ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಆತ್ಮರಕ್ಷಣೆಗಾಗಿ ಕರಾಟೆಯಂತಹ ಕಲೆಯನ್ನು ಕಲಿಯುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಮಲೆನಾಡು ಭಾಗದ ಜನರಿಗೆ ಜಯಪುರದ ಸ್ಪಂದನ ಸ್ವಯಂಸೇವಾ ಸಂಸ್ಥೆ ಉಚಿತ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ; ಕಂದಾಯ ಇಲಾಖೆಯಲ್ಲಿ ಉದ್ಯೋಗ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್, 4 ವರ್ಷ ಮೇಲ್ಪಟ್ಟ ಕರಾಟೆ ತರಬೇತಿ ಪಡೆಯಲಿಚ್ಚಿಸುವ ಬಾಲಕ, ಬಾಲಕಿಯರು, ಹಾಗೂ ವಯಸ್ಕರಿಗಾಗಿ ಹದಿನೈದು ದಿನಗಳ ಉಚಿತ ಕರಾಟೆ ತರಬೇತಿ ಶಿಬಿರವನ್ನು ಜಯಪುರದಲ್ಲಿ ಆಯೋಜಿಸಿದೆ.

ಮೇ 06 ರ ಸೋಮವಾರದಿಂದ ಮೇ 20 ರ ಸೋಮವಾರದವರೆಗೆ ಜಯಪುರದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಪ್ರತಿ ದಿನ ಬೆಳಗ್ಗೆ 7 ರಿಂದ ಬೆಳಗ್ಗೆ 8-30 ರವರೆಗೆ ಶಿಬಿರದಲ್ಲಿ ಕರಾಟೆಯ ವಿವಿಧ ಪ್ರಾಕಾರಗಳಾದ ಬೇಸಿಕ್ ಟೆಕ್ನಿಕ್, ಪಂಚ್ ಟೆಕ್ನಿಕ್, ಕಿಕ್ ಬಾಕ್ಸಿಂಗ್, ದೊಣ್ಣೆ ವರೆಸೆ, ಸೆಲ್ಫ್ ಡಿಫೆನ್ಸ್ ಟೆಕ್ನಿಕ್ ಹಾಗೂ ಯೋಗ, ಸೂರ್ಯ ನಮಸ್ಕಾರಗಳನ್ನು ಕಲಿಸಲಾಗುವುದು.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರು ಐಸ್ ಕ್ರೀಂ, ಫ್ರಿಡ್ಜ್ ವಾಟರ್ ಸೇವಿಸಬಾರದು; ಈ ಸುದ್ದಿಯ ಕುರಿತು ಆರೋಗ್ಯ ಇಲಾಖೆ ಸ್ಪಷ್ಟನೆ
ಮಹಾರಾಷ್ಟ್ರದ ಸಾಂಗ್ಲಿಯ ಕರಾಟೆ ಶಿಕ್ಷಕ ಆರ್ ಮಣಿಕಂಠ್ ಹಾಗೂ ಇತರೆ ಶಿಕ್ಷಕರು ಕರಾಟೆ ಹಾಗೂ ಯೋಗದ ತರಬೇತಿಯನ್ನು ನೀಡಲಿದ್ದು, ಹೆಚ್ಚಿನ ಮಾಹಿತಿಗೆ ಶಿಬಿರ ನಿರ್ವಾಹಕ ವಿಶ್ವನಾಥ್ ಎಸ್ 9481074453 ಹಾಗೂ ಕರಾಟೆ ಶಿಕ್ಷಕ ಮಣಿಕಂಠ ಆರ್ 9923118800, ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ 9449498994, ಅರುಣರಾಜ್ ಎಸ್. ಗುಡ್ಡೆತೋಟ: 8762750706, ಹರೀಶ್: 9440552531 ಸಂಪರ್ಕಿಸಬಹುದಾಗಿದೆ.
