ಕಡೂರು: (ನ್ಯೂಸ್ ಮಲ್ನಾಡ್ ವರದಿ) ಒಂಟಿ ಮಹಿಳೆಯರ ಕಣ್ಣಿಗೆ ಖಾರದಪುಡಿ ಎರಚಿ ಸರಗಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಶಹಬಂದರ್ ಗ್ರಾಮದ ಕನ್ನೇಶ್ವರ ಶಿವಪುತ್ರ, ಬಸವರಾಜ ಸುರೇಶ, ರಾಜು ಯಲಗುಂಡ ಬಂಧಿತ ಆರೋಪಿಗಳು.
ಇದನ್ನೂ ಓದಿ: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 2ಲಕ್ಷ…!; ಅಂಚೆ ಅಚೇರಿಯಲ್ಲಿದೆ ಭರ್ಜರಿ ಸ್ಕೀಮ್

ಬೀರೂರು ವೃತ್ತ ವ್ಯಾಪ್ತಿಯ ಕುಡ್ಲೂರು ಗೇಟ್ ಹಾಗೂ ಕಡೂರು ವೃತ್ತ ಠಾಣಾ ವ್ಯಾಪ್ತಿಯ ತಂಗಲಿ ಗ್ರಾಮ ಮತ್ತು ಚಟ್ನಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರಿಗೆ ಕಣ್ಣಿಗೆ ಖಾರದಪುಡಿ ಎರಚಿ ಸರಗಳ್ಳತನ ಮಾಡಿರುವ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಬೈಕ್ ಹಾಗೂ ಸುಮಾರು 6,40,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಕೊಳ್ಳಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಐಪಿಎಸ್ ಪೊಲೀಸ್ ಅಧೀಕ್ಷಕರು ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸಿ.ಟಿ. ಜಯಕುಮಾರ್ ಹಾಗೂ ತರೀಕೆರೆ ಉಪವಿಭಾಗದ ಡಿ.ವೈ.ಎಸ್.ಪಿ ಹಾಲಮೂರ್ತಿರಾವ್ ರವರ ನೇತೃತ್ವದಲ್ಲಿ ಬೀರೂರು ವೃತ್ತದ ಸಿಪಿಐ ಶ್ರೀಕಾಂತ್ ಎಸ್. ಎನ್ ಮತ್ತು ಕಡೂರು ವೃತ್ತದ ಸಿಪಿಐ ರಫೀಕ್ ಎಂ ರವರುಗಳ ಎರಡು ತಂಡಗಳನ್ನಾಗಿ ರಚಿಸಿ, ಸಿಬ್ಬಂದಿಗಳಾದ ಸಜೀತ್ ಕುಮಾರ್, ಧನಂಜಯ್, ಲೀಲಾವತಿ, ತಿಪ್ಪೇಶ್, ರಂಗನಾಥ್, PSI ಶಾಹಿದ್ ಅಫ್ರಿದಿ, ಗಣಪತಿ ಆರ್ ಶೇರುಗಾರ್, ವೇದಮೂರ್ತಿ, ಕೃಷ್ಣಮೂರ್ತಿ, ಹೇಮಂತ್ ಕುಮಾರ್. ವಸಂತ್ ಕುಮಾರ್, ರಾಜು, ರೇಣುಕಮೂರ್ತಿ, ಸಿದ್ದಾನಾಯಕ, ಮಂಜಾನಾಯ್ಕ, ಶಿವಕುಮಾರ್, ರಾಜಪ್ಪ, ಮಧುಕುಮಾರ, ಹರೀಶ್, ಧನಪಾಲನಾಯ್ಕ ಮಹಮ್ಮದ್ ರಿಯಾಜ್, ಸ್ವಾಮಿ, ಪರಮೇಶ್ವರನಾಯ್ಕ ರೇಣುಕಾ ಪ್ರಸಾದ್, ಬೀರೇಶ, ಈಶ್ವರಪ್ಪ, ದೇವರಾಜ, ಶ್ರೀಧರ, ಅರುಣ್ ಕುಮಾರ್, ಹರೀಶ್, ಅಭಿಷೇಕ್, ನಜೀರ್, ಕಿಶೋರ್, ಚಾಲಕರಾದ ನಾಗೇಗೌಡ, ನವೀನ, ಅನೂಪ್ ಕುಮಾರ್ ಕೆ.ಎಲ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ರಬ್ಬಾನಿ ಹಾಗು ನಯಾಜ್ ಅಂಜುಮ್ ಇದ್ದರು.
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಾಬ್; ವಿದ್ಯಾರ್ಹತೆ ಡಿಟೈಲ್ಸ್ ಇಲ್ಲಿದೆ ನೋಡಿ












