ಅಡಿಕೆ ಬೆಳೆಯ ಹಳದಿ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ ಎನ್ನಲಾದ “ಬಯೋಶಮನ” ಜೈವಿಕ ಔಷಧಿಯನ್ನು ಕಾಫಿ, ಕಾಳುಮೆಣಸು, ತರಕಾರಿ, ಹಣ್ಣು, ಹೂವು ಹಾಗೂ ಶುಂಠಿ ಸೇರಿದಂತೆ ಹಲವು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಶಿಲೀಂಧ್ರ ಸಮಸ್ಯೆಗಳ ನಿಯಂತ್ರಣಕ್ಕೂ ಬಳಸಬಹುದಾಗಿದೆ ಎಂದು ಉತ್ಪನ್ನದ ಅಭಿವೃದ್ಧಿಪಡಿಸಿದ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಅವರ ಪ್ರಕಾರ, ಔಷಧಿಯನ್ನು ಸಿಂಪಡಿಸಿದ ಒಂದೇ ವಾರದಲ್ಲಿ ಗಿಡಗಳಲ್ಲಿ ಹೊಸ ಹಸಿರು ಚಿಗುರು ಮೂಡಲಾರಂಭಿಸುವುದರ ಜೊತೆಗೆ ರೋಗವು ಇತರ ಎಲೆಗಳಿಗೆ ಹರಡುವುದನ್ನು ತಡೆಯಲು ಸಹಕಾರಿಯಾಗುತ್ತದೆ. ವಿವಿಧ ಜಿಲ್ಲೆಗಳ ರೈತರ ತೋಟಗಳಲ್ಲಿ ಈ ಉತ್ಪನ್ನವನ್ನು ಬಳಸಿದ ಬಳಿಕ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ನೈಸರ್ಗಿಕ ಅಂಶಗಳ ಆಧಾರದ ಮೇಲೆ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದ್ದು, ತೋಟಗಾರಿಕಾ ಬೆಳೆಗಳಿಗೆ ಇದು ಉಪಯುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.












