ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ನಿರಂತರವಾಗಿ ಸುರಿದ ಮಳೆಗೆ ಮನೆಯೊಂದು ಕುಸಿದು ಎರಡು ಬೈಕ್ ಜಖಂವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೇಲು ನೆಮ್ಮಾರು ಗ್ರಾಮದಲ್ಲಿ ನಡೆದಿದೆ.


ಮೇಲು ನೆಮ್ಮಾರು ಗ್ರಾಮದ ಎಂ. ಪಿ ಶೃಂಗೇಶ್ವರ್ ಭಟ್ ಎಂಬುವವರ ಮನೆ ಇಂದು ಬೆಳಿಗ್ಗೆ ಕುಸಿತವಾಗಿದ್ದು, ಮನೆಯೊಳಗೆ ಇದ್ದ ಎರಡು ಬೈಕ್ ಗಳು ಜಖಂವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.













