ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ತಂಡವೊಂದು ಗ್ರಾಮೀಣ ಭಾಗದಲ್ಲಿ ಮನೆಮನೆಗಳಿಗೆ ತೆರಳಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ

ಒಂಟಿ ಮನೆಗಳು, ಮಹಿಳೆಯರೇ ಟಾರ್ಗೆಟ್!:
ಒಂಟಿ ಮನೆಗಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಓಡಾಟ ನಡೆಸುವ ಈ ತಂಡ ಮನೆಯವರಿಗೆ ಇಲ್ಲಸಲ್ಲದ ಭಯ ಹುಟ್ಟಿಸಿ ಆ ಪೂಜೆ ಮಾಡಬೇಕು, ಈ ಪೂಜೆ ಮಾಡಬೇಕು ಎಂದೆಲ್ಲ ಹಣವನ್ನು ಪೀಕುವ ಕೆಲಸ ಮಾಡುತ್ತಿದ್ದಾರೆ.
ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿ ಮನೆಗಳಿಗೆ ನುಗ್ತಿರೋ ನಾಲ್ವರು, ಮನೆಯವರು ಬಾಗಿಲು ತೆಗೆಯೋವರೆಗೂ ಹೋಗಲ್ಲ. ಮನೆ ಹಿಂದೆ-ಮುಂದೆ ಎಲ್ಲಾ ಸುತ್ತಾಡುತ್ತಾರೆ. ಗೌಡ್ರೆ, ಅಮ್ಮ, ಅಮ್ಮಾವ್ರೆ, ಅವ್ವ, ಸರ್, ಮಾಲೀಕರೇ, ಅಪ್ಪಾಜಿ ಅಂತೆಲ್ಲಾ ಬರೋವರ್ಗೂ ಕೂಗ್ತಾರೆ.
ಇದನ್ನೂ ಓದಿ: ಈ ಯೋಜನೆಯಲ್ಲಿ ಶೇ. 60% ರಷ್ಟು ಸಹಾಯಧನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ದೋಷ ಪರಿಹಾರ ನೆಪದಲ್ಲಿ ಹಣಕ್ಕೆ ಬೇಡಿಕೆ:
ಜನವರಿ 3 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಬಾಳೆಹಳ್ಳಿ ರಮೇಶ್ ಗೌಡ ಮತ್ತು ಬಿದರಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಿ. ಎಸ್. ನಾಗರಾಜು ಅವರ ಮನೆಗೆ ಬಂದಿದ್ದ ನಾಲ್ವರು, ಮನೆಯಲ್ಲಿದ್ದ ಮಹಿಳೆಯರಿಗೆ ನಿಮ್ಮ ಯಜಮಾನನಿಗೆ ಕಂಟಕವಿದೆ. ಅಷ್ಟು ದಿನದಲ್ಲಿ ಹಾಗಾಗುತ್ತೆ, ಹೀಗಾಗುತ್ತೇ, ಕಂಟಕ ಪರಿಹಾರಕ್ಕೆ ಪೂಜೆ ಮಾಡಿಸಬೇಕು. ಅದಕ್ಕೆ ಹತ್ತು ಸಾವಿರ, ಇಪ್ಪತ್ತು ಸಾವಿರ ಆಗುತ್ತೆ. ಅಷ್ಟು ಕೊಟ್ಟರೆ ದೋಷ ಪರಿಹಾರ ಮಾಡಿಕೊಡುತ್ತೇವೆ ಎಂದೆಲ್ಲಾ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬಾಳೆಹಳ್ಳಿ ರಮೇಶ್ ಗೌಡ ಎಂಬುವವರ ಮನೆಯಲ್ಲಿ ಹೋಗಿ ಅಂಗಳದಲ್ಲಿದ್ದ ಕೆಲಸದವರ ಬಳಿ ಈ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂದೆಲ್ಲಾ ವಿಚಾರಿಸಿದ್ದಾರೆ. ಬಿದರಹಳ್ಳಿಯ ಕೃಷಿಕರೊಬ್ಬರ ಮನೆಯಲ್ಲಿ ನೂರು ರೂಪಾಯಿ ಕೊಟ್ಟಾಗ ಅದನ್ನು ಅಲ್ಲಿಯೇ ಬಿಸಾಕಿ ಹೋಗಿದ್ದಾರೆ.
