ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಭತ್ತದ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಕಾರ್ಲಗದ್ದೆ ಗ್ರಾಮದಲ್ಲಿ ನಡೆದಿದೆ. ಕಾರ್ಲಗದ್ದೆ ಗ್ರಾಮದ ಕೃಷಿಕ ಸತೀಶ್ ಶೆಟ್ಟಿ (45) ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ದುರ್ದೈವಿ.
ಇದನ್ನೂ ಓದಿ; ಶಾಲಾ ಮಕ್ಕಳಿಗೆ ದಸರಾ ರಜೆ ವೇಳಾಪಟ್ಟಿ ಪ್ರಕಟ; ಎಷ್ಟು ದಿನ ರಜೆ, ಇಲ್ಲಿದೆ ಚೆಕ್ ಮಾಡಿ

ನಿನ್ನೆ ಗುರುವಾರ ಮುಂಜಾನೆ ಎಂದಿನಂತೆ ಗದ್ದೆಗೆ ತೆರಳಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸತೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಧ್ಯಾಹ್ನದ ವೇಳೆ ಸತೀಶ್ ಮೃತಪಟ್ಟಿರುವ ವಿಷಯ ಕುಟುಂಬದವರಿಗೆ ತಿಳಿದಿದೆ.
ಇದನ್ನೂ ಓದಿ; ಇಂತಹವರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5,000; ಯಾರಿಗೆ? ಇಲ್ಲಿದೆ ನೋಡಿ
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಜ್ವರ ಬಂದ್ರೆ ಮಾತ್ರೆ ತಗೋತೀರಾ? ಹುಷಾರ್…!; ಪ್ಯಾರಸಿಟಮಲ್ ಸೇರಿ 53 ಔಷಧಗಳ ಗುಣಮಟ್ಟ ತಪಾಸಣೆಯಲ್ಲಿ ವಿಫಲ!












