ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹುಲಿ ಚರ್ಮದ ಮೇಲೆ ಕುಳಿತ ಅವಧೂತ ವಿನಯ ಗುರೂಜಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ. ಇನ್ನು ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮ ಕೊಟ್ಟಿದ್ಯಾರು? ಯಾವಾಗ? ಈ ಎಲ್ಲಾ ದಾಖಲೆಗಳ ಪ್ರತಿ ನ್ಯೂಸ್ ಮಲ್ನಾಡ್ ಗೆ ಲಭ್ಯವಾಗಿದೆ.
ಇದನ್ನೂ ಓದಿ; ಐಒಸಿಎಲ್ ನಲ್ಲಿ ಉದ್ಯೋಗಾವಕಾಶ; 1720 ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಇಲ್ಲಿದೆ ಮಾಹಿತಿ

ಬಿಗ್ ಬಾಸ್ ಮನೆಯಲ್ಲಿ ಹಳ್ಳಿಕಾರ್ ಖ್ಯಾತಿಯ ವರ್ತೂರ್ ಸಂತೋಷ್ ಧರಿಸಿದ್ದ ಹುಲಿ ಉಗುರಿನಿಂದ ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಆಗಿರೋ ಸಂತೋಷ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಇದರ ಬೆನ್ನಲ್ಲೇ ಇದೀಗ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದೆ.
ಇದನ್ನೂ ಓದಿ; 2 ನೇ ವಾರಕ್ಕೆ ಕಾಲಿಟ್ಟ ಜಲಪಾತ ಸಿನಿಮಾ; ರಿವ್ಯೂಸ್ ಮತ್ತು ರೇಟಿಂಗ್ ನ ರೇಸ್ ನಲ್ಲೂ ಮುಂದಿರುವ ಪರಿಸರ ಕಾಳಜಿ ಸಿನಿಮಾ
ವಿನಯ್ ಗುರೂಜಿಗೆ ಹುಲಿ ಚರ್ಮ ಕೊಟ್ಟಿದ್ದು ಯಾರು?:
ವಿನಯ್ ಗುರೂಜಿ ಅವರ ಗೌರಿಗದ್ದೆ ದತ್ತಾಶ್ರಮಕ್ಕೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎನ್ನುವರು ಚರ್ಮ ದಾನವಾಗಿ ನೀಡಿದ್ದಾರೆ ಎಂದು ನ್ಯೂಸ್ ಮಲ್ನಾಡ್ ಗೆ ಸಿಕ್ಕಿದ್ದ ಪ್ರತಿಯಲ್ಲಿ ಉಲ್ಲೇಖವಾಗಿದೆ.
ಅಮರೇಂದ್ರ ಅವರು ಹುಲಿ ಚರ್ಮ ದಾನ ನೀಡುವ ಬಗ್ಗೆ 23-8-2-2019ರಲ್ಲಿ ಶಿವಮೊಗ್ಗ ಉಪ ಅರಣ್ಯಾಧಿಕರಿಗೆ ಪತ್ರ ಬರೆದಿದು ಲೈಸೆನ್ಸ್ ಪಡೆದುಕೊಂಡಿದ್ದರು. ಲೈಸೆನ್ಸ್ ಪಡೆದುಕೊಂಡೇ ಗೌರಿಗದ್ದೆ ದತ್ತಾಶ್ರಮ ಹುಲಿ ಚರ್ಮ ನೀಡಲಾಗಿತ್ತು. ನಂತರ ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಗುರೂಜಿ ಫೋಟೋ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅದನ್ನು ವಿನಯ್ ಗುರೂಜಿ ಅವರು ಅಮರೇಂದ್ರ ಅವರಿಗೆ ವಾಪಸ್ ನೀಡಿದ್ದರು. ನಂತರ ಹುಲಿ ಚರ್ಮವನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಅಮರೇಂದ್ರ ಅವರು ಅರಣ್ಯ ಇಲಾಖೆಗೆ ಪತ್ರ ಬರೆದು 20-5-2023ರಲ್ಲಿ ಶಿವಮೊಗ್ಗ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.
