ಜಯಪುರ: ಉಚಿತ ಕರಾಟೆ ಹಾಗೂ ಯೋಗ ಶಿಬಿರದ ಭೂಮಿ ಪೂಜೆ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಜಗತ್ತು ಬೆಳೆದಂತೆ ಅಪರಾಧ ಕೃತ್ಯಗಳು ಬೆಳೆಯುತ್ತಿವೆ. ಇಂತಹ ಸಂಧರ್ಭದಲ್ಲಿ ಮಹಿಳೆಯಾಗಲೀ ಪುರುಷನಾಗಲಿ ತನ್ನನ್ನು ರಕ್ಷಿಸಿಕೊಳ್ಳಲು ನಿರಾಯುಧರಾಗಿ ಹೋರಾಟ ನಡೆಸಬಹುದಾದ ಏಕೈಕ ಕಲೆ ಕರಾಟೆಯಾಗಿದ್ದು, ಎಲ್ಲರೂ ಇದನ್ನು ಅಬ್ಯಾಸ ಮಾಡಿಕೊಳ್ಳಬೇಕೆಂದು ಜಯಪುರ ಸಹಿಪ್ರಾ ಶಾಲೆಯ ಮುಖ್ಯ ಶಿಕ್ಷಕಿ ರೇವತಿ ಹೇಳಿದರು.


ಇದನ್ನೂ ಓದಿ: ಪೌರ ಕಾರ್ಮಿಕರ ಸೇವೆ ಕಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿ; CM ಸಿದ್ದರಾಮಯ್ಯ ಘೋಷಣೆ!


ಜಯಪುರದ ಸಹಿಪ್ರಾ ಶಾಲೆಯ ಮೈಧಾನದಲ್ಲಿ ಸ್ಪಂದನ ಸ್ವಯಂಸೇವಾ ಸಂಸ್ಥೆ, ಐಡಿಯಲ್ ಸ್ಪೋರ್ಟ್ಸ ಮಾರ್ಷಲ್ ಆರ್ಟ್ಸ ಕರಾಟೆ ಅಸೋಸಿಯೇಷನ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಯಪುರ ವಲಯ ಸಹಯೋಗದಲ್ಲಿ ನಡೆದ ಉಚಿತ ಕರಾಟೆ ಹಾಗೂ ಯೋಗ ಶಿಬಿರದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಕೆಲಸ ಮಾಡುವ ಅನಿವಾರ್ಯತೆ ಇದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಕರಾಟೆಯಂತಹ ಆತ್ಮ ರಕ್ಷಣಾ ಕಲೆಯ ಕಲಿಕೆ ಅತ್ಯಗತ್ಯವಾಗಿದ್ದು, ಜಯಪುರದ ಸ್ಪಂದನ ಸಂಸ್ಥೆಯ ಈ ಉಚಿತ ಶಿಬಿರವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಕಳೆದ ಮೂರು ವರ್ಷಗಳಿಂದ ಉಚಿತವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುತ್ತಿರುವ ಸ್ಪಂದನ ಸಂಸ್ಥೆಯ ಸಾಮಾಜಿಕ ಕಾರ್ಯ ಅಭಿನಂದನೀಯ ಎಂದರು.


ಇದನ್ನೂ ಓದಿ: 2PUC ಅಲ್ಲಿ 60% ತೆಗೆದಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ನಾವು ವಿಧ್ಯಾರ್ಥಿಗಳಾಗಿದ್ದಾಗ ದೂರದರ್ಶನದಲ್ಲಿ, ಸಿನಿಮಾಗಳಲ್ಲಿ ಬರುತ್ತಿದ್ದ ಕರಾಟೆ ಪ್ರದರ್ಶನಗಳನ್ನು ನೋಡಿ ನಾವು ಈ ಕಲೆಯನ್ನು ಕಲಿಯಬೇಕೆನ್ನುವ ಕನಸು ಕಾಣುತ್ತಿದ್ದೆವು, ಆದರೆ ಅವಕಾಶಗಳ ಕೊರತೆಯ ಕಾರಣದಿಂದಾಗಿ ನಮಗೆ ಆಗ ಕರಾಟೆ ಕಲಿಯುವ ಅವಕಾಶ ಸಿಗಲಿಲ್ಲ. ಅದನ್ನು ಮನಗಂಡ ನಮ್ಮ ಸಂಸ್ಥೆಯ ಸದಸ್ಯರು ಕರಾಟೆ ಕಲಿಕೆಗಾಗಿ ಉಚಿತ ಶಿಬಿರವನ್ನು ಆಯೋಜಿಸುವ ಕಾರ್ಯವನ್ನು ಕಳೆದ ಮೂರು ವರ್ಷಗಳಿಂದ ಮಾಡುತ್ತಿದ್ದೇವೆ ಎಂದು ಸ್ಪಂದನ ಸ್ವಯಂಸೇವಾ ಸಂಸ್ಥೆ ಹಾಗೂ ಐಡಿಯಲ್ ಸ್ಪೋರ್ಟ್ಸ ಮಾರ್ಷಲ್ ಆರ್ಟ್ಸ ಕರಾಟೆ ಅಸೋಸಿಯೇಷನ್ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಹೇಳಿದರು.


ಇದನ್ನೂ ಓದಿ: ಜಿಲ್ಲೆಯ ಅಂಗನವಾಡಿಯಲ್ಲಿ 10th ಪಾಸ್‌ ಆದವರಿಗೆ ಜಾಬ್; ಅರ್ಜಿ ಸಲ್ಲಿಸುವ ಲಿಂಕ್‌, ದಾಖಲೆ ಇಲ್ಲಿದೆ ನೋಡಿ


ಇನ್ನು ಈ ಕಾರ್ಯಕ್ರಮದಲ್ಲಿ ಜಯಪುರ ಗ್ರಾಮ ಪಂಚಾಯ್ತಿ ಅದ್ಯಕ್ಷ ಕರುಣಾಕರ, ಸ್ಪಂದನ ಸಂಸ್ಥೆಯ ಗೌರವಾದ್ಯಕ್ಷ ಮಣಿಕಂಠನ್ ಕಂದಸ್ವಾಮಿ, ಕರಾಟೆ ಶಿಕ್ಷಕ ಮಣಿ, ಐಡಿಯಲ್ ಸ್ಪೋರ್ಟ್ಸ ಮಾರ್ಷಲ್ ಆರ್ಟ್ಸ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ವಿಶ್ವನಾಥ್ ಎಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಯಪುರ ವಲಯದ ಮೇಲ್ವಿಚಾರಕ ಮನೋಹರ್, ಸ್ಪಂದನ ಸಂಸ್ಥೆಯ ಸುಶ್ಮಿತ ಮಕ್ಕಿಕೊಪ್ಪ, ಹರೀಶ್ ವಿನಾಯಕನಗರ ಹಾಗೂ ಶಿಭಿರಾರ್ಥಿಗಳು ಪೋಷಕರು ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.