ಇದನ್ನೂ ಓದಿ: SBI ಯಲ್ಲಿ ಜಾಬ್ ಆಫರ್; 17,900 ಸಂಬಳ, ವಿದ್ಯಾರ್ಹತೆ, ಅರ್ಜಿ ಲಿಂಕ್ ಇಲ್ಲಿದೆ
ಬಾಳೆಹಳ್ಳಿ ನಾಗರಾಜು ಅವರ ಮನೆಯಲ್ಲಿ ನಾಗರಾಜು ಅವರ ಪತ್ನಿಗೆ ನಿಮ್ಮ ಯಜಮಾನರಿಗೆ ಹಾಗಾಗುತ್ತೆ, ಹೀಗಾಗುತ್ತೆ ಕಂಟಕವಿದೆ ಎಂದು ಹೆದರಿಸಿ ದೋಷ ಪರಿಹಾರಕ್ಕೆ 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಮಯದಲ್ಲಿ ಅವರ ಮಗ ಬಂದು ಹೆದರಿಸಿದ ತಕ್ಷಣ ಮನೆಯಿಂದ ಕಾಲ್ಕಿತ್ತಿದ್ದಾರೆ.
ಮನೆಗಳಿಗೆ ಈ ಗುಂಪು ಬರುವುದು, ಹೋಗುವುದು, ಮನೆ ಬಾಗಿಲು ತೆಗೆದ ತಕ್ಷಣ ಏಕಾಏಕಿ ಮನೆಯೊಳಗೆ ನುಗ್ಗುವುದು ಈ ದೃಶ್ಯಗಳೆಲ್ಲ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಜನ ಕಂಡ ಕೂಡಲೇ ತಲೆಗೆ ಗೌನ್ ಹಾಕಿ ನಿಮ್ಮ ಮನೆಗೆ ಮೈಲಾರಲಿಂಗ ಬಂದಾನಾ ಎಂದು ಮನೆಯವ್ರು ಬಾಗಿಲು ತೆಗೆದ ಕೂಡಲೇ ಸೀದಾ ಒಳಗೆ ಹೋಗ್ತಿರೋ ಇವರು ಮಹಿಳೆಯರಿಗೆ ದೇವರು, ದಿಂಡಿರು ಅಂತ ಹೆದರಿಸಿ ಹಣ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಇ-ಖಾತೆ ಪಡೆಯುವವರ ಗಮನಕ್ಕೆ; ಬಿಗ್ ಅಪ್ಡೇಟ್ ಇಲ್ಲಿದೆ ನೋಡಿ
ಮಲೆನಾಡಿನಲ್ಲಿ ಇಂತಹ ತಂಡ ಓಡಾಟ:
ಇಂತಹ ತಂಡ ಮಲೆನಾಡಿನ ಎಲ್ಲಾ ಕಡೆ ಓಡಾಡುತ್ತಿದ್ದು, ಮೈಲಾರಲಿಂಗನ ವೇಷದಲ್ಲಿ ಬಂದು ಮನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದೆ ಬೇರೆ ರೀತಿಯ ಕೃತ್ಯಗಳಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇವರು ಎಲ್ಲೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದು, ಪೊಲೀಸರು ಇಂತಹ ವೇಷದಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮನೆಯವರು ಸಹ ಇಂತಹವರು ಬಂದಾಗ ಎಚ್ಚರಿಕೆಯಿಂದ ಇದ್ದು, ಆದಷ್ಟು ಮನೆ ಬಾಗಿಲನ್ನು ತೆರೆಯದೇ ಹಾಗೆಯೇ ಕಳುಹಿಸುವುದು ಒಳಿತು. (ವರದಿ- ತನು ಕೊಟ್ಟಿಗೆಹಾರ)












