ಆನೆ ಶಿಬಿರದಲ್ಲಿ ಆನೆಗಳಿಗಿಲ್ಲ ರಕ್ಷಣೆ, ವಿಕ್ರಾಂತ ಆನೆಗೆ ವಿಚಿತ್ರವಾಗಿ ದೈಹಿಕ ಹಿಂಸೆ!?

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸುತ್ತ ಮುತ್ತಲಿನ ಪರಿಸರದಲ್ಲಿ ರಾಜನಂತೆ ಇದ್ದ ವಿಕ್ರಾಂತ್ ಆನೆಯನ್ನು ಇತ್ತೀಚೆಗೆ ಸೆರೆ ಹಿಡಿದು ಸಕ್ಕರೆಬೈಲು ಆನೆ ಶಿಬಿರದ ಕ್ರಾಲ್ ನಲ್ಲಿ ಬಂಧಿಸಿ ಅವನನ್ನು ಪಳಗಿಸಿದ ರೀತಿ ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತದೆ.


ಇದನ್ನೂ ಓದಿ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ಒಂದು ಕಾಡಾನೆಯನ್ನು ಅತ್ಯಂತ ಚಿತ್ರ ಹಿಂಸೆ ಕೊಟ್ಟು ಪಳಗಿಸುವ ಅಗತ್ಯ ಏನು ಇದೆ. ಅದರಲ್ಲಿ ಈ ರೀತಿ ಹೊಡೆದು ಬಡೆದು ಆನೆಗೆ ನರಕಯಾತನೆ ತೋರಿಸಿ ಅದನ್ನು ಜೀವಂತ ಶವ ಮಾಡುವುದು ಅಮಾನವೀಯ ಘಟನೆ ಮತ್ತು ಕ್ರೌರ್ಯದ ಪರಮಾವಧಿ ಅಲ್ಲದೆ ಇನ್ನೇನು? ವಿಕ್ರಾಂತ ಕಾಲಿನಲ್ಲಿ ಗಾಯ ರಕ್ತ ಕಿವು ಬರುತ್ತಿದ್ದು, ನರಕಯಾತನೆ ಅನುಭವಿಸುತ್ತಿದ್ದಾನೆ.

ಸಕ್ಕರೆಬೈಲು ಆನೆ ಶಿಬಿರದಲ್ಲಿ ಆನೆಗಳಿಗಿಲ್ಲ ರಕ್ಷಣೆ, ವಿಕ್ರಾಂತ ಆನೆಗೆ ವಿಚಿತ್ರವಾಗಿ ದೈಹಿಕ ಹಿಂಸೆ!
* ಕಾಡಿನಲ್ಲಿ ದಷ್ಟಪುಷ್ಟವಾಗಿ ಸಮೃದ್ಧಿಯಾಗಿ ಇದ್ದ ವಿಕ್ರಾಂತ.
* ಸಾಯುವ ಅಂತಕ್ಕೆ ತಲುಪಿದ ವಿಕ್ರಾಂತ.
* ಬೆನ್ನು ಬಾಗಿ ಬಡಕಲು ಅದ ವಿಕ್ರಾಂತ.
* ಮೈಯೆಲ್ಲಾ ಗಾಯವಾಗಿ ನೋವಿನ ಮಾಡುವಲ್ಲಿ ಇರುವ ವಿಕ್ರಾಂತ.
* ಆನೆ ಪಾಳಗಿಸುವುದೇ ನರಕಯಾತನೆ, ಮತ್ತೆ ಮರು ಹುಟ್ಟು ಪಡೆಯುವ ಕಾಡಾನೆ, ಹೆಚ್ಚು ಕಮ್ಮಿ ಆದರೆ ಸಾವು ಖಚಿತ.
* ಸಕ್ಕರೆಬೈಲು ಆನೆ ಬಿಡಾರದಲ್ಲಿ ಇವೆ ಸಾಕಷ್ಟು ರೋಗರುಜಿನ ಆನೆಗಳು, ನಿರ್ವಹಣೆ ಸರಿ ಇಲ್ಲದೆ ಇಲ್ಲಿವರೆಗೂ 20ಕ್ಕು ಹೆಚ್ಚು ಆನೆಗಳು ಬಲಿ.
* ಸಕ್ಕರೆಬೈಲು ಆನೆ ಬಿಡಾರಕ್ಕೆ ಬೇಕು ವೈಜ್ಞಾನಿಕ ಆರೋಗ್ಯ ಪೂರ್ಣ ವ್ಯವಸ್ಥೆ
* ಹಿಂದಿನ ಪಶುವೈದ್ಯ ವಿನಯ್ ಅಜ್ಞಾನದಿಂದ ಹಲವು ಆನೆಗಳ ಸಾವು, ಅಕ್ರಮ ಚಟುವಟಿಕೆ, ಭ್ರಷ್ಟಾಚಾರ, ಪೂರ್ಣ ತನಿಖೆ ಆಗಬೇಕು.


ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ 5000 ರೂ; ಅರ್ಜಿ ಸಲ್ಲಿಸುವುದು ಹೇಗೆ?


ಸಕ್ಕರೆಬೈಲು ಆನೆ ಶಿಬಿರದಲ್ಲಿ ಆನೆಗಳಿಗೆ ಇಲ್ಲ ರಕ್ಷಣೆ!:
ಈಗಾಗಲೇ ಈ ಶಿಬಿರದಲ್ಲಿ 20ಕ್ಕು ಹೆಚ್ಚು ಆನೆಗಳು ಮೃತಪಟ್ಟಿವೆ. ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿದ ಬಹುತೇಕ ಆನೆಗಳನ್ನು ಇಲ್ಲಿ ತಂದು ಪಳಗಿಸುವ ಕಾರ್ಯ ಆಗುತ್ತಿದೆ. ಪಾಪದ ಎಷ್ಟೋ ಆನೆಗಳನ್ನು ಇಲ್ಲಿ ತಂದು ಸರಿಯಾಗಿ ನೋಡಿಕೊಳ್ಳದೆ ಆನೆಗಳು ಸತ್ತಿವೆ.

ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಒತ್ತಾಯ ಮಾಡಿದ್ದಾರೆ. – ವೀರೇಶ್, ಪರಿಸರವಾದಿ


ಇದನ್ನೂ ಓದಿ: ಬುಧನ ಡಬಲ್ ಗೋಚಾರ; ಈ 4 ರಾಶಿಗೆ ಡಬಲ್ ಧಮಾಕ!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.