ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಷೇರು ಮಾರ್ಕೆಟ್ ಹೆಸರಲ್ಲಿ ಬರೋಬ್ಬರಿ 3 ಕೋಟಿ 27 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಖದೀಮರು ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆಯೊಂದು ತೆರೆದು ಬಳಿಕ ವಾಟ್ಸಾಪ್ನಲ್ಲಿ ಬಂದ ಲೋಗೋ ನಂಬಿ ಶೃಂಗೇರಿ ಮೂಲದ ವ್ಯಕ್ತಿ ಮೋಸ ಹೋಗಿದ್ದಾರೆ. ನೀವು ಹೂಡಿಕೆ ಮಾಡಿದ ಹಣ ಲಾಭ ಬಂದಿದೆ. ನಿಮ್ಮ ಖಾತೆಯಲ್ಲಿ 9 ಕೋಟಿ ರೂ ಹಣವಿದ್ದು ಅದನ್ನ ಪಡೆಯಲು 1 ಕೋಟಿ 9 ಲಕ್ಷ ರೂ ಕಮಿಷನ್ ಹಾಕುವಂತೆ ವಂಚಕರು ಬೇಡಿಕೆ ಇಟ್ಟಿದ್ದಾರೆ. ನಂತರ ಹಂತ ಹಂತವಾಗಿ 3 ಕೋಟಿ 27 ಲಕ್ಷ ರೂ. ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಮಹಾರಾಷ್ಟ್ರದ ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ವೇಳೆ ವಂಚನೆ ಬಯಲಾಗಿದೆ.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!
* ಈ ರೀತಿಯ ಘಟನೆ ನಡೆದಿದ್ದರೆ ತಕ್ಷಣ ಮಾಡಬೇಕಾದ ಕ್ರಮಗಳು:
1. ಸೈಬರ್ ಕ್ರೈಮ್ ಪೋರ್ಟಲ್ನಲ್ಲಿ ದೂರು ಸಲ್ಲಿಸಿ: (https://cybercrime.gov.in)
2. ರಾಷ್ಟ್ರೀಯ ಹೆಲ್ಪಲೈನ್ ಸಂಖ್ಯೆ: 1930 ಗೆ ಕರೆ ಮಾಡಿ.
3. ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ.












