
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಅವರು ಆ ಜಾಗದ ಮಣ್ಣನ್ನು ಹೊತ್ತು ಕಾಲ್ನಡಿಗೆ ಮೂಲಕ ಮೂಡಿಗೆರೆ ತಾಲೂಕು ಕಚೇರಿಗೆ ತಂದಿದ್ದರು. ಈ ಕುರಿತು ನ್ಯೂಸ್ ಮಲ್ನಾಡ್ ಕೂಡ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ: ಮನೆಗೆ ಜೈವಿಕ ಅನಿಲ ಘಟಕ ಸೇರಿದಂತೆ ಸಬ್ಸಿಡಿ; ಯಾರಿಗೆ ಸಬ್ಸಿಡಿ? ಎಷ್ಟು ಸಹಾಯಧನ?

ಇದೀಗ ಇವರ ಹೋರಾಟಕ್ಕೆ ಸ್ವಲ್ಪ ಜಯ ದೊರಕಿದೆ. ಗ್ರಾಮ ಪಂಚಾಯಿತಿ ಸದಸ್ಯರ ಕಾಳಜಿಗೆ ಸ್ಪಂದಿಸಿರುವ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ ಮೂರ್ತಿ ಕೆಲವು ಫಲಾನುಭವಿಗಳಿಗೆ ಜಾಗದ ಹಕ್ಕು ಪತ್ರವನ್ನು ವಿತರಿಸಿದ್ದಾರೆ.

ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಗ್ರಾಮದ ಸರ್ವೆ ನಂಬರ್ 3ರಲ್ಲಿ ಸಲ್ಲಿಸಿದ 94/C ಅರ್ಜಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಹಾಗೆಯೇ ಇನ್ನುಳಿದ ಸರ್ವೆ ನಂಬರ್ 111ವಾಟೆಕಾನ್, ಸರ್ವೆ ನಂಬರ್ 9 ಸಂಪಿಗೆ ಖಾನ್, ಗ್ರೂಪ್ ಹೌಸ್ ಊರ್ವಿನ್ ಖಾನ್ ಸರ್ವೆ ನಂಬರ್ 41, ನಿಡುವಾಳೆ ಭಗತ್ ಸಿಂಗ್ ನಗರ ಹಾಗೆಯೇ ಸರ್ವೆ ನಂಬರ್ 77ಅರೆಕುಡಿಗೆ, ಮೆಕ್ಕಿಮನೆ ಮರ್ಕಲ್ 50, ಕುಟುಂಬಗಳ ನಿವಾಸಿಗಳಿಗೆ ಅರಣ್ಯ ಒಪ್ಪಿಗೆ ಪತ್ರ ಸಿಕ್ಕಿದ ತಕ್ಷಣ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?
ತಮ್ಮ ಹೋರಾಟಕ್ಕೆ ಸ್ಪಂದಿಸಿದ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ನವೀನ್ ಕೃತಜ್ಞತೆ ಸಲ್ಲಿಸಿದ್ದಾರೆ. ಉಳಿದ ಫಲಾನುಭವಿಗಳಿಗೂ ಆದಷ್ಟು ಬೇಗ ಹಕ್ಕುಪತ್ರ ಸಿಗುವಂತಾಗಲಿ ಎಂದು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)













