ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬಸರೀಕಟ್ಟೆ ಸಮೀಪದ ಸೋಮೇಶ್ವರ ಖಾನ್ ಬಳಿ ಮುಂಜಾನೆ ಟೆಂಪೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಲಕಾಲ ಬಸರೀಕಟ್ಟೆಯಿಂದ ಹೇರೂರು ಸಂಪರ್ಕಿಸುವ ರಸ್ತೆ ಬಂದಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಸರೀಕಟ್ಟೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಮಣಿಕಂಠನ್ ಕಂದಸ್ವಾಮಿ , ಪ್ರವೀಣ್, ಕೃಷ್ಣ, ಶರವಣ, ಸಂತೋಷ್, ಕಾರ್ತಿಕ್, ಮಣಿ ಸ್ಥಳೀಯರಾದ ಶರಣ್ ಡಿ ಕುನಃ, ಕುವೆಲ್ಹೋ ರವರ ಸಹಕಾರ ದಿಂದ ಒಂದು ಬದಿಯ ರಸ್ತೆಯ ಮಣ್ಣು ಅಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಂತರ ಸ್ಕ್ರೈನ್ ಮೂಲಕ ವಾಹನವನ್ನು ಮೇಲೆ ಎತ್ತಲಾಗಿದ್ದು, ವಾಹನದಲ್ಲಿ ಇದ್ದ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ. (ವರದಿ: ಶಶಿ ಬೆತ್ತದಕೊಳಲು)












