ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮೇಲಾಧಿಕಾರಿಯ ಕಿರುಕುಳಕ್ಕೆ ಬೇಸತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂಬ ಮಾಹಿತಿಯು ಲಭ್ಯವಾಗಿದೆ, ಆದರೆ ಆ ಅಧಿಕಾರಿ ಕ್ಷಮೆಯಾಚನೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಸಫಲರಾಗಿದ್ದಾರೆ.

ಮಹಿಳಾ ಸಿಬ್ಬಂದಿ ತಮಗಾಗುತ್ತಿರುವ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸುವ ಸಂದರ್ಭದಲ್ಲಿ ಉಳಿದ ಸಹೊದ್ಯೋಗಿಗಳ ಸಹಾಯದಿಂದ ರಕ್ಷಣೆ ಮಾಡಿದ್ದಾರೆ, ವಿಷಯ ಹೊರಬಂದ ಕೂಡಲೇ ‘ಬಸವ’ನಂತೆ ತಲೆ ಬಗ್ಗಿಸಿದ ಅಧಿಕಾರಿ ಕ್ಷಮೆಯಾಚನೆ ಮಾಡಿದ ಪರಿಣಾಮ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆ ಅಧಿಕಾರಿಯು ಈ ಹಿಂದೆ ಕೆಲಸ ನಿರ್ವಹಿಸಿದ ಠಾಣೆಗಳಲ್ಲಿಯೂ ಇದೇ ತರಹದ ದೂರುಗಳು ಕೇಳಿಬಂದಿದದ್ದವು, ತಮಗೆ ಸಹಕರಿಸದ ಸಿಬ್ಬಂದಿಗೆ ಅನಗತ್ಯ ಕೆಲಸ ಹೇಳುವುದು, ಕೆಲಸದಲ್ಲಿ ಹಿಂಸೆ ನೀಡುತ್ತಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ.
ಪೊಲಿಸರೇ ದೂರು ನೀಡದಿದ್ದಲ್ಲಿ ಜನಸಾಮಾನ್ಯರು ಹೇಗೆ ಧ್ವನಿ ಎತ್ತುತ್ತಾರೆ:
ಇನ್ನು ಪೊಲೀಸ್ ಇಲಾಖೆ ಒಳಗಿನ ಸಿಬ್ಬಂದಿಗೇ ಹೀಗಾಗಿದ್ದು ಇಲಾಖೆಯು ಅವರಿಗೆ ಧೈರ್ಯ ತುಂಬಿ ದೂರು ದಾಖಲಿಸಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ರಾಜಿ ಪಂಚಾಯ್ತಿ ಮಾಡಿ ಮುಚ್ಚಿ ಹಾಕಿರುವುದು ನಾಚಿಕೆ ಗೇಡಿನ ಸಂಗತಿ, ಹಾಗೆಯೇ ಪೊಲೀಸರೇ ದೂರು ನೀಡದಿದ್ದಲ್ಲಿ ಇನ್ನು ಜನ ಸಾಮಾನ್ಯರಾದರೂ ಹೇಗೆ ತಮಗಾದ ಅನ್ಯಾಯದ ವಿರುದ್ಧ ಧೈರ್ಯದಿಂದ ಕಾನೂನಿನ ಮೊರೆ ಹೋಗುವುದು ಎಂಬ ಪ್ರಶ್ನೆ ಮೂಡುತ್ತದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್; ಈಗಲೇ ಅರ್ಜಿ ಸಲ್ಲಿಸಿ












