ಮೂಡಿಗೆರೆ: ಅಕ್ರಮ ಮರ ಸಾಗಣೆ – 1 ಲಕ್ಷ ಮೌಲ್ಯದ ಹಲಸಿನ ಸೈಜು ಜಪ್ತಿ, ಇಬ್ಬರ ಬಂಧನ

ಮೂಡಿಗೆರೆ: (ನ್ಯೂಸ್‌ ಮಲ್ನಾಡ್‌ ವರದಿ) ಪಟ್ಟಣದ ಸಮೀಪದ ಕೆ.ಎಂ. ರಸ್ತೆಯ ಸಿದ್ದಾರ್ಥ ವನ ಬಳಿ ಗುರುವಾರ ರಾತ್ರಿ ಸುಮಾರು 8 ಗಂಟೆಯ ವೇಳೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಲಸಿನ ಮರದ ಸೈಜುಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ.

KA-46-6177 ಸಂಖ್ಯೆಯ ಬೊಲೆರೋ ಪಿಕಪ್ ವಾಹನದಲ್ಲಿ ಯಾವುದೇ ಪರ್ಮಿಟ್ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 45 ಅಡಿ ಹಲಸಿನ ಸೈಜುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 1 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

ಈ ಸಂಬಂಧ ಹಳೇ ಮೂಡಿಗೆರೆಯ ಶಿವಪ್ಪ ಬಿನ್ ಗೋವಿಂದಯ್ಯ (A1) ಹಾಗೂ ಗುತ್ತಿ ಗ್ರಾಮದ ವಿಕ್ರಮ್ ಜಿ.ಸಿ. ಬಿನ್ ಚಂದ್ರೇಗೌಡ (A2) ವಿರುದ್ಧ ಅರಣ್ಯ ಮೊಕದ್ದಮೆ ದಾಖಲಿಸಲಾಗಿದೆ.

ಡಿಸಿಎಫ್ ರಮೇಶ್ ಬಾಬು ಹಾಗೂ ಎಸಿಎಫ್ ಆಕರ್ಷ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಗೆ ಆರ್‌ಎಫ್‌ಒ ಮಂಜುನಾಥ್ ಜಿ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಅಶ್ವಥ್, ಬಗಲಿ, ಬೀಟ್ ಫಾರೆಸ್ಟರ್‌ಗಳಾದ ಪರಮೇಶ್, ಸುರೇಶ್, ವಾಚರ್ ಉದಯ್ ಹಾಗೂ ವಾಹನ ಚಾಲಕರಾದ ಸುಮಂತ್ ಮತ್ತು ನವರಾಜ್ ಭಾಗವಹಿಸಿದ್ದರು. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.