ಟ ತಪಾಸಣೆಯಲ್ಲಿ ವಿಫಲ!
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಭುಗೌಡ, ಅಶ್ಫಿಯಾ ಪರ್ವೀನ್, ಶಾಮಪ್ಪ ಪತ್ರೋಡು, ಲಕ್ಷಣ್ ನಾಯಕ್, ಅನುಷ, ಅನುಪ್, ಬಿಂದಿಯ, ಮಾಲಿನಿ ಮತ್ತಿತರರು ಇದ್ದರು.












