ಚಿಕ್ಕಮಗಳೂರು: ಪೊಲೀಸ್ ಇಲಾಖೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ವಾನಕ್ಕೆ ಬೀಳ್ಕೊಡುಗೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪೊಲೀಸ್ ಇಲಾಖೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಲವು ಪ್ರಕರಣದಲ್ಲಿ ಆರೋಪಿಗಳು ಪತ್ತೆ ಹಚ್ಚುವುದರ ಜೊತೆ ಕಳ್ಳತನ, ದರೋಡೆ ಹಾಗೂ ಕೊಲೆ ಕೇಸ್ ಗಳಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಿದ್ದ ಶ್ವಾನಕ್ಕೆ ಪೊಲೀಸ್ ಇಲಾಖೆ ಬೀಳ್ಕೊಡುಗೆ ನೀಡಿದೆ.

 

ಇದನ್ನೂ ಓದಿ; ಐಒಸಿಎಲ್‌ ನಲ್ಲಿ ಉದ್ಯೋಗಾವಕಾಶ; 1720‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಕುರಿತು ಇಲ್ಲಿದೆ ಮಾಹಿತಿ

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಸುದೀರ್ಘ 10 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಲವಾರು ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸುವಲ್ಲಿ ಶ್ರಮಿಸಿದ್ದ ಶ್ವಾನಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಪದಕ ಪ್ರಶಂಸೆ ಹಾಗೂ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು. ಪೊಲೀಸ್ ಶ್ವಾನಕ್ಕೆ ನಗರದ ಡಿ.ಎ.ಆರ್. ಆವರಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆದಿದೆ.

 

ಇದನ್ನೂ ಓದಿ; 2 ನೇ ವಾರಕ್ಕೆ ಕಾಲಿಟ್ಟ ಜಲಪಾತ ಸಿನಿಮಾ; ರಿವ್ಯೂಸ್ ಮತ್ತು ರೇಟಿಂಗ್ ನ ರೇಸ್ ನಲ್ಲೂ ಮುಂದಿರುವ ಪರಿಸರ ಕಾಳಜಿ ಸಿನಿಮಾ

ಶ್ವಾನದ ಹ್ಯಾಂಡ್ಲಾರ್ ಗಳಾಗಿ ಮಂಜುನಾಥ ಹಾಗೂ ಸಹಾಯಕ ನಿರ್ವಾಹಕರಾದ ಕುಮಾರ್ ಇವರುಗಳು ಕರ್ತವ್ಯ ನಿರ್ವಹಿಸುತ್ತಾರೆ. ಈ ಶ್ವಾನವು ತನ್ನ ಸೇವಾ ಅವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜರುಗಿದ ಕಳ್ಳತನ, ದರೋಡೆ ಹಾಗೂ ಕೊಲೆ ಇತ್ಯಾದಿ 204 ಪ್ರಕರಣಗಳಲ್ಲಿ 35 ಪ್ರಕರಣದಲ್ಲಿ ಸುಳಿವು ಹಾಗೂ 9 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ಸಹಕರಿಸಿರುತ್ತದೆ.

 

ಈ ಶ್ವಾನವು ವಾರ್ಷಿಕವಾಗಿ ನಡೆಸಲಾಗುವ ಪೊಲೀಸ್ ಡ್ಯೂಟಿ ಮೀಟ್ ನಲ್ಲಿಯೂ ಹಲವು ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿತ್ತು. ಶ್ವಾನದ ಹ್ಯಾಂಡ್ಲರ್ ಗಳಾದ ಮಂಜುನಾಥ್ ಹಾಗೂ ಕುಮಾರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸಂಶನ ಪತ್ರ ನೀಡಿ ಗೌರವಿಸಿರುತ್ತಾರೆ. ಈ ಶ್ವಾನ 2013ರಲ್ಲಿ ಪೊಲೀಸ್ ಇಲಾಖೆ ಸೇರಿತ್ತು. ಅಲ್ಲಿಂದ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಕರಿಸಿತ್ತು.

