ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜ್ಞಾನ ಸಂವೃದ್ಧಿ ಟ್ರಸ್ಟ್, ಬೆಂಗಳೂರು ವತಿಯಿಂದ ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕಿನ ಸರ್ಕಾರಿ ಶಾಲೆಗಳ 675 ವಿದ್ಯಾರ್ಥಿಗಳಿಗೆ 200 ಪುಟಗಳ ಒಟ್ಟು 3,200 ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ರವಿಕುಮಾರ್ ಅವರ ನೇತೃತ್ವದಲ್ಲಿ ಸದಸ್ಯರಾದ ಭೀಮೇಶ್, ಅನಿತ್, ಶ್ರೀಪ್ರಧಾ, ಕು. ದಿಶಾ ಹಾಗೂ ತಾಲ್ಲೂಕು ಸಂಯೋಜಕ ಎಂ.ಕೆ. ವೆಂಕಟೇಶ ಭಟ್ (ಮೀಗಿನಕಲ್ಲು) ಅವರ ತಂಡ ಈ ಸೇವಾ ಕಾರ್ಯವನ್ನು ನೆರವೇರಿಸಿತು.

ಶೃಂಗೇರಿ ತಾಲ್ಲೂಕಿನ ಅಭಿನವ ವಿದ್ಯಾತೀರ್ಥ ಶಾಲೆ, ಗಂಡಘಟ್ಟ ಶಾಲೆ, ಯಡದಾಳು ಶಾಲೆ, ಆನೆಗುಂದ ಶಾಲೆ, ಕೆಳಕೊಪ್ಪ ಶಾಲೆ ಹಾಗೂ ಸಿಂದವಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ, ಜೊತೆಗೆ ಕೊಪ್ಪ ತಾಲ್ಲೂಕಿನ ನಾರ್ವೆಯ ಸಚ್ಚಿದಾನಂದ ಸರಸ್ವತೀ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಾದ ಬರವಣಿಗೆ ಸಾಮಗ್ರಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಟ್ರಸ್ಟ್ನ ಈ ಸಾಮಾಜಿಕ ಸೇವೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.












