ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬುದ್ಧಿಮಾಂದ್ಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 31 ವರ್ಷ ಕಠಿಣ ಸಜೆ ಹಾಗೂ ₹55,000 ದಂಡ ವಿಧಿಸಿದೆ. ಶಾಂತಕುಮಾರ ಎಂಬಾತ ಶಿಕ್ಷೆಗೆ ಒಳಗಾದ ಅಪರಾಧಿ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಫೆ.7ರಂದು ಅಪರಾಧಿಯು 15 ವರ್ಷದ ಬಾಲಕಿಯನ್ನು ಜಾನುವಾರು ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಆಕೆ ಮನೆ ಬಳಿ ಕಾಣಿಸದೆ ಇದ್ದಾಗ ಅನುಮಾನಗೊಂಡ ಆಕೆಯ ತಂದೆ ಹುಡುಕಾಡುತ್ತಿದ್ದಾಗ ಬಾಲಕಿ ಶಾಂತಕುಮಾರನ ಮನೆ ಕಡೆಯಿಂದ ಅಳುತ್ತ ಬರುತ್ತಿದ್ದಳು. ಆಕೆಯನ್ನು ವಿಚಾರಿಸಿ ಮಾಹಿತಿ ಪಡೆದ ತಂದೆಯು ಬಾಲಕಿಯನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಕೆ ಮೇಲೆ ಬಲತ್ಕಾರ ಆಗಿರುವುದನ್ನು ದೃಢಪಡಿಸಿ ವೈದ್ಯರು ವರದಿ ನೀಡಿದ್ದು, ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಪ್ರಕರಣ ದಾಖಲಿಸಿದ ಇನ್ ಪೆಕ್ಟರ್ ಎನ್.ವೀರೇಂದ್ರ ಹಾಗೂ ಸಿಬ್ಬಂದಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಾಯಾಧೀಶರು ಅಪರಾಧಿಗೆ 31ವರ್ಷ ಕಠಿಣ ಶಿಕ್ಷೆ, 55 ಸಾವಿರ ರೂ. ದಂಡ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಎಫ್ಟಿಎಸ್ಇ-1 ನ್ಯಾಯಾಧೀಶ ರಾಘವೇಂದ್ರ ಗುರುಪ್ರಸಾದ್ ಕುಲಕರ್ಣಿ ತೀರ್ಪು ನೀಡಿದ್ದಾರೆ. ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಭರತ್ಕುಮಾರ್ ವಾದ ಮಂಡಿಸಿದ್ದರು.