ಜಯಪುರದ ಸುತ್ತಮುತ್ತಲಿನ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಶೃಂಗೇರಿ: ಗುರುಕುಲ ಮತ್ತು ಗೋಶಾಲೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ- ಶ್ರೀ ಸಚ್ಚಿದಾನಂದ ಆಚಾರ್ಯ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸನಾತನ ಧರ್ಮದಲ್ಲಿ ಗುರುಕುಲ ಮತ್ತು ಗೋಶಾಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಯುರೋಪ್ ನ ಅದ್ವೈತ ವೇದಾಂತ ಆಶ್ರಮದ ಮುಖ್ಯಸ್ಥ ಸಚ್ಚಿದಾನಂದ ಅಚಾರ್ಯ ಹೇಳಿದರು.
ಇದನ್ನೂ ಓದಿ: ಅನ್ನದಾತರಿಗೆ ಗುಡ್ ನ್ಯೂಸ್;ನ್ಯಾನೋ ಯೂರಿಯಾ ಪ್ಲಸ್ ಮಾರಾಟ ಶುರು
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಸೂರಿನಲ್ಲಿರುವ ಹಳೆಯ ಸಂಪ್ರದಾಯದಂತೆ ನಡೆಸುತ್ತಿರುವ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಗೋಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಗೋವನ್ನು ವಿಶೇಷ ಗೌರವದಿಂದ ತಾಯಿಯ ಸ್ಥಾನ ನೀಡಿ ಪೂಜಿಸಲಾಗುತ್ತದೆ. ಮಲೆನಾಡು ಗಿಡ್ಡ ತಳಿಯ ಜಾನುವಾರುಗಳ ಗೋಶಾಲೆಯನ್ನು ಯೂರೋಪಿನ ಅದ್ವೈತ ವೇದಾಂತ ಆಶ್ರಮದಲ್ಲಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀ ಸಚ್ಚಿದಾನಂದ ಆಚಾರ್ಯ ಅವರ ಶಿಷ್ಯರಾದ ಆಂಡ್ರಿವ್ ಡೇವಿಡ್ ಬೌಲೇ ಮಾತನಾಡಿ, ಗೋವುಗಳ ಸಂತತಿ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಹೊರಬೇಕು. ಗಾವೋ ವಿಶ್ವಸ್ಯ ಮಾತರಃ ಎಂಬ ಮಾತಿನಂತೆ ಗೋಮಾತೆ ಜಗತ್ತಿನ ತಾಯಿ, ಅವಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಇದನ್ನೂ ಓದಿ: ಮಹಿಳೆಯರೇ ಗಮನಿಸಿ; ಉಚಿತ ಟೂಲ್ ಕಿಟ್ ಜೊತೆಗೆ ಸಿಗಲಿದೆ 15,000 ರೂಪಾಯಿ; ಈ ರೀತಿ ಅರ್ಜಿ ಸಲ್ಲಿಸಿ
ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಗೋಶಾಲೆಯ ಮುಖ್ಯಸ್ಥ ರಜಿತ್ ಗೌಡ ಬೇಸೂರ್ ಮಾತನಾಡಿ, ನಮ್ಮ ಮಲೆನಾಡಿನ ಗಿಡ್ಡ ತಳಿಯ ಜಾನುವಾರುಗಳನ್ನು ಯುರೋಪ್ ನ ಆಶ್ರಮದ ಗೋಶಾಲೆಯಲ್ಲಿ ಸಾಕಲು ಅವರು ಯೋಚಿಸಿದ್ದು ಮಲೆನಾಡಿಗರಿಗೆ ಸಂತಸದ ಸುದ್ದಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಭಾರತಿ ಗೋಶಾಲೆಯ ತಿಮ್ಮಪ್ಪ ಗೌಡ ಬೇಸೂರ್, ಶ್ರೀದೇವಿ, ಶಂಕರಾನಂದ್ ವೈಕುಂಠಪುರ ಇದ್ದರು.















