ಮಲೆನಾಡ ರೈತರಿಗೆ ಸಿಹಿ ಸುದ್ದಿ.. ಹಳದಿ, ಎಲೆ ಚುಕ್ಕಿ ರೋಗಕ್ಕೆ ಸಿಕ್ತು ಪರಿಹಾರ..

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಹಳದಿ ಎಲೆಚುಕ್ಕಿ ರೋಗ ಅಪಾಯಕಾರಿಯಾಗಿ ಮುನ್ನುಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಸಿಗದೇ ಅಡಿಕೆ ಬೆಳೆಗಾರರು ಶೇ.70ರಷ್ಟು ಬೆಳೆ ನಷ್ಟ ಅನುಭವಿಸಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗೊಂಡು ಈ ಎಲ್ಲಾ ರೋಗಗಳಿಗೆ ಸಂಜೀವಿನಿ ರೀತಿಯಲ್ಲಿ ಬಯೋಶಮನ ಔಷಧಿ ಕಂಡು ಹಿಡಿಯಲಾಗಿದೆ.

ಹೌದು, ರೈತರ ಬೆಳೆಗಳಿಗೆ ಮಾರಕವಾಗಿರುವ ಹಳದಿ ಎಲೆಚುಕ್ಕಿ ರೋಗಕ್ಕೆ ಸಂಜೀವಿನಿ ರೀತಿಯಲ್ಲಿ ಬಯೋಶಮನ ಔಷಧಿಯನ್ನ ಹೈಟೆಕ್ ದೋಟಿ, ಇನಾಮಿಕ್ ಟೆಕ್ನಲಜಿ ಸಿಇಒ ಬಾಲಸುಬ್ರಹ್ಮಣ್ಯ ಅವರು ಕಂಡು ಹಿಡಿದಿದ್ದಾರೆ.

ತಾನು ಹೈಟೆಕ್ ದೋಟಿ ಕಂಡು ಹಿಡಿದ ಬಳಿಕ ಇಂತಹ ಗಂಭೀರ ಸಮಸ್ಯೆ ಮನಗೊಂಡು ಕಳೆದ 6 ವರ್ಷದಿಂದ ಬಯೋ ಟೆಕ್ನಾಲಜಿ ವಿಜ್ಞಾನಿಗಳ ಸಹಕಾರದಿಂದ ಸಂಶೋಧನೆ ನಡೆಸಿ, ನೈಸರ್ಗಿಕವಾಗಿ ಬಯೋಶಮನ ಎಂಬ ಔಷಧಿ ಕಂಡು ಹಿಡಿಯಲಾಗಿದೆ.. ಇದನ್ನು ಮೊದಲು ತನ್ನ ತೋಟ ಸೇರಿದಂತೆ ನೂರಾರು ಮಂದಿ ಕೃಷಿಕರ ತೋಟದಲ್ಲಿ ಪರೀಕ್ಷೆ ನಡೆಸಿದಾಗ ಪರಿಣಾಮಕಾರಿಯಾದ ಫಲಿತಾಂಶ ಮತ್ತು ಯಶಸ್ಸು ಸಿಕ್ಕಿದೆ.

ಸುಮಾರು 200 ಇಂಚು ಮಳೆ ಬಂದಿದ್ದ ಸಿದ್ದಾಪುರದ ಕ್ಯಾದಗಿ ಎಂಬಲ್ಲಿ ಕೊಳೆರೋಗ ಮತ್ತು ಎಲೆಚುಕ್ಕಿ ರೋಗಕ್ಕೆ ನಮ್ಮ ಔಷಧಿ ಒಂದು ಬಾರಿ ಸಿಂಪಡಿಸಿದ ಬಳಿಕೆ, 3 ತಿಂಗಳು ಕೊಳೆರೋಗಕ್ಕೆ ರಕ್ಷಣೆ ಸಿಕ್ಕಿದೆ. ಎಲೆಚುಕ್ಕಿರೋಗ 12 ತಿಂಗಳು ಕಳೆದರೂ ಮತ್ತೆ ಮರುಕಳಿಸಿಲ್ಲವೆಂದು ಹೇಳಿದ್ದಾರೆ.

ಬಯೋಶಮನ ಔಷಧಿ ಸಿಂಪಡಿಸಿದ ಒಂದೇ ವಾರದಲ್ಲಿ ಚಿಗುರು ಹಸಿರಾಗಿ ಬರುವ ಜೊತೆಗೆ ಪಕ್ಕದ ಎಲೆಗಳಿಗೆ ಹರಡುವುದಿಲ್ಲ. ನಮ್ಮ ಸಲಹೆಯಂತೆ ಸಿಂಪಡಿಸಿದ ಎಲ್ಲಾ ರೈತರಿಂದ ಉತ್ತಮ ಫಲಿತಾಂಶ ಕಂಡುಕೊಂಡಿದ್ದು, ಕೃಷಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಿಯೂ ಔಷಧಿ ಕಾರ್ಯ ವಿಫಲವಾಗಿಲ್ಲ. ಇಂತಹದೊಂದು ಔಷಧಿ ಇದೆ ಎಂದರೆ ನಂಬಲು ಸಾಧ್ಯವಿಲ್ಲ. ಇದನ್ನು ಬಳಸಿದವರಿಗೆ ಮಾತ್ರ ಮಹತ್ವ ಅರಿವಾಗುತ್ತದೆ. ಬಯೋಶಮನ ಔಷಧಿ ಕಾಳುಮೆಣಸು, ಕಾಫಿ ಸೇರಿದಂತೆ ಯಾವುದೇ ಪ್ಲಾಂಟೇಷನ್ ಕ್ರಾಪ್ಟನಲ್ಲಿ ಬರುವ ಫಂಗಸ್ ಸಮಸ್ಯೆ ಸೇರಿದಂತೆ ತರಕಾರಿ, ಹೂವು, ಹಣ್ಣು, ಶುಂಠಿ ಸೇರಿದಂತೆ ಎಲ್ಲಾ ತರಹದ ಗಿಡಗಳಿಗೆ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

ರೈತರಿಗೆ ಮಲೆನಾಡು ಮತ್ತು ಬಯಲುಸೀಮೆಯಲ್ಲಿ ಬರುವ ಕೀಟಬಾದೆಯಿಂದ ವಿಪರೀತ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೂ ಕೂಡ ಬಯೋಬೀಟಲ್ ಶೀಲ್ಡ್ ಎಂಬ ಔಷಧಿ ಕಂಡು ಹಿಡಿಯಲಾಗಿದೆ. ಅಡಕೆ, ಕಾಫಿ, ಕಾಳುಮೆಣಸು, ತೆಂಗು ಸೇರಿದಂತೆ ಯಾವುದೇ ಬೆಳೆಗೆ ಹಾನಿ ಮಾಡುವ ಎಲ್ಲಾ ತರಹದ ಕೀಟ ನಿವಾರಣೆಗೆ ಈ ಔಷಧಿ ಸಿಂಪಡಿಸಿದರೆ ಕನಿಷ್ಟ 6ರಿಂದ 12 ತಿಂಗಳ ವರೆಗೆ ಕೀಟಬಾದೆಯಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಬಾಲಸುಬ್ರಹ್ಮಣ್ಯ H. M ಇವರನ್ನು ಸಂಪರ್ಕಿಸಬಹುದಾಗಿದೆ. 9606142520 | 7259350487

This article contains paid promotions. For any clarifications regarding the product, please contact the numbers mentioned above.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.