ಬಾಳೆಹೊನ್ನೂರಿನಲ್ಲಿ ಸಂಚಾರಿ ನಿಯಮ ಬ್ರೇಕ್‌ ಮಾಡಿದ್ರೆ ಬೆಂಗಳೂರು ಮಾದರಿಯಲ್ಲಿ ಬೀಳುತ್ತೆ ಫೈನ್

ಬಾಳೆಹೊನ್ನೂರಿನಲ್ಲಿ ರೂಲ್ಸ್ ಬ್ರೇಕ್ ಮಾಡೋರೆ ಇನ್ಮುಂದೆ ಎಚ್ಚರವಾಗಿರಬೇಕಿದೆ. ಯಾಕೆಂದರೆ ರೂಲ್ಸ್ ಬ್ರೇಕ್ ಮಾಡುವವರ ಮೇಲೆ ಪೊಲೀಸರು ಹದ್ದಿನಕಣ್ಣಿಡಲು ಮುಂದಾಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ವಾಹನದ ಮೇಲೆ ಫೈನ್ ಬೀಳೋದು ಪಕ್ಕಾ.


ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ


ಪೊಲೀಸ್ರು ಇಲ್ಲ ಅಂತ ಹೆಲ್ಮೇಟ್‌ ಇಲ್ದೆ ಹೋಗ್ತೀರಾ? ಕಾರಿನಲ್ಲಿ ಹೋಗ್ಬೇಕಾದ್ರೆ ಸೀಟ್‌ ಬೆಲ್ಟ್‌ ಹಾಕಲ್ವಾ ಅಥವಾ ಯಾರೂ ಪೊಲೀಸರಿಲ್ಲ ಅಂತ ತ್ರಿಬಲ್ ರೈಡಿಂಗ್ ಮಾಡಿದ್ರೆ ಮೂರು ಜನರ ಫೋಟೋ ಸಮೇತ ಫೈನ್ ಬೀಳುತ್ತೆ ಎಚ್ಚರ.

ಬೆಂಗಳೂರು ಮಾದರಿಯಲ್ಲಿಯೇ ಬಾಳೆಹೊನ್ನೂರು ಪೊಲೀಸರು ಫುಲ್ ಅಪ್ಡೇಟ್ ಆಗಿದ್ದು, ತ್ರಿಬಲ್ ರೈಡಿಂಗ್ ಇದ್ರೆ ಮೂರು ಜನರ ಫೋಟೋ, ಸೀಟ್ ಬೆಲ್ಟ್ ಹಾಕದಿದ್ರೆ, ಹೆಲ್ಮೇಟ್‌ ಹಾಕ್ದೆ ಈ ರೀತಿ ರೂಲ್ಸ್ ಬ್ರೇಕ್ ಮಾಡಿದ್ರೆ ಫೋಟೋ ಸಮೇತ ಫೈನ್ ಹಾಕ್ತಾರೆ. ಬಾಳೆಹೊನ್ನೂರು ಪಟ್ಟಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಪೊಲೀಸರು ಅತ್ಯಾದುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಈ ಪ್ರಯೋಗ ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.

18 ಸಾವಿರ ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಹೊರನಾಡು, ಶೃಂಗೇರಿ, ನರಸಿಂಹರಾಜಪುರ, ಕೊಪ್ಪಕ್ಕೆ ಕೇಂದ್ರ ಬಿಂದು. ಹೀಗಾಗಿ ನಿತ್ಯವೂ ಇಲ್ಲಿ ಜನರು ಮತ್ತು ವಾಹನಗಳ ಓಡಾಟ ಹೆಚ್ಚು. ಆದ್ದರಿಂದ ಠಾಣಾಧಿಕಾರಿ ರವೀಶ್ ನೇತೃತ್ವದಲ್ಲಿ ನರಸಿಂಹರಾಜಪುರ ರಸ್ತೆಯ ಚೌಡಿಕೆರೆ, ಕೊಪ್ಪ ರಸ್ತೆಯ ರಂಭಾಪುರಿ ಪೆಟ್ರೋಲ್ ಬಂಕ್, ಕಳಸ, ಚಿಕ್ಕಮಗಳೂರಿಗೆ ತೆರಳುವ ರೋಟರಿ ವೃತ್ತ ಹಾಗೂ ಪಟ್ಟಣದ ಹೃದಯ ಭಾಗದ ಜೇಸಿ ವೃತ್ತದಲ್ಲಿ ಒಟ್ಟು 6 ಕ್ಯಾಮೆರಾ ಅಳವಡಿಸಲಾಗಿದೆ.


ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!


ಈ ಮಾರ್ಗದಲ್ಲಿ ಸಾಗಿದಾಗ ಬೈಕ್‌ನಲ್ಲಿ ಮೂವರ ಸವಾರಿ, ಸೀಟ್ ಬೆಲ್ಟ್ ಹಾಕಿಕೊಳ್ಳದೆ ವಾಹನದಲ್ಲಿ ಪ್ರಯಾಣ, ಅತಿವೇಗ, ಹೆಟ್ ರಹಿತ ಚಾಲನೆ, ಎಲ್ಲೆಂದರಲ್ಲಿ ಕಸ ಹಾಕುವುದನ್ನು ಗುರುತಿಸುತ್ತವೆ. ಇದೀಗ ರೂಲ್ಸ್‌ ಬ್ರೇಕ್‌ ಮಾಡಿದವರ ಮೇಲೆ 500 ರೂ ದಂಡ ವಿಧಿಸಿ ನೋಟಿಸ್‌ ನೀಡಲಾಗಿದೆ. ಒಂದು ವೇಳೆ ಫೈನ್ ಕಟ್ಟಿಲ್ಲ ಅಂದ್ರೆ ನ್ಯಾಯಾಲಯಕ್ಕೆ ಸಂಚಾರಿ ನಿಮಯ ಉಲ್ಲಂಘನೆಯಾದ ಬಗ್ಗೆ ಲಘು ಪ್ರಕರವನ್ನ ಸಲ್ಲಿಸಲಾಗುತ್ತದೆ.

“ಅಪರಾಧ ಕಾನೂನುಬಾಹಿರ ತಡೆಗಟ್ಟಲು, ಚಟುವಟಿಕೆ ಹತ್ತಿಕ್ಕಲು ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಈ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ಜಾಗವನ್ನು ಬಣ್ಣದಲ್ಲಿ ಗುರುತಿಸಲಾಗುವುದು. ವೇಗ ನಿಯಂತ್ರಿಸಲು ರಬ್ಬರ್ ಹಂಪ್ ಹಾಕಲು ನಿರ್ಧರಿಸಲಾಗಿದೆ”– ರವೀಶ್, ಬಾಳೆಹೊನ್ನೂರು ಠಾಣಾಧಿಕಾರಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.