ಚಿಕ್ಕಮಗಳೂರು: ಬೈಕ್‌ ಸವಾರನಿಗೆ ಗುದ್ದಿ ಪರಾರಿಯಾದ ಹಾಸ್ಯನಟ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ ಸವಾರನಿಗೆ ಗುದ್ದಿ ಹಾಸ್ಯನಟ ಚಂದ್ರಪ್ರಭಾ ಅವರು ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಸ್ಯನಟ ಚಂದ್ರಪ್ರಭಾ ಅವರ ಕಾರು ಚಿಕ್ಕಮಗಳೂರಿನಲ್ಲಿ ಬೈಕ್ ಒಂದಕ್ಕೆ ಗುದ್ದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

 

ಇದನ್ನೂ ಓದಿ; ಡ್ರೋಣ್ ಪ್ರತಾಪ್ ಕಂಪೆನಿಯಲ್ಲಿ ಉದ್ಯೋಗಾವಕಾಶ.. ತಿಂಗಳಿಗೆ 40 ಸಾವಿರ ಸಂಬಳ

ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಚಂದ್ರಪ್ರಭಾ ಅವರು ಮಾನವೀಯತೆ ತೋರಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರ ಆಗಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

 

ಇದನ್ನೂ ಓದಿ; ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸೋಕೆ ಇದೇ ನೋಡಿ ಲಾಸ್ಟ್ ಡೇಟ್

ಶೃಂಗೇರಿಯಲ್ಲಿ ಅಕ್ರಮ ಮಧ್ಯ ಮಾರಾಟದ ಹಾವಳಿ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.

 

ಇದನ್ನೂ ಓದಿ; ಭಾರತದಲ್ಲಿ ಭರ್ಜರಿ ಹೂಡಿಕೆ ಮಾಡಲಿರುವ ಅಮೆಜಾನ್

ತಾಲ್ಲೂಕಿನ ಕುಂಚೇಬೈಲು ಸಮೀಪ ಸ್ಥಳೀಯರಾದ ಜನಶಕ್ತಿಯ ಪ್ರಮೋದ್, ಶಶಾಂಕ್, ಸಾಗರ್ ಅವರ ಮಾಹಿತಿ ಮೇರೆಗೆ ಅಕ್ರಮ ಮಧ್ಯ ಮಾರಾಟ ಅಡ್ಡೆಯ ಮೇಲೆ ಶೃಂಗೇರಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿ ಉಮೇಶ್ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆಂದು ತಿಳಿದುಬಂದಿದೆ. ಅರೋಪಿ ಹೊಂದಿದ್ದ 1440 ರೂ. ಮೌಲ್ಯದ ಸುಮಾರು 35 ರಿಂದ 50 ಪ್ಯಾಕೇಟ್ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ. ಒಂದು ದಿನದ ಬಳಿಕ ಆರೋಪಿ ಪತ್ತೆಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

ಪೊಲೀಸರನ್ನು ತಳ್ಳಿ ಓಡಿದ್ನಾ ಆರೋಪಿ.?
ಅಕ್ರಮ ಮಧ್ಯ ಮಾರಾಟದ ಅಡ್ಡೆಯ ಬಳಿ ಪೊಲೀಸರು ಬರುತ್ತಿದ್ದಂತೆ ಆರೋಪಿ ಉಮೇಶ್ ಅಲ್ಲಿಂದ ಓಡಲು ಪ್ರಯತ್ನಿಸಿದ್ದು, ಪೊಲೀಸರನ್ನು ತಳ್ಳಿಹಾಕಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆರೋಪಿಗೆ ಜಾಮೀನು ದೊರೆತಿದ್ದು, ಮತ್ತೆ ಅದೇ ದಂಧೆಯಲ್ಲಿ ತೊಡಗಿದ್ದಾನೆ. ಇವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಹೆಸರು ಹೇಳಲಿಚ್ಚಿಸದ ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

 

ಅಕ್ರಕ ಮಧ್ಯ ಮಾರಾಟದಲ್ಲಿ ತೊಡಿಗಿದ್ದವರಿಗೆ ಈ ಹಿಂದೆಯೇ ಮಾರಾಟ ಮಾಡದಿರುವಂತೆ ತಿಳಿಸಿದ್ದೆವು. ಆದರೆ ಅವರು ಅದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಇಂತಹ ಅಕ್ರಮ ಮಧ್ಯ ಕುಡಿದು ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. – ಮನೋಜ್, ಜನಶಕ್ತಿ ಜಿಲ್ಲಾ ಸದಸ್ಯ

ಶೃಂಗೇರಿ ಕೊಪ್ಪ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮಧ್ಯದ ಹಾವಳಿ

ಶೃಂಗೇರಿ ಸುತ್ತಮುತ್ತ ಹಾಗೂ ಕೊಪ್ಪ ತಾಲ್ಲೂಕಿನ ಹಲವು ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಕುರಿತು ಅನೇಕ ಬಾರಿ ಮಾಹಿತಿ ನೀಡಿದರೂ ಸಂಬಂಧಪಟ್ಟ ಇಲಾಖೆ ಮಾತ್ರ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪೊಲೀಸರು ಈ ಕುರಿತು ಗಮನ ಹರಿಸಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಾಳೆಹೊನ್ನೂರು: ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ)  ಗೋ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಆಸಿಫ್ ಇಸ್ಲಾಂ (32) ಬಂಧಿತ ಆರೋಪಿ.

ಇದನ್ನೂ ಓದಿ; ಚಿಕ್ಕಮಗಳೂರು: ಲಂಚಕ್ಕೆ ಬೇಡಿಕೆಯಿಟ್ಟು ಸಿಕ್ಕಿಬಿದ್ದ rto ಅಧಿಕಾರಿ

ಸಿದ್ದಾಪುರ ಗ್ರಾಮದ ಖಾಸಗಿ ಎಸ್ಟೇಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಭಾನುವಾರ ಕಡಬಗೆರೆಯಲ್ಲಿ ವ್ಯಕ್ತಿಯೊಬ್ಬನಿಂದ 20 ಕೆಜಿ ಗೋಮಾಂಸವನ್ನು 3 ಸಾವಿರ ರೂ. ನೀಡಿ ಖರೀದಿಸಿ ಎಸ್ಟೇಟ್‌ಗೆ ಕೊಂಡೊಯ್ಯುತ್ತಿದ್ದ.

ಇದನ್ನೂ ಓದಿ; ಚಿಕ್ಕಮಗಳೂರು: ಗಾಂಜಾ ಪೆಡ್ಲರ್ ಗಳ ನಡುವೆ ಮಾರಾಮಾರಿ; ಲಾಂಗ್ ನಿಂದ ಹಲ್ಲೆ

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆಸಿಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನಿಗೆ ಮಾಂಸ ನೀಡಿದವನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.