ವಿನಯ್ ಗುರೂಜಿ ವಿರುದ್ಧ ದೂರು:
ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರುಳ್ಳ ಡಾಲರ್ ಚೈನ್ ಹಾಕಿಕೊಂಡಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು. ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿದ್ದು, ಇತರೆ ಸೆಲೆಬ್ರಿಟಿಗಳು ಹಾಕಿಕೊಂಡಿರುವ ಹುಲಿ ಉಗುರಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇವರ ಬಂಧನ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿಯ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಂಗಳೂರಿನಲ್ಲಿರುವ ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ. ಶಿವಕುಮಾರ್ ನಾಯಕ್ ಎಂಬುವವರು ವಿನಯ್ ಗುರೂಜಿ ಹಾಗೂ ನಟ ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಮೂರು ವರ್ಷಗಳ ಹಿಂದೆಯೂ ಹುಲಿ ಚರ್ಮದ ಮೇಲೆ ಕುಳಿತ್ತಿದ್ದ ಫೋಟೋ ವೈರಲ್:
ವಿನಯ್ ಗುರೂಜಿ ಅವರು ಕನ್ನಡ ದಿನಪತ್ರಿಕೆ ಸಂಪಾದಕರೊಂದಿಗೆ ಸಂಭಾಷಣೆ ನಡೆಸಿದ್ದ ಫೋಟೋ ವೈರಲ್ ಆಗಿತ್ತು. ವೈರಲ್ ಫೋಟೋದಲ್ಲಿ ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕುಳಿತಿದ್ದರು. ಇದರ ಬೆನ್ನಲ್ಲೇ ವಿನಯ್ ಗುರೂಜಿ ಆಶ್ರಮದಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾಗ ಹುಲಿ ಚರ್ಮ ದೊರೆಕಿತ್ತು. ಕುರಿತಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಅಂದೇ ಸ್ಪಷ್ಟನೆ ನೀಡಿದ್ದ ಗುರೂಜಿ:
ಇನ್ನು ಹುಲಿ ಚರ್ಮದ ಫೋಟೋ ವೈರಲ್ ಆದ ಬೆನ್ನಲ್ಲೇ ಮಾಹಿತಿ ನೀಡಿರುವ ವಿನಯ್ ಗುರೂಜಿ, ಹುಲಿ ಚರ್ಮ ಅಕ್ರಮದಲ್ಲ. ಆಶ್ರಮಕ್ಕೆ ಭಕ್ತರು ನೀಡಿದ್ದು. ಅದಕ್ಕೆ ಸೂಕ್ತ ಮಾಲೀಕತ್ವ ಪಮಾಣ ಪತ್ರ ಕೂಡ ಇದೆ. ಶೀಘ್ರದಲ್ಲೇ ಅದನ್ನು ಅರಣ್ಯಾಧಿಕಾರಿಗಳಿಗೆ ನೀಡುತ್ತೇವೆ ಎಂದು ಹೇಳಿದ್ದರು.
ಅಂದಹಾಗೆ 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ, ವನ್ಯಪ್ರಾಣಿಗಳು ಅಂಗಾಂಗಳನ್ನು ಸಂಗ್ರಹಿಸುವುದು ಕಾನೂನು ರೀತಿಯ ಅಪರಾಧವಾಗಿರುತ್ತದೆ. ಒಂದು ವೇಳೆ, ಇಂತಹ ಸಂಗ್ರಹ ಕಂಡು ಬಂದಲ್ಲಿ ಅಂತವರ ವಿರುದ್ಧ ಕೇಸ್ ದಾಖಲಾಗುತ್ತದೆ. ಅಷ್ಟೇ ಅಲ್ಲದೆ 3-7 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಜೊತೆಯಲ್ಲಿ 10 ಸಾವಿರ ರೂಪಾಯಿಯವರೆಗೂ ದಂಡ ವಿಧಿಸಬಹುದಾಗಿದೆ.












