ಚಿಕ್ಕಮಗಳೂರು: ಕ್ಯಾಂಟೀನ್‌ನಲ್ಲಿ ಬಳಕೆ ಮಾಡುತ್ತಿದ್ದ ಗೃಹ ಬಳಕೆ ಸಿಲಿಂಡ‌ರ್ ಸ್ಫೋಟ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ವಾಣಿಜ್ಯ ಬಳಕೆ ಸಿಲಿಂಡ‌ರ್ ಪೂರೈಕೆಯಲ್ಲಿ ವ್ಯತ್ಯಯದ ಹಿನ್ನೆಲೆಯಲ್ಲಿ ನಗರ ಹಾಗೂ ಜಿಲ್ಲೆಯ ಕೆಲವು ಹೋಟೆಲ್, ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಗೃಹ ಬಳಕೆ ಸಿಲಿಂಡರ್ ಗಳನ್ನು ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕ್ಯಾಂಟೀನ್‌ವೊಂದರಲ್ಲಿ ಗೃಹಬಳಕೆ ಸಿಲಿಂಡರ್ ಸ್ಫೋಟಗೊಂಡಿದೆ.

ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ FC ಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಇರಾನ್, ಅಮೆರಿಕಾ ಹಾಗೂ ಇಸ್ರೇಲ್ ಯುದ್ದದಿಂದ ದೇಶದಲ್ಲಿ ಗ್ಯಾಸ್ ಸಿಲಿಂಡ‌ರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ ಹೋಟೆಲ್, ರೆಸ್ಟೋರೆಂಟ್, ಕೆಫೆಗಳಿಗೆ ವಾಣಿಜ್ಯ ಸಿಲಿಂಡ‌ರ್ ಪೂರೈಕೆ ಬಹುತೇಕ ನಿಲ್ಲಿಸಲಾಗಿದೆ. ಹೀಗಾಗಿ ಬಹುತೇಕ ಹೋಟೆಲ್‌ಗಳನ್ನು ಬಂದ್ ಮಾಡಲಾಗಿದೆ. ಈ ನಡುವೆ ಕೆಲವು ಹೋಟೆಲ್, ರೆಸ್ಟೋರೆಂಟ್, ಕೆಫೆ ಮಾಲೀಕರು ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಚಿಕ್ಕಮಗಳೂರು ನಗರದ ಹೋಟೆಲ್ ಒಂದರಲ್ಲಿ ಬಳಕೆ ಮಾಡುತ್ತಿದ್ದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ನಗರದ ಮಾರ್ಕೆಟ್ ರಸ್ತೆಯ ಉರ್ದು ಶಾಲೆ ಸಮೀಪದ ಆನಂದ್‌ ಕ್ಯಾಂಟೀನ್‌ನಲ್ಲಿ ಬಳಕೆ ಮಾಡುತ್ತಿದ್ದ ಗೃಹ ಬಳಕೆ ಸಿಲಿಂಡ‌ರ್ ಸ್ಫೋಟಗೊಂಡಿದೆ. ಕ್ಯಾಂಟೀನ್ ಮಾಲೀಕ ಒಟ್ಟು ಮೂರು ಗೃಹ ಬಳಕೆಯ ಸಿಲಿಂಡರ್‌ಗಳನ್ನು ಹೋಟೆಲ್ ಗೆ ಬಳಕೆ ಮಾಡುತ್ತಿರುವುದು ಈ ವೇಳೆ ಕಂಡು ಬಂದಿದೆ. ಸ್ಪೋಟಗೊಂಡ ಸಿಲಿಂಡ‌ರ್ ಸೇರಿದಂತೆ ಎಚ್‌ಪಿ ಕಂಪನಿಗೆ ಸೇರಿದ ಮೂರು ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಗ್ಯಾಸ್ ಏಜೆನ್ಸಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ?; ಅಂತಹವರು ಈ ಸ್ಟೋರಿ ಓದಲೇಬೇಕು?

ಜೊತೆಗೆ ಕ್ಯಾಂಟೀನ್ ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೊಸ ಕಾರು/ಬೈಕ್ ಕೀಲಿಯ ಜೊತೆ ಸಿಗುವ ಮೆಟಲ್ ಟ್ಯಾಗ್ ರಹಸ್ಯವೇನು …; ವಾಹನ ಸವಾರರು ಓದಲೇಬೇಕಾದ ಸ್ಟೋರಿ..

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.