ಮಲೆನಾಡಿನ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆಚುಕ್ಕಿ ಹಾಗೂ ಕೊಳೆರೋಗ ನಿಯಂತ್ರಣಕ್ಕೆ “ಬಯೋಶಮನ” ಎಂಬ ಜೈವಿಕ ಔಷಧಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಅವರ ಹೇಳಿಕೆಯ ಪ್ರಕಾರ, ಈ ಔಷಧಿ ಅಡಿಕೆಗೆ ಮಾತ್ರ ಸೀಮಿತವಾಗದೆ ಕಾಫಿ, ಕಾಳುಮೆಣಸು, ತೆಂಗು, ತರಕಾರಿ, ಹೂವು, ಹಣ್ಣು ಹಾಗೂ ಶುಂಠಿ ಸೇರಿದಂತೆ ವಿವಿಧ ಬೆಳೆಗಳಲ್ಲಿನ ಶಿಲೀಂಧ್ರ ಸಮಸ್ಯೆಗಳ ನಿಯಂತ್ರಣಕ್ಕೂ ಬಳಸಬಹುದಾಗಿದೆ.

ಇದೇ ವೇಳೆ, ವಿವಿಧ ಬೆಳೆಗಳಿಗೆ ಹಾನಿ ಮಾಡುವ ಕೀಟಗಳ ನಿಯಂತ್ರಣಕ್ಕಾಗಿ “ಬಯೋಬೀಟಲ್ ಶೀಲ್ಡ್” ಎಂಬ ಮತ್ತೊಂದು ಉತ್ಪನ್ನವನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತರು ಬಾಲಸುಬ್ರಹ್ಮಣ್ಯ ಎಚ್.ಎಂ. ಅವರನ್ನು 9606142520 ಅಥವಾ 7259350487 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.














