ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ, ತನಿಖಾ ತಂಡವು ನೀಡಿರುವ ಪ್ರಾಥಮಿಕ ತನಿಖಾ ಮಾಹಿತಿಯಂತೆ ಸುಮಾರು 6,200 ಎಕರೆಗೂ ಅಧಿಕ ಭೂಮಿಯನ್ನು ಪ್ರಭಾವಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ; ಡ್ರೋಣ್ ಪ್ರತಾಪ್ ಕಂಪೆನಿಯಲ್ಲಿ ಉದ್ಯೋಗಾವಕಾಶ.. ತಿಂಗಳಿಗೆ 40 ಸಾವಿರ ಸಂಬಳ

ಕಳೆದ 1 ತಿಂಗಳಿನಿಂದ ಸುಮಾರು 13 ತಹಸೀಲ್ದಾರ್ ತಂಡ ಮೂಡಿಗೆರೆ ಹಾಗೂ ಕಡೂರಿನ ತಾಲ್ಲೂಕು ಕಚೇರಿಯಲ್ಲಿನ 4,240 ಕಡತಗಳನ್ನು ಪರಿಶೀಲಿಸಿದ್ದು ಕಳೆದ 5 ವರ್ಷಗಳಲ್ಲಿ ನಡೆದಿರುವ ಭೂಮಂಜೂರಾತಿ ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸೋಕೆ ಇದೇ ನೋಡಿ ಲಾಸ್ಟ್ ಡೇಟ್
ಈ ತನಿಖಾ ತಂಡವು ನೀಡಿರುವ ಪ್ರಾಥಮಿಕ ಮಾಹಿತಿಯಂತೆ ಅಂದಾಜು 6,200 ಎಕರೆಯಷ್ಟು ಸರ್ಕಾರಿ ಭೂಮಿ ಅಕ್ರಮವಾಗಿ ಮಂಜೂರಾಗಿರುವುದು ಖಚಿತವಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ಸೆಕ್ಷನ್ 53, 57ರ ಅಡಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಲೇವಾರಿ ಮಾಡುವಾಗ ಅಧಿಕಾರಿಗಳು ಕಂದಾಯ ನಿಯಮಗಳನ್ನು ಪಾಲಿಸಿಲ್ಲ. ಅರ್ಜಿದಾರರ ಕುಟುಂಬದ ಹೆಸರಿನಲ್ಲಿ ಈಗಾಗಲೇ ಜಮೀನಿದೆಯೇ ಎಂಬುದನ್ನು ಸಹ ಪರಿಶೀಲಿಸಿಲ್ಲ. ಹಾಗೆಯೇ 2002ಕ್ಕೂ ಮೊದಲು ಸಾಗುವಳಿ ಮಾಡುತ್ತಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿಲ್ಲ. ಹಾಗೆಯೇ ಹಲವಾರು ಪ್ರಕರಣಗಳಲ್ಲಿ ಭೂಮಂಜೂರಾತಿಗೆ ಸಂಬಂಧಿಸಿದ ಕಡತಗಳೇ ಇಲ್ಲ ಎಂಬ ಮಾಹಿತಿ ಸಹ ತನಿಖೆ ವೇಳೆ ಕಂಡುಬಂದಿದೆ.
ಒಟ್ಟು 1,056 ಪ್ರಕರಣಗಳನ್ನು ಅನುಮಾನಾಸ್ಪದ ಎಂದು ಗುರುತಿಸಿದ್ದು ಅಕ್ರಮ ನಡೆದಿದೆ ಎಂಬುದು ಖಾತ್ರಿಯಾಗದಿದ್ದರೆ ರೈತರ ಪರವಾಗಿಯೇ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕಟಾರಿಯಾ ವಿವರಿಸಿದ್ದಾರೆ.
ಅಕ್ರಮದಲ್ಲಿ ಭಾಗಿಯಾದವರು ಯಾರೇ ಆಗಿದ್ದರೂ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ. ಎಲ್ಲವೂ ಬಯೊಮೆಟ್ರಿಕ್ ವ್ಯವಸ್ಥೆ ಮೂಲಕ ಆಗಿರುವುದರಿಂದ ಯಾರ್ಯಾರ ಅವಧಿಯಲ್ಲಿ ಭೂಮಿ ಮಂಜೂರಾಗಿದೆ ಎಂಬುದು ತಿಳಿಯಲಿದೆ. ಆದ್ದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ರಕ್ಷಣೆ ಮಾಡಲಾಗುವುದಿಲ್ಲ ಎಂದಿದ್ದಾರೆ.
ಶೃಂಗೇರಿ, ಕೊಪ್ಪ ಭಾಗದಲ್ಲೂ ತನಿಖೆ?
ಶೃಂಗೇರಿ ಮತ್ತು ಕೊಪ್ಪ ಭಾಗದಲ್ಲೂ ಅಕ್ರಮ ಭೂ ಮಂಜೂರಾತಿ ಆಗಿದ್ದು, ಕೋಟ್ಯಂತರ ರೂಪಾಯಿ ಹಗರಣ ಆಗಿರುವ ಕುರಿತು ಈ ಹಿಂದೆ ಪ್ರಕರಣ ಬೆಳಕಿಗೆ ಬಂದಿತ್ತು. ಮೊದಲನೇ ಸುತ್ತಿನಲ್ಲಿ ಮೂಡಿಗೆರೆ, ಕಡೂರು ಭಾಗದಲ್ಲಿ ತನಿಖೆ ನಡೆಯುತ್ತಿದ್ದು ಮುಂದಿನ ಅವಧಿಯಲ್ಲಿ ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ಭಾಗದಲ್ಲಿ ತನಿಖೆ ನಡೆಸುವ ಸಾಧ್ಯತೆಯಿದೆ.
ಬಾಳೆಹೊನ್ನೂರು: ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಗೋ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಆಸಿಫ್ ಇಸ್ಲಾಂ (32) ಬಂಧಿತ ಆರೋಪಿ.
ಇದನ್ನೂ ಓದಿ; ಚಿಕ್ಕಮಗಳೂರು: ಲಂಚಕ್ಕೆ ಬೇಡಿಕೆಯಿಟ್ಟು ಸಿಕ್ಕಿಬಿದ್ದ rto ಅಧಿಕಾರಿ
ಸಿದ್ದಾಪುರ ಗ್ರಾಮದ ಖಾಸಗಿ ಎಸ್ಟೇಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಭಾನುವಾರ ಕಡಬಗೆರೆಯಲ್ಲಿ ವ್ಯಕ್ತಿಯೊಬ್ಬನಿಂದ 20 ಕೆಜಿ ಗೋಮಾಂಸವನ್ನು 3 ಸಾವಿರ ರೂ. ನೀಡಿ ಖರೀದಿಸಿ ಎಸ್ಟೇಟ್ಗೆ ಕೊಂಡೊಯ್ಯುತ್ತಿದ್ದ.
ಇದನ್ನೂ ಓದಿ; ಚಿಕ್ಕಮಗಳೂರು: ಗಾಂಜಾ ಪೆಡ್ಲರ್ ಗಳ ನಡುವೆ ಮಾರಾಮಾರಿ; ಲಾಂಗ್ ನಿಂದ ಹಲ್ಲೆ
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆಸಿಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನಿಗೆ ಮಾಂಸ ನೀಡಿದವನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