ಚಿಕ್ಕಮಗಳೂರು: ಆತ್ಮ ಯೋಜನೆಯಡಿ ಅಂತಾರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಹಾಗೂ ವಿಶ್ವ ಆಹಾರ ದಿನಾಚರಣೆ

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಂತಾರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಹಾಗೂ ವಿಶ್ವ ಆಹಾರ ದಿನಾಚರಣೆಯನ್ನು ಜಂಟಿ ಉಪ ನಿರ್ದೇಶಕರ ಕಛೇರಿ ಆವರಣದಲ್ಲಿ ನಡೆಸಲಾಯಿತು.

ಕೃಷಿ ಕ್ಷೇತ್ರದಲ್ಲಿ ಶೇ 75% ರಷ್ಟು ಮಹಿಳೆಯರು ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ರೈತ ಮಹಿಳೆಯರಿಗಾಗಿ ಕೃಷಿಯಲ್ಲಿ ತರಬೇತಿ, ಬೆಳೆ ಪ್ರಾತ್ಯಕ್ಷಿಕೆಗಳು, ಅಧ್ಯಯನ ಪ್ರವಾಸ, ಸ್ವಸಹಾಯ ಗುಂಪುಗಳ ರಚನೆಗಳಂತಹ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಕೃಷಿ ತಾಂತ್ರಿಕತೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಾವಯವ ಕೃಷಿಯನ್ನು ಕೈಗೊಂಡು ವಿಷ ಮುಕ್ತ ಆಹಾರ ಉತ್ಪಾದನೆಗಳಿಗೆ ಸಂಕಲ್ಪ ಮಾಡಬೇಕು. ಸರ್ಕಾರದಿಂದ ದೊರೆಯುವ ಯೋಜನೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು. ರೈತ ಮಹಿಳೆಯರು ತಮ್ಮ ಜೀವನ ಕಟ್ಟಿಕೊಳ್ಳಲು ಬ್ಯಾಂಕ್ ಗಳ ಮೂಲಕ ಸಿಗುವ ಸಹಾಯಧನ ಪಡೆಯಲು ಉತ್ತೇಜನ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಸುಜಾತ ಹೆಚ್.ಎಲ್ ರವರು ಹೇಳಿದರು.

ಇನ್ನು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷರಾದ ನರೇಂದ್ರ.ಬಿ.ಸಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮವಾಗಿ ಮುಂದುವರೆಯುತ್ತಿದ್ದಾರೆ. ಕೃಷಿ ಮತ್ತು ಸಂಸಾರ ಉತ್ತಮವಾಗಿ ನಡೆಯಬೇಕಾದರೆ ಮಹಿಳೆಯರ ಪಾತ್ರ ಮಹತ್ವವಾದದ್ದು ಎಂದರು.

ಬೇಸಾಯ ಶಾಸ್ತ್ರ ತೋಟಗಾರಿಕೆ ಮಹಾ ವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ ಯಮುನಾ.ಬಿ.ಸಿ ರವರು ಪೌಷ್ಟಿಕ ಆಹಾರ ಮಹತ್ವ ಕುರಿತು ಸವಿವರ ಮಾಹಿತಿಯನ್ನು ನೀಡಿದರು, ಕಾರ್ಯಕ್ರಮದಲ್ಲಿ ಜಿಲ್ಲೆಯ ಏಳು ತಾಲ್ಲೂಕುಗಳ 50 ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ಧರು, ಆಸಕ್ತ ರೈತ ಮಹಿಳೆಯರು ತಮ್ಮ ಕೃಷಿಯಲ್ಲಿನ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತ ಮಹಿಳೆಯರಾದ ಮಂಗಳಕುಮಾರ್, ಚಂದ್ರಕಲಾಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು, ಸಹಾಯಕ ಕೃಷಿ ನಿರ್ದೇಶಕರಾದ ವಿಜಯಲಕ್ಷ್ಮೀ ಚಂದ್ರಶೇಖರ್, ಕೃಷಿ ಅಧಿಕಾರಿ ಸುಜಾತ ಉಪಸ್ಥಿತರಿದ್ದರು, ಆತ್ಮಯೋಜನೆ ಉಪ ಯೋಜನಾ ನಿರ್ದೇಶಕರಾದ ಜಿ.ಪಿ.ಪ್ರಿಯಾಂಕ ಕಾರ್ಯಕ್ರಮವನ್ನು ನಿರೂಪಿಸಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.