ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಇಂದಿನ ಮಕ್ಕಳನ್ನು ಪುಸ್ತಕದ ಬದನೆಕಾಯಿಯಾಗಿ ಬೆಳೆಸಿ ಹೆಚ್ಚು ಹೆಚ್ಚು ಅಂಕಗಳಿಸುವಿಕೆಗೆ ಪ್ರಾಧಾನ್ಯತೆ ನೀಡುತ್ತಿರುವುದರಿಂದ ಮಕ್ಕಳು ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಜಯಪುರ ಪೊಲೀಸ್ ಉಪ ನಿರೀಕ್ಷಕರಾದ ಅಂಬರೀಷ್ ಹೇಳಿದರು.
ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ

ಜಯಪುರದಲ್ಲಿ ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಜಯಪುರ ಆಶ್ರಯದಲ್ಲಿ ಭಾನುವಾರ ನಡೆದ ಹದಿನೈದು ದಿನಗಳ ದಸರಾ ಕರಾಟೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಅಂಕಗಳಿಸುವಿಕೆಯ ಹಿಂದೆ ಬಿದ್ದಿರುವ ಪರಿಣಾಮ ಸಮಾಜದಲ್ಲಿ ಹೇಗೆ ಬದುಕಬೇಕು, ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬ ಅರಿವನ್ನು ಪಡೆಯಲಾಗದೆ ಸಣ್ಣ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದೆ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕರಾಟೆಯಂತಹ ಕ್ರೀಡೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಪೋಷಕರು ಓದಿನ ಜೊತೆಗೆ ಕರಾಟೆಯಂತಹ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲೇಬೇಕು.


ಇದನ್ನೂ ಓದಿ; ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
ಕರಾಟೆಯು ವ್ಯಕ್ತಿಯ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ ಆತನಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸಾಧಿಸುವ ಛಲವನ್ನು ಹೆಚ್ಚಿಸುತ್ತದೆ, ನಾಯಕತ್ವ ಗುಣವನ್ನು ಬೆಳಿಸುವ ಜೊತೆಗೆ ಸಮಾಜದಲ್ಲಿ ಸಹಭಾಗಿಯಾಗಿ ಹೇಗೆ ಬದುಕಬೇಕು ಎಂಬ ಗುಣವನ್ನು ಕಲಿಸುತ್ತದೆ ಮತ್ತು ಇಲ್ಲಿನ ಶಿಕ್ಷಣ ವ್ಯಕ್ತಿಯಲ್ಲಿರುವ ಸಿಟ್ಟು ಸೇರಿದಂತೆ ಇತರೆ ದುರ್ಗುಣಗಳ ನಿಯಂತ್ರಣವನ್ನು ಕಲಿಸುತ್ತದೆ. ಜಯಪುರದ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ಉತ್ತಮ ಕೆಲಸ ಮಾಡುತ್ತಿದ್ದು, ಜನತೆ ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ; ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್; 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!; ಸೆಪ್ಟೆಂಬರ್ ತಿಂಗಳ ಹಣದ ಕುರಿತು ಬಿಗ್ ಅಪ್ಡೇಟ್
ಕರಾಟೆಯ ಶಿಕ್ಷಣ ಇಂದಿನ ಯುವ ಜನತೆಗೆ ಅತ್ಯಗತ್ಯವಾಗಿದ್ದು, ಹೆಣ್ಣು ಮಕ್ಕಳಿಗೆ ದುರ್ಜನರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆ ಅನಿವಾರ್ಯ ಸಾಧನವಾಗಿದೆ. ಹೆಚ್ಚು ಹೆಚ್ಚು ಮಕ್ಕಳು ಕರಾಟೆ ಕಲಿಯುವಿಕೆಗೆ ಆಸಕ್ತಿವಹಿಸಬೇಕು ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎ ಸಿ ವಜ್ರಪ್ಪ ಹೇಳಿದರು.
ಇದನ್ನೂ ಓದಿ; ಮನೆ ಮಾಲೀಕರ ಗಮನಕ್ಕೆ; ಮನೆ ಬಾಡಿಗೆಗೆ ಸರ್ಕಾರದ ಹೊಸ ನಿಯಮ; ಏನಿದೆ ಹೊಸ ರೂಲ್ಸ್, ಇಲ್ಲಿದೆ ಡಿಟೈಲ್ಸ್
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗುತ್ತಿದೆಯಾದರೂ, ನೈತಿಕತೆ, ಸಾಮಾಜಿಕ ಮೌಲ್ಯಗಳನ್ನು ಹೊಂದಿದ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಸಮಾಜದಲ್ಲಿ ಮಹಿಳಾ ದೌರ್ಜನ್ಯ, ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಇದನ್ನೆಲ್ಲ ಎದುರಿಸಲು ಕರಾಟೆಯಂತಹ ಆತ್ಮ ರಕ್ಷಣಾ ಕಲೆಗಳನ್ನು ಕಲಿತು ಯುವ ಜನತೆ ಸಭಲರಾಗಬೇಕಿದೆ. ಈ ಕಾರಣಕ್ಕಾಗಿ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ದಸರಾ ಕರಾಟೆ ಶಿಬಿರವನ್ನು ಆಯೋಜಿಸಿದೆ ಎಂದು ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಜಯಪುರದ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಹೇಳಿದರು.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?















