
ಮೂಡಿಗೆರೆ; (ನ್ಯೂಸ್ ಮಲ್ನಾಡ್ ವರದಿ) ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ; ಚಂದ್ರನ ಅಂಗಳಕ್ಕಿಳಿದ ರೋವರ್ ಪ್ರಜ್ಞಾನ್; ರೋವರ್ ಚಲನೆಯ ಮತ್ತೊಂದು ವಿಡಿಯೊವನ್ನು ಹಂಚಿಕೊಂಡ ಇಸ್ರೋ

ಕಳಸ, ಮೂಡಿಗೆರೆ ಮತ್ತು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಪೊಲೀಸ್ ತಂಡಗಳು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ 3 ಜನರನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ ಒಟ್ಟು ರೂ. 9,111 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ; ಅರ್ನಬ್ ಗೋಸ್ವಾಮಿ ಪಾಲಾದ ಕನ್ನಡ ಖ್ಯಾತ ಸುದ್ದಿವಾಹಿನಿ; ದಿಗ್ವಿಜಯ ನ್ಯೂಸ್ ಇನ್ಮುಂದೆ ರಿಪಬ್ಲಿಕ್ ಕನ್ನಡ.. ಏನಿದು ಸುದ್ದಿ?
ಇನ್ನು ಅಕ್ರಮ ಚಟುವಟಿಕೆಗಳ ವಿರುದ್ಧ ಇಂತಹ ದಾಳಿಗಳು ಮುಂದುವರೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ನಗದು ಕಳವು ಮಾಡಿದ್ದ ಆರೋಪಿ ಬಂಧನ:
ಅಡಿಕೆ ಗೋಟು ವ್ಯಾಪಾರಕ್ಕೆಂದು ಉತ್ತರ ಕನ್ನಡ ಜಿಲ್ಲೆಯಿಂದ ಬೀರೂರು ಠಾಣಾ ವ್ಯಾಪ್ತಿಯ ಸರಹದ್ದಿನ ಕುಡ್ಲೂರು ಗ್ರಾಮಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಪಿಕಪ್ ವಾಹನದಲ್ಲಿದ್ದ ರೂ. 12.40 ಲಕ್ಷ ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಕೂಲಿ ಕಾರ್ಮಿಕರ ವಾಹನದ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ 7.50 ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಸೈಕಲ್ ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಇನ್ಮುಂದೆ ಕಾಡಿನ ರಾಜ ಸಿಂಹ ಅಲ್ಲ..!; ಚಿರತೆಗೆ ಕಾಡಿನ ರಾಜನ ಪಟ್ಟ.. ಏನಿದು ಹೊಸ ಬೆಳವಣಿಗೆ
ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ಬೀರೂರು ಪಿ.ಎಸ್.ಐ ಸಜಿತ್ ಕುಮಾರ್, ಮಂಜುಳಾ ಬಾಯಿ ಮತ್ತು ಸಿಬ್ಬಂದಿಗಳಾದ ಹೇಮಂತ್ ಕುಮಾರ್ ಡಿ ವಿ, ಬಿ ಪಿ ಕೃಷ್ಣಮೂರ್ತಿ, ರಾಜಪ್ಪ ಮತ್ತು ವಿ ಟಿ ಶಿವಕುಮಾರ್ ಇದ್ದರು.













