ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದು ಮಲೆನಾಡಿನ ಕೀರ್ತಿ ಹೆಚ್ಚಿಸಿದ ಕೊಪ್ಪ ತಾಲೂಕಿನ ಶಾನುವಳ್ಳಿಯ ಕು. ಸ್ನೇಹಾ ಸಾಧನೆಗೆ ಶೃಂಗೇರಿ ಜನತೆಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
2026 ರಲ್ಲಿ ನಡೆದ 20 ನೇ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಕು. ಸ್ನೇಹಾ ಅವರು ಶೃಂಗೇರಿ ತಾಲ್ಲೂಕಿನ ತೊರೆಹಡ್ಲು ಶಾಲೆಯಲ್ಲಿ ಓದಿದವರಾಗಿದ್ದಾರೆ.

ದಿನಾಂಕ 25.10.2026 ರ ಭಾನುವಾರ ಸಂಜೆ 4.00 ಗಂಟೆಗೆ ಶಾರದಾಕಂಫರ್ಟ್ಸ್ ಮುಂಬಾಗದಿಂದ ಮೆರವಣಿಗೆ ಪ್ರಾರಂಭವಾಗಿ ಶೃಂಗೇರಿಯ ಪ್ರಮುಖ ಬೀದಿಯ ಮೂಲಕ ಶ್ರೀ ಗೌರಿಶಂಕರ ಸಭಾ ಭವನದವರೆಗೆ ತಲುಪಿ ಅಲ್ಲಿ ಸಮಾರಂಭ ನಡೆಯುವುದಾಗಿ ಕು ಸ್ನೇಹಾ ಅಭಿನಂದನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಸಾರ್ವಜನಿಕರು ಭಾಗವಹಿಸಬೇಕಾಗಿ ಕರೆ ನೀಡಿದ್ದಾರೆ













