ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪಿಡಿಓ ನೇಮಕಾತಿಗಾಗಿ ಪಂಚಾಯಿತಿ ಮುಂದೆ ಏಕಾಂಗಿ ಮೌನ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆಯಲ್ಲಿ ನಡೆದಿದೆ.
ಇದನ್ನೂ ಓದಿ; ಶಾಲಾ ಮಕ್ಕಳಿಗೆ ದಸರಾ ರಜೆ ವೇಳಾಪಟ್ಟಿ ಪ್ರಕಟ; ಎಷ್ಟು ದಿನ ರಜೆ, ಇಲ್ಲಿದೆ ಚೆಕ್ ಮಾಡಿ

ಕೊಟ್ಟಿಗೆಹಾರ ಗ್ರಾಮದ ಸಂಜಯ್ ಎಂಬುವವರಿಂದ ಮೌನ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಇಂತಹವರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5,000; ಯಾರಿಗೆ? ಇಲ್ಲಿದೆ ನೋಡಿ
ಪಿಡಿಓ ಇಲ್ಲದೆ 15ನೇ ಹಣಕಾಸು ಯೋಜನೆ ಉಪಯೋಗವಾಗ್ತಿಲ್ಲ. ವಾರಕ್ಕೆ ಒಂದೆರಡು ಬಾರಿ ಬಂದು-ಹೋಗುವ ಪಿಡಿಓ ಬೇಡ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆ ಹೆಚ್ಚಾಗಿದೆ. ಜೊತೆಗೆ ಪಿಡಿಓ ಇಲ್ಲದೆ ಯಾವ ಕೆಲಸ ಕಾರ್ಯಗಳು ಆಗ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಖಾಯಂ ಪಿಡಿಓ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ; ಜ್ವರ ಬಂದ್ರೆ ಮಾತ್ರೆ ತಗೋತೀರಾ? ಹುಷಾರ್…!; ಪ್ಯಾರಸಿಟಮಲ್ ಸೇರಿ 53 ಔಷಧಗಳ ಗುಣಮಟ್ಟ ತಪಾಸಣೆಯಲ್ಲಿ ವಿಫಲ!












