ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ಮಾಲು ಸಮೇತ ಬಂಧಿಸಿರುವ ಘಟನೆ ಬಾಳೆಹೊನ್ನೂರಿನ ಬಿದರೆ ಗ್ರಾಮದ ಅಂಗಡಿಯಲ್ಲಿ ನಡೆದಿದೆ. ಬಿದರೆ ಗ್ರಾಮದ ಪಿಂಟೋ ಬಂಧಿತ.
ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ FC ಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಸ್ವಂತ ಅಂಗಡಿಯಲ್ಲಿ ಮದ್ಯ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದು, ಆರೋಪಿಯಿಂದ ಮದ್ಯದ ಪ್ಯಾಕೆಟ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮಟ್ಕಾ ಜೂಜಾಟದ ಆರೋಪಿ ವಶ:
ಬಾಳೆಹೊನ್ನೂರು: ಪಟ್ಟಣದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡ್ಲೆಮಕ್ಕಿ ಮಹಮ್ಮದ್ ಮಕ್ಬಲ್ ಬಂಧಿತ ಆರೋಪಿ.
ಈತ ಪಟ್ಟಣದ ಎಸ್‌ಬಿಐ ಮುಂಭಾಗದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ. ಪಿಎಸ್‌ಐ ಅಂಬರೀಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯಿಂದ ಮಟ್ಕಾ ಜೂಜಾಟಕ್ಕೆ ಬಳಸಿದ್ದ ನಗದು, ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ?; ಅಂತಹವರು ಈ ಸ್ಟೋರಿ ಓದಲೇಬೇಕು